You are here
Home > Koppal News > ವಿವಿಧ ವಾರ್ಡಗಳಲ್ಲಿ ಇಕ್ಬಾಲ್ ಅನ್ಸಾರಿ ಮತಯಾಚನೆ

ವಿವಿಧ ವಾರ್ಡಗಳಲ್ಲಿ ಇಕ್ಬಾಲ್ ಅನ್ಸಾರಿ ಮತಯಾಚನೆ

ಗಂಗಾವತಿ : ಗಂಗಾವತಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಪರ ಹಿರಿಯ ನಾಯಕಿ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು ಹಾಗೂ ನಗರಸಭೆಯ ಸದಸ್ಯರು ವಿವಿಧ ವಾರ್ಡಗಳಲ್ಲಿ ಮತಯಾಚನೆ ಮಾಡಿದರು. ೧೪,೧೫,೧೯ ಮತ್ತು ೨೦ನೇ ವಾರ್ಡಿನಲ್ಲಿ ಮತಯಾಚನೆ ಮಾಡಿದ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು ಮಾತನಾಡಿ ಅಭಿವೃದ್ದಿಗಾಗಿ ಅನ್ಸಾರಿಯವರಿಗೆ ಮತ ನೀಡಿ ಆಯ್ಕೆ ಮಾಡಿ, ಆಮೀಷಗಳಿಗೆ ಒಳಗಾಗದೆ  ಜಿಡ್ಡುಗಟ್ಟಿದ ರಾಜಕೀಯ ಪರಿಸ್ಥಿತಿಯನ್ನು ಬದಲಾಯಿಸಲು ಇಕ್ಬಾಲ್ ಅನ್ಸಾರಿಯವರನ್ನು ಬಹುಮತದಿಂದ ಆಯ್ಕೆ ಮಾಡಿ ಎಂದು ವಿನಂತಿಸಿಕೊಂಡರು.
ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಮಾತನಾಡಿ ಗಂಗಾವತಿ ನಗರದಂತೆಯೇ ಇಡೀ ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದರ ಬಗ್ಗೆ ಮತದಾರರಿಗೆ ವಿವರಿಸಿದರು. ಅವುಗಳ ಜಾರಿಗಾಗಿ ತಮ್ಮನ್ನು ಆಯ್ಕೆ ಮಾಡಲು ವಿನಂತಿಸಿಕೊಂಡರು. ಕಣದಲ್ಲಿರುವ ಉಳಿದ ಅಭ್ಯರ್ಥಿಗಳು ನನ್ನ ವಿರುದ್ದ ಟೀಕೆ ಮಾಡಲು ಯಾವುದೇ ವಿಷಯಗಳು ಇಲ್ಲದಿರುವುದರಿಂದ ಜಾತೀಯತೆಯ ವಿಷಬೀಜ ಬಿತ್ತಲು ಹೊರಟಿದ್ದಾರೆ. ಸಮಾಜದ ಕೋಮಸಾಮರಸ್ಯ ಕದಡಲು ಯತ್ನಿಸುತ್ತಿದ್ದಾರೆ. ಅಂತವರನ್ನು ಧಿಕ್ಕರಿಸಿ ಸಮಾಜಮುಖಿ ಕಾರ್‍ಯದಲ್ಲಿ ತೊಡಗಿರುವ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದು ವಿನಂತಿಸಿಕೊಂಡರು. ಮತದಾನ ಎಲ್ಲರ ಹಕ್ಕು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು. 
ಇದೇ ಸಂದರ್ಭದಲ್ಲಿ ನಿವೃತ್ತ ಉಪತಹಶೀಲ್ದಾರರಾದ ವೀರಭದ್ರಪ್ಪ ಪತ್ತಾರ ಹಾಗೂ ಇತರರು ಜೆಡಿಎಸ್ ಸೇರ್ಪಡೆಯಾದರು. ಜೆಡಿಎಸ್ ಜಿಲ್ಲಾಧ್ಯಕ್ಷ  ಎಸ್.ಬಿ.ಖಾದ್ರಿ, ತಾಲೂಕ ಅಧ್ಯಕ್ಷ ಯಮನಪ್ಪ ವಿಠಲಾಪೂರ, ನಗರಸಭೆ ಸದಸ್ಯರಾದ ಶ್ರೀಮತಿ ಸಂತೋಷಜಿ ,ಶಾಮೀದ ಮನಿಯಾರ್, ಶೇಕ ನಬಿ ಮುಖಂಡರಾದ ವೀರಣ್ಣ ಡಗ್ಗಿ,ಆರತಿ ತಿಪ್ಪಣ್ಣ ಹಾಗೂ ವಾರ್ಡಿನ ಹಿರಿಯರು,ಕಾರ್‍ಯಕರ್ತರು,ಅಭಿಮಾನಿಗಳು ಉಪಸ್ಥಿತರಿದ್ದರು. 

Leave a Reply

Top