You are here
Home > Koppal News > ಎಸ್.ಎಸ್.ಎಲ್.ಸಿ. ಸಮಾಜ ವಿಜ್ಞಾನ ಪರೀಕ್ಷೆ : ೬೯೦ ವಿದ್ಯಾರ್ಥಿಗಳು ಗೈರು

ಎಸ್.ಎಸ್.ಎಲ್.ಸಿ. ಸಮಾಜ ವಿಜ್ಞಾನ ಪರೀಕ್ಷೆ : ೬೯೦ ವಿದ್ಯಾರ್ಥಿಗಳು ಗೈರು

 ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಬುಧವಾರ ನಡೆದ ಸಮಾಜವಿಜ್ಞಾನ ವಿಷಯದ ಪರೀಕ್ಷೆಗೆ ಜಿಲ್ಲೆಯ ೧೫೫೧೩ ವಿದ್ಯಾರ್ಥಿಗಳು ಹಾಜರಾಗಿದ್ದು, ೬೯೦ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.  ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
  ಎಸ್.ಎಸ್.ಎಲ್.ಸಿ. ಪರೀಕ್ಷೆಯ ಸಮಾಜ ವಿಜ್ಞಾನ ವಿಷಯಕ್ಕೆ ಬಾಲಕರು- ೮೮೨೨, ಬಾಲಕಿಯರು- ೭೩೮೧ ಸೇರಿದಂತೆ ಒಟ್ಟು ೧೬೨೦೩ ವಿದ್ಯಾರ್ಥಿಗಳು ದಾಖಲಾಗಿದ್ದರು.  ಇದರಲ್ಲಿ ಬಾಲಕರು- ೮೩೬೯, ಬಾಲಕಿಯರು- ೭೧೪೪ ಸೇರಿದಂತೆ ಒಟ್ಟು ೧೫೫೧೩ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದು,   ೪೫೩-ಬಾಲಕರು, ೨೩೭- ಬಾಲಕಿಯರು ಗೈರು ಹಾಜರಾಗಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ ೫೦೮೨ ವಿದ್ಯಾರ್ಥಿಗಳ ಪೈಕಿ ೪೮೨೨ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ ೫೨೩೭ ವಿದ್ಯಾರ್ಥಿಗಳ ಪೈಕಿ ೫೦೩೧, ಕುಷ್ಟಗಿ ತಾಲೂಕಿನಲ್ಲಿ ೨೭೬೪ ವಿದ್ಯಾರ್ಥಿಗಳ ಪೈಕಿ ೨೬೬೭, ಯಲಬುರ್ಗಾ ತಾಲೂಕಿನಲ್ಲಿ ೩೧೨೦ ವಿದ್ಯಾರ್ಥಿಗಳ ಪೈಕಿ ೨೯೯೩ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.  ಕೊಪ್ಪಳ ತಾಲೂಕಿ೮ನಲ್ಲಿ ೨೬೦, ಗಂಗಾವತಿ- ೨೦೬, ಕುಷ್ಟಗಿ-೯೭ ಮತ್ತು ಯಲಬುರ್ಗಾ ತಾಲೂಕಿನಲ್ಲಿ ೧೨೭ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

Leave a Reply

Top