ಕಾಂಗ್ರೇಸ್ ಮೇಲೆ ಬಿಜೆಪಿ ದ್ವೇಷದ ರಾಜಕಾರಣ ಮಾಡುವುದನ್ನು ಕೈಬಿಡಲಿ – ಸೈಯದ್.

ಕೊಪ್ಪಳ,ಡಿ.೧೯ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ವ್ಯವಹಾರದಲ್ಲಿ ಅಕ್ರಮ ಆಸ್ತಿ ಗಳಿಕೆ ಮಾಡಿರುತ್ತಾರೆಂದು ಆರೋಪಿಸಿ ಬಿಜೆಪಿ ಮುಖಂಡ ಸುಭ್ರಮಣ್ಯಂ ಸ್ವಾಮಿ ಎಂಬುವರ ವ್ಯರ್ತ ಆರೋಪದ ಅಡಿಯಲ್ಲಿ ಕೋರ್ಟಿನಲ್ಲಿ ಪ್ರಕರಣ ದಾಖಲಿಸಲು ಪ್ರಯತ್ನ ಮಾಡಿ ನಮ್ಮ ನಾಯಕರನ್ನು ಅನಾವಶಕವಾಗಿ ಅವರ ಹೆಸರಿನ ಮೇಲೆ ಕಪ್ಪು ಚುಕ್ಕೆ ತರುವಂತಹಕೆಲಸಕ್ಕೆ ಕೈಹಾಕಿರುವ ಬಿಜೆಪಿ ಪಕ್ಷದವರು ಕಾಂಗ್ರೇಸ್ ಪಕ್ಷದವರ ಮೇಲೆ ದ್ವೇಷದ ರಾಜಕಾರಣ ಮಾಡುವುದನ್ನು ಮೊದಲು ಕೈಬಿಡಲಿ ಎಂದು ಕಾಂಗ್ರೇಸ್ ಮುಖಂಡ ಕೆ.ಎಂ. ಸೈಯದ್ ಹೇಳಿದರು. ಅವರ ಶನಿವಾರ ನಗರದ ಅಶೋಕ ಸರ್ಕಲ್ ಬಳಿ ಯುವ ಕಾಂಗ್ರೇಸ್ ಕಾರ್ಯಕರ್ತರು ಪಕ್ಷದ ಮುಖಂಡರು ಸೇರಿ ಬೃಹತ್ ಪ್ರತಿಭಟನೆಸಂದರ್ಭದಲ್ಲಿ ಮತನಾಡುತ್ತಾ ಒತ್ತಾಯಿಸಿದ ಅವರು ಕೇಂದ್ರ ಸರ್ಕಾರದ ಪ್ರದಾನಿ ನರೇಂದ್ರ ಮೋದಿ ಮತ್ತು ಅವರ ಪಕ್ಷದ ನಾಯಕರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆಂದು ಆರೋಪಿಸಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಕಾಯ್ದಿಕೊಂಡು ಬಂದಿರುವ ನಮ್ಮ ಪಕ್ಷದ ನಾಯಕಿ ಸೋನಿಯಾಗಾಂಧಿ ಮತ್ತು ಯುವ ನಾಯಕ ರಾಹುಲ್ ಗಾಂದೀಯವರನ್ನು ಆರೋಪಿಗಳನ್ನಾಗಿ ಮಾಡಿ ಅವರ ಮೇಲೆ ಇಲ್ಲ ಸಲ್ಲದ ಆರೋಪಿ ನಡೆಸಿ ಕೋರ್ಟಿನ
ಕಟಕಟಿಯಲ್ಲಿ ನಿಲ್ಲಿಸಿ ಸೇಡಿನ ರಾಜಕಾರಣ ಮಾಡಲು ಹೋರಟಿರುವ ಕೇಂದ್ರ ಸರ್ಕಾರಕ್ಕೆ
ಮುಂಬರು ದಿನಗಳಲ್ಲಿ ಈ ದೇಶದ ಜನಸಾಮಾನ್ಯರು ತಕ್ಕ ಪಾಠ ಕಲಿಸಲಿದ್ದಾರೆಂದುಕೆ.ಎಂ. ಸೈಯದ್
ಟೀಕಿಸಿದ್ದಾರೆ. ಪ್ರತಿಭಟನೆ ಬಳಿಕ ತಹಶೀಲ್ದಾರ ಕಚೇರಿ ಮೂಲಕ ರಾಷ್ಟ್ರಪತಿಯವರಿಗೆ
ದೂರನ್ನು ಸಲ್ಲಿಸಿ ಒತ್ತಾಯಿಸಿದ್ದಾರೆ. ಈ ಪ್ರತಿಭಟನೆಯಲ್ಲಿ  ಜಿಲ್ಲಾ ಕಾಂಗ್ರೇಸ್
ಅಧ್ಯಕ್ಷ ಕೆ. ಬಸವರಾಜ ಹಿಟ್ನಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್
ಖಾದರ ಖಾದ್ರಿ,  ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿಸದಸ್ಯ ಅಮಜದ್ ಪಟೇಲ್, ಹಿರಿಯ
ಕಾಂಗ್ರೆಸ್ ಮುಖಂಡ ಎಸ್.ಬಿ ನಾಗರಳ್ಳಿ,ನಗರಸಭೆ ಉಪಾಧ್ಯಕ್ಷ ಬಾಳಪ್ಪ ಬಾರಕೆರ,ಯುವ
ಕಾಂಗ್ರೆಸ್ ಅಧ್ಯಕ್ಷ ಎಂ. ಪಾಷಾ ಕಾಟನ್, ಕಾಂಗ್ರೇಸ್ ನಾಯಕ ರಾಮಣ್ಣ ಹಳ್ಳಿಗುಡಿ,
ಜಿಲ್ಲಾ ಯುವ ಕಾಂಗ್ರೇಸ್ ಪ್ರದಾನ ಕಾರ್ಯದರ್ಶಿ ಸುರೇಶ ದಾಸರೆಡ್ಡಿ, ನಗರಸಭೆ ಸದಸ್ಯೆರಾದ
ಮುತ್ತುರಾಜ ಕುಷ್ಟಗಿ ರಾಮಣ್ಣ ಹದ್ದಿನ,  ಅಪ್ಸರ ಸಾಬ್, ಎಂ. ಪಾಷಾ ಮಾನ್ವಿ ಮಹಿಳಾ
ಕಾಂಗ್ರೇಸ್ ಅಧ್ಯಕ್ಷೆ ಇಂದಿರಾ ಬಾವಿಕಟ್ಟಿ ಅನುಸೋಯಮ್ಮ ವಾಲಮಿಕಿ, ನೂರಜಾನ ಬೇಗಂ
ನಿರಲಗಿ ಪೀರಾ ಹುಸೇನ ಚಿಕನ್ ಯಮನೂರಪ್ಪ ನಾಯಕ ಅಬೂಬ ಬಕರ್ ಆರ್.ಎನ್ ರಫಿ ಅರುಣ ಶಟ್ಟಿ
ರಹೇಮತ ಹುಸೇನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Please follow and like us:
error