fbpx

ಕೇವಲ ೧೦ ರೂ. ಪಾವತಿಸಿ ಯಶಸ್ವಿನಿ ಸದಸ್ಯತ್ವ ಪಡೆಯಿರಿ

  ಯಶಸ್ವಿನಿ ಸಹಕಾರಿ ರೈತರ ಆರೋಗ್ಯ ರಕ್ಷಣಾ ಯೋಜನೆಯಡಿ ಪ.ಜಾತಿ ಮತ್ತು ಪ.ಪಂಗಡದವರು ಕೇವಲ ೧೦ ರೂ. ಪಾವತಿಸಿ ಸದಸ್ಯತ್ವ ಪಡೆಯಬಹುದಾಗಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕ ಕೆ. ಮುನಿಯಪ್ಪ ಅವರು ತಿಳಿಸಿದ್ದಾರೆ.
  ಸರ್ಕಾರವು ೨೦೧೩-೧೪ ನೇ ಸಾಲಿನ ಬಜೆಟ್‌ನಲ್ಲಿ ಪ.ಜಾತಿ ಮತ್ತು ಪ.ಪಂಗಡದವರು ಯಶಸ್ವಿನಿ ಯೋಜನೆಯ ಸೌಲಭ್ಯ ಪಡೆಯುವುದನ್ನು ಉತ್ತೇಜಿಸಲು, ಪ.ಜಾತಿ/ಪ.ಪಂಗಡದ ಸದಸ್ಯರ ಪೂರ್ಣ ನೋಂದಣಿ ಶುಲ್ಕ ೨೦೦ ರೂ. ಗಳನ್ನು ಯಶಸ್ವಿನಿ ಟ್ರಸ್ಟ್ ವತಿಯಿಂದಲೇ ಭರಿಸುವುದಾಗಿ ಘೋಷಿಸಲಾಗಿದೆ.  ಇದರನ್ವಯ ಪ್ರಸಕ್ತ ಸಾಲಿನ ಯಶಸ್ವಿನಿ ಸಹಕಾರಿ ಆರೋಗ್ಯ ರಕ್ಷಣಾ ಯೋಜನೆಗೆ ಪ.ಜಾತಿ ಮತ್ತು ಪ.ಪಂಗಡದ ಅರ್ಹ ಸದಸ್ಯರು ಮತ್ತು ಅವರ ಕುಟುಂಬದ ಅರ್ಹ ಸದಸ್ಯರು ಪ್ರತ್ಯೇಕವಾಗಿ ಕೇವಲ ೧೦ ರೂ. ಗಳನ್ನು ಆಯಾ ಕಾರ್ಯವ್ಯಾಪ್ತಿಯಲ್ಲಿ ಬರುವ ಸಹಕಾರ ಸಂಘಕ್ಕೆ (ಪ್ರತಿಯೊಬ್ಬರ ೨ ಭಾವಚಿತ್ರಗಳೊಂದಿಗೆ) ಪಾವತಿಸಿ ಯೋಜನೆಯಡಿ ಸದಸ್ಯತ್ವ ಪಡೆಯಲು ಅವಕಾಶ ಕಲ್ಪಿಸಲಾಗಿದೆ.  ಸರ್ಕಾರ ನೀಡಿರುವ ಈ ಸೌಲಭ್ಯದ ಸದುಪಯೋಗವನ್ನು ಅರ್ಹರು ಪಡೆದುಕೊಳ್ಳಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ಸಹಕಾರ ಇಲಾಖೆ ಅಥವಾ ಸಮೀಪದ ಸಹಕಾರ ಸಂಸ್ಥೆಯನ್ನು ಸಂಪರ್ಕಿಸುವಂತೆ  ತಿಳಿಸಿದೆ.
Please follow and like us:
error

Leave a Reply

error: Content is protected !!