ಕ್ರೀಡೆಯಿಂದ ಸವಾಲು ಎದುರಿಸುವ ಸಾಮರ್ಥ್ಯ ಬೆಳೆಯುತ್ತದೆ – ಕರಡಿ

ಕೊಪ್ಪಳ ಸೆ,೧೩.
    ಅವರು ತಾಲೂಕಿನ ಹಲಗೇರಿ ಗ್ರಾಮದಲ್ಲಿ ಶ್ರೀಮಹಾಶಕ್ತಿ ಯುವಕ ಸಂಘ, ರೋಟರಿ ಕ್ಲಬ್ ಮತ್ತು ಇನ್ನರ್ ವ್ಹೀಲ್ ಕ್ಲಬ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಪುರುಷರ ಮುಕ್ತ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಆಸಕ್ತಿಯಿಂದ ಪಾಲ್ಗೊಳ್ಳುವುದು ಬಹಳ ಮುಖ್ಯವಾಗಿದೆ ಎಂದರು.
  ಮುಂದುವರೆದು ಮಾತನಾಡಿದ ಅವರು ಕ್ರೀಡೆಯ ಮೂಲಕ ಜ್ಯಾತ್ಯಾತೀತ ಮನೋಭಾವ ಬೆಳೆಯುತ್ತದೆ, ಕ್ರೀಡಾ ಆಸಕ್ತಿ ಪ್ರತಿಯೊಬ್ಬರು ಬೆಳೆಸಬೇಕಾಗಿದೆ ಇದರಿಂದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಮಾಡಲು ಕ್ರೀಡೆ ಅತ್ಯಂತ ಸಹಕಾರಿಯಾಗಲಿದೆ ಎಂದ ಅವರು ಹಲಗೇರಿ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಾವಂತ ಯುವಕರು ಸಿಗುತ್ತಾರೆ ಇದು ಒಂದು ಆದರ್ಶಗ್ರಾಮವಾಗಿ ಹೊರಹೊಮ್ಮಿದೆ ಸಂಸದ ಸಂಗಣ್ಣ ಕರಡಿ ಹೇಳಿದರು.
    ಕಬ್ಬಡ್ಡಿ ಕ್ರೀಡಾಂಗಣ ಉದ್ಘಾಟನೆಯನ್ನು ಸಯ್ಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ.ಸಯ್ಯದ್ ರವರು ನೆರವೇರಿಸಿ ಮಾತನಾಡಿ ದೇಶಿಯ ಕ್ರೀಡೆಗೆ ಹರಚ್ಚಿನ ಒತ್ತುಕೊಡಬೇಕು. ಕ್ರೀಡಾಪಟುಗಳು ಉತ್ತಮ ಪ್ರದರ್ಶನಮಾಡಿ ಕ್ರೀಡಾಪಟುಗಳು ಕೀರ್ತಿತರಬೇಕೆಂದು ಸಲಹೆಮಾಡಿದರು.
  ಸಮಾರಂಭದ ಅಧ್ಯಕ್ಷತೆಯನ್ನು ಹಲಗೇರಿ ಗ್ರಾಪಂ ಅಧ್ಯಕ್ಷ ದೇವಪ್ಪ ಓಜನಳ್ಳಿ ವಹಿಸಿದ್ದರು, ಪತ್ರಕರ್ತ ಎಂ.ಸಾದಿಕ್ ಅಲಿ, ಹಿರಿಯ ವೈದ್ಯ ಡಾ.ರಾಧಾ ಕುಲಕರ್ಣಿ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಹೇಮಲತಾ ನಾಯಕ್,  ಸರ್ಕಾರಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್, ತಾಪಂ ಸದಸ್ಯ ದೇವಪ್ಪ ಗುಡ್ಲಾನೂರ್,  ಶರಣಯ್ಯಸ್ವಾಮಿ ಹಿರೇಮಠ, ಬಿಜೆಪಿ ಮಾಧ್ಯಮ ವಕ್ತಾರ ಚಂದ್ರಶೇಖರಗೌಡ ಪಾಟೀಲ್, ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಿಕಾರ್ಜುನ್ ಸಜ್ಜನ, ಧರ್ಮಣ್ಣ ಎಂ.ಬಂಡ್ಯಾಳ, ಗಂಗಮ್ಮ ಡಂಬಳ, ಮಾಜಿ ಸದಸ್ಯ ಬಸವರಾಜ್ ಸಜ್ಜನ್, ಶರಣಬಸವನಗೌಡ ಪಾಟೀಲ್ ಶಿಕ್ಷಕರು, ಬಸವರಾಜ್ ಸಜ್ಜನ್, ಪರ್ವತಗೌಡ ಪಾಟೀಲ್, ರಾಯನಗೌಡ ಪಾಟೀಲ್, ಕುಬೇರಪ್ಪ ಗೊರವರ್‍ಮ ರಮೇಶ ಮಡಿವಾಳರ್, ಗೋಣಿಬಸಪ್ಪ ಜಿ. ಈರಣ್ಣ, ಜಗದೀಶ ಓಜನಳ್ಳಿ, ಶಿವಮ್ಮ ಓಜನಳ್ಳಿ, ದ್ಯಾಮಣ್ಣ ಕುರಿ, ಮುತ್ತುರಾಜ್ ಬೆಲ್ಲದ್, ದೈಹಿಕ ಶಿಕ್ಷಕ ದ್ಯಾಮಣ್ಣ, ಆನಂದ ಕರಿಬಸಯ್ಯ, ಎಂಎಂ.ಮುಜುಂಗುಂಡ, ಬಸವರಾಜ್ ಅಂಗಡಿ, ವಿಠ್ಠಲ್.ಬಿ.  ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
   ಆರಂಭದಲ್ಲಿ ಕು.ದೀಪಾ ಹಳೇಮನಿ ಶಂಕ್ರಮ್ಮ ಹಳೇಮನಿ ಪ್ರಾರ್ಥನೆ ಗೀತೆ ಹಾಡಿದರೆ, ಚಂದ್ರಶೇಖರಗೌಡ ಪಾಟೀಲ್ ಹಲಗೇರಿ ಸ್ವಾಗತಿಸಿದರು, ಶಂಭುಲಿಂಗನಗೌಡ ಪಾಟೀಲ್ ಹಲಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರೆ ಸಹ ಶಿಕ್ಷಕ ಬಸವರಾಜ್ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ರಾಜ್ಯದ ವಿವಿಧ ಜಿಲ್ಲೆಯಿಂದ ೫೦ ಕಬ್ಬಡ್ಡಿ ತಂಡಗಳು ಭಾಗವಹಿಸಿದ್ದರು.

ಕ್ರೀಡೆಯು ಮನುಷ್ಯನ ಅವಿಭಾಜ್ಯ ಅಂಗವಾಗಿದ್ದು ಮನುಷ್ಯನಿಗೆ ಶಾರೀರಕವಾಗಿ, ಮಾನಸಿಕವಾಗಿ ಸಧೃಢತೆ ಮಾಡುತ್ತದೆ. ಮನುಷ್ಯ ಕ್ರೀಡಾಸಕ್ತಿ ಬೆಳೆಸಿದರೆ ಸಧೃಡವಾಗಿ  ಮನಸ್ಸು ಬೆಳೆಯುತ್ತದೆ ಕ್ರೀಡೆಯಿಂದ ಸವಾಲು ಎದುರಿಸುವ ಸಾಮರ್ಥ್ಯಬೆಳೆಯುತ್ತದೆ ಎಂದು ಸಂಸದ ಸಂಗಣ್ಣ ಕರಡಿ ಅಭಿಪ್ರಾಯ ಪಟ್ಟರು.

Please follow and like us:
error