You are here
Home > Koppal News > ವಚನ ಸಾಹಿತ್ಯದಲ್ಲಿರುವ ಅಪಾರ ಮಾನವೀಯ ಮೌಲ್ಯಗಳು ಬದುಕಿನ ಗತಿಯನ್ನು ಬದಲಾಯಿಸಬಲ್ಲದು ಅಮರೇಶ ಮೈಲಾಪುರ

ವಚನ ಸಾಹಿತ್ಯದಲ್ಲಿರುವ ಅಪಾರ ಮಾನವೀಯ ಮೌಲ್ಯಗಳು ಬದುಕಿನ ಗತಿಯನ್ನು ಬದಲಾಯಿಸಬಲ್ಲದು ಅಮರೇಶ ಮೈಲಾಪುರ

ಕೊಪ್ಪಳ: ನಗರದ ಶ್ರೀಗವಿಮಠದಲ್ಲಿ ಅಮವಾಸ್ಯೆಯ ಅಂಗವಾಗಿ  ದಿ  ೦೬ ಮಂಗಳವಾರ ೪೭ ನೇ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮವು  ಶ್ರೀಮಠದ ಕಲ್ಯಾಣಮಂಟಪದಲ್ಲಿ ಸಾಯಂಕಾಲ ೬.೩೦ ಕ್ಕೆ ಜರುಗಿತು.
 ಮುಖ್ಯ ಅತಿಥಿಗಳಾಗಿ ಕಾರಟಗಿಯ ಅಮರೇಶ ಮೈಲಾಪುರ  ಮಾತನಾಡಿ ಬಸವಾದಿ ಶರಣರ ತತ್ವ ಸಿದ್ದಾಂತಗಳನ್ನು ನಾವೆಲ್ಲ ಅನುಕರಣೆ ಮಾಡುವ ಅಗತ್ಯವಿದೆ. ವಚನ ಸಾಹಿತ್ಯದಲ್ಲಿರುವ ಅಪಾರ ಮಾನವೀಯ ಮೌಲ್ಯಗಳು ಬದುಕಿನ ಗತಿಯನ್ನು ಬದಲಾಯಿಸಬಲ್ಲದು ಎಂದರು. ಅಧ್ಯಕ್ಷತೆಯನ್ನು ಕುಕನೂರ ಶ್ರೀಗವಿಸಿದ್ಧೇಶ್ವರ ಪ್ರೌಡಶಾಲೆಯ ಮುಖ್ಯೋಪಾಧ್ಯಾಯರಾದ   ಗವಿಸಿದ್ದಪ್ಪ ಚಲವಾದಿ ವಹಿಸಿ ಮಾತನಾಡಿ  ಉತ್ತಮ ವಿಚಾರಗಳು ಹಾಗೂ ಜ್ಞಾನ ವಂತರನ್ನಾಗಿಸುವಲ್ಲಿ ಈ ಬೆಳಕಿನೆಡೆಗೆ ಕಾರ್ಯಕ್ರಮ ಉಪಯುಕ್ತ ಎಂದರು. ಇತ್ತೀಚಿಗೆ ವ್ಯಾಪಾರ ಕ್ಷೇತ್ರದ ಪ್ರತಿಷ್ಟಿತ ಪ್ರಶಸ್ತಿ ಪಡೆದ ಉದ್ಯಮಿ  ಪ್ರಭು ಹೆಬ್ಬಾಳ, ಮಾಧ್ಯಮ ಕ್ಷೇತ್ರದಲ್ಲಿ  ಪ್ರಶಸ್ತಿ ಪಡೆದ ಸುವರ್ಣ ವಾಹಿನಿಯ   ದೊಡ್ಡೇಶ ಯಲಿಗಾರ ಅವರಿಗೆ ಪೂಜ್ಯ ಶ್ರೀಗವಿಸಿದ್ದೇಶ್ವರ ಶ್ರೀಗಳು ಸನ್ಮಾನ ಮಾಡಿದರು. ಕಾರ್ಯಕ್ರಮದ ಭಕ್ತಿ ಸೇವೆಯನ್ನು ಕೊಪ್ಪಳ  ಸಂಸದರ ಆಪ್ತ ಸಹಾಯಕರಾದ ಶ್ರೀನಿವಾಸ ಎನ್ ಜೋಷಿ ವಹಿಸಿದ್ದರು. 

Leave a Reply

Top