ವಾಸವಿ ಜಯಂತಿಯ ಕಾರ್ಯಕ್ರಮ

ವೈಶ್ಯಕುಲದ ಹಿರಿಮೆಯನ್ನು ಎತ್ತಿಸಾರುವ ವೈಶ್ಯಕುಲ ಕಣ್ಮಣಿಯಾದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿಯ ಜಯಂತಿಯನ್ನು ದಿನಾಂಕ:೨೦.೦೫.೨೦೧೩ ರಂದು ಕೊಪ್ಪಳ ನಗರದ ಹಾಗೂ ಸುತ್ತಮುತ್ತಲಿನ ಹಳ್ಳಿಯ ಆರ್ಯ ವೈಶ್ಯ ಕುಲಬಾಂಧವರಿಂದ ಹಮ್ಮಿಕೊಳ್ಳಲಾಗಿತ್ತು. 
ಮೊದಲಿಗೆ ಬೆಳಿಗ್ಗೆ ಸುಮಂಗಲಿಯರಿಂದ ಪೂರ್ಣಕುಂಭ ಹಾಗೂ

ಶ್ರೀ ಗೋವಿಂದ ರಾಜು ದೇವಸ್ಥಾನದಿಂದ ಕಳಸ ಮೆರವಣಿಗೆ ಮಾಡಲಾಯಿತು. ನಂತರ ಶ್ರೀ ವಾಸವಿ ಅಮ್ಮನವರ ಭಾವ ಚಿತ್ರದೊಂದಿಗೆ ಕೊಪ್ಪಳ ನಗರದ ಮಹೇಶ್ವರ ದೇವಸ್ಥಾನದಿಂದ ಗಡಿಯಾರಕಂಬ, ಆಜಾದ ಸರ್ಕಲ್ ಹಾಗೂ ಅಶೋಕ ಸರ್ಕಲ್ ಮುಖಾಂತರ ಸಕಲ ವಾಧ್ಯ ವೈಭವ, ಭಜನಾ ಮೇಳದೊಂದಿಗೆ ಕಿನ್ನಾಳ ರಸ್ತೆಯಲ್ಲಿರುವ ವಾಸವಿ ದೇವಸ್ಥಾನದ ವರಗೆ ಮೆರವಣಿಗೆ ಮಾಡಲಾಯಿತು.

ನಂತರ ವಾಸವಿ ದೇವಿಯ ತೊಟ್ಟಿಲು ಸೇವೆ, ಉತ್ತರಾ ಪೂಜ ಕಳಸ ವಿಸರ್ಜನೆ ಕಾರ್ಯಕ್ರಮ ನೆಡೆಯಿತು. ಈ ಮೆರವಣಿಗೆ ಹಾಗೂ ವಾಸವಿ ಜಯಂತಿಯ ಕಾರ್ಯಕ್ರಮದಲ್ಲಿ ಕೊಪ್ಪಳ ಹಾಗೂ ಸುತ್ತಮುತ್ತಲಿನ ಹಳ್ಳಿಯ ಸಮಸ್ತ ಆರ್ಯ ವೈಶ್ಯಕುಲಬಾಂಧವರು ಭಾಗವಹಿಸಿದ್ದರು.  

Leave a Reply