ಪ್ರೀತಿ -ಪ್ರೇಮ – ಸಹಕಾರದಿಂದ ಬದುಕಿ ಬಾಳುವದೇ ಸ್ವಾತಂತ್ರದ ನಿಜವಾದ ಅರ್ಥ. – ಶಾಸಕ ಹಿಟ್ನಾಳ

ಕೊಪ್ಪಳ: ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸಂಭ್ರಮದ ೬೭ ನೇ ಧ್ವಜಾರೋಹಣ ಕಾರ್ಯಕ್ರಮ ಜರುಗಿತು. ಶಾಸಕರಾದ ರಾಘವೇಂದ್ರ ಹಿಟ್ನಾಳ  ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ  ಭಾರತ ದೇಶ ಸರ್ವಜನಾಂಗದ  ಶಾಂತಿಯ ತೋಟ.  ಪರಸ್ಪರ ಪ್ರೀತಿ ಪ್ರೇಮ ಸಹಕಾರದಿಂದ ಬದುಕಿ ಬಾಳುವದೇ ಸ್ವಾತಂತ್ರದ ನಿಜವಾದ ಅರ್ಥ. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ  ಹುತಾತ್ಮರನ್ನು ಈ ಸಂದರ್ಭದಲ್ಲಿ ಸ್ಮರಿಸುವ ಅಗತ್ಯವಿದೆ.  ಅವರ ದೇಶಪ್ರೇಮ ತ್ಯಾಗ, ಬಲಿದಾನ  ಅಪ್ರತಿಮ ಎಂದರು. ಪ್ರಾಚಾರ್ಯ ತಿಮ್ಮಾರೆಡ್ಡಿ ಮೇಟಿ ಮಾತನಾಡಿ ಯುವಕರು ದೇಶದ ಬೆನ್ನೆಲುಬುಗಳಿದ್ದಂತೆ.  ಇವರು ಸದಾ ಸನ್ಮಾರ್ಗದತ್ತ ಮುನ್ನೆಡೆದು ಆದರ್ಶರಾಗಿ ಬದುಕಬೇಕು.  ತಾಯಿಯನ್ನು ಪ್ರೀತಿಸಿದಂತೆ ತಾಯಿ ನೆಲವನ್ನು (ಭಾರತ) ಪ್ರೀತಿಸಬೇಕು. ಪಟ್ಟಭದ್ರಹಿತಾಸಕ್ತಿಗಳಿಂದ, ಭಯೋತ್ಪಾದನೆಯಿಂದ  ಈ ದೇಶ ಬಿಡುಗಡೆ ಗೊಳ್ಳಬೇಕಾಗಿದೆ.  ಈ ನಿಟ್ಟಿನಲ್ಲಿ ದೇಶಕಟ್ಟುವಲ್ಲಿ ಯುವಕರ ಪಾತ್ರ ಮುಖ್ಯ ಎಂದರು. ಉಪನ್ಯಾಸಕರಾದ ಪ್ರಭುರಾಜ ನಾಯಕ್ , ಸುರೇಶ ಸೊನ್ನದ, ದ್ವಾರಕಾಸ್ವಾಮಿ, ನಾಯಕ್, ಗಾಯತ್ರಿ ಭಾವಿಕಟ್ಟಿ, ನಂದಾ ಕಟ್ಟಿಮನಿ, ಸಿಬ್ಬಂಧಿಗಳಾದ ಆದಿಬಾಬು, ಜಯಪ್ರಕಾಶ,  ಶಾಮೀದ್, ಸೌಮ್ಯ, ವಿನೋದ, ಅತಿಥಿ ಉಪನ್ಯಾಸಕರಾದ  ವೀರಣ್ಣ ಸಜ್ಜನರ, ಡಾ.ಪ್ರಕಾಶಬಳ್ಳಾರಿ, ರವಿ ಹಿರೇಮಠ, ಕೆಂಚಪ್ಪ ಹಾಲವರ್ತಿ, ಮಂಜುನಾಥ ಹೊಸುರ, ಮೊದಲಾದವರು ಉಪಸ್ಥಿತರಿದ್ದರು.

Leave a Reply