ಏಳು ಹೋಬಳಿಗಳಲ್ಲಿ ಮೇವು ಬ್ಯಾಂಕ್ ಸ್ಥಾಪನೆ- ಡಿ.ಸಿ. ರಮಣದೀಪ ಚೌದರಿ ಆದೇಶ.

ಕೊಪ್ಪಳ ಆ. ೨೭ (ಕ ವಾ) ಜಿಲ್ಲೆಯಲ್ಲಿ ಈ ಬಾರಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತಲೆದೋರಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ಬಾರದಂತೆ ಜಿಲ್ಲೆಯ ಏಳು ಹೋಬಳಿಗಳಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲು ಜಿಲ್ಲಾಧಿಕಾರಿ ರಮಣದೀಪ್ ಚೌದರಿ ಆದೇಶಿಸಿದ್ದಾರೆ.
     ಜಿಲ್ಲೆಯಲ್ಲಿ ಈ ಬಾರಿ ಮಳೆಯ ಕೊರತೆ ಆಗಿರುವುದರಿಂದ, ಸರ್ಕಾರ ಜಿಲ್ಲೆಯ ನಾಲ್ಕೂ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಿಸಿದೆ.  ಮಳೆ ಹಾಗೂ ತೇವಾಂಶ ಕೊರತೆಯಿಂದ ಸಮರ್ಪಕ ಪ್ರಮಾಣದಲ್ಲಿ ಮೇವು ಬೆಳೆಯದಿರುವುದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯ

ತೆಗಳಿರುವುದರಿಂದ, ಕೊಪ್ಪಳ ಜಿಲ್ಲಾಡಳಿತ ಮೇವು ಬ್ಯಾಂಕ್ ಸ್ಥಾಪಿಸಿ ಜಾನುವಾರುಗಳಿಗೆ ಮೇವನ್ನು ಪೂರೈಕೆ ಮಾಡುವ ಕ್ರಮ ಕೈಗೊಂಡಿದೆ.  ಈ ನಿಟ್ಟಿನಲ್ಲಿ ಕೊಪ್ಪಳ ತಾಲೂಕಿನ ಅಳವಂಡಿ, ಗಂಗಾವತಿ ತಾಲೂಕಿನ ಕನಕಗಿರಿ ಮತ್ತು ಹುಲಿಹೈದರ್, ಕುಷ್ಟಗಿ ತಾಲೂಕಿನ ತಾವರಗೇರಾ ಮತ್ತು ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ ಕುಕನೂರು ಮತ್ತು ಯಲಬುರ್ಗಾ ಹೋಬಳಿಗಳಲ್ಲಿ ಮೇವು ಬ್ಯಾಂಕ್ ಸ್ಥಾಪನೆಗೆ ಆದೇಶ ನೀಡಲಾಗಿದೆ.  ಒಣ ಮೇವಿಗೆ ಪ್ರತಿ ಕೆ.ಜಿ. ಗೆ ರೂ. ೦೩ ರಂತೆ ದರ ನಿಗದಿಪಡಿಸಲಾಗಿದ್ದು, ಭೂ ರಹಿತ, ಸಣ್ಣ ಮತ್ತು ಅತಿ ಸಣ್ಣ ರೈತ ಪಶುಪಾಲಕರಿಗೆ ಆದ್ಯತೆ ಮೇರೆಗೆ ಮೇವನ್ನು ನೀಡಲಾಗುವುದು.  ಸ್ಥಳೀಯ ಪಶು ವೈದ್ಯಾಧಿಕಾರಿಗಳಿಂದ ಜಾನುವಾರುಗಳನ್ನು ಹೊಂದಿದ ಬಗ್ಗೆ ದೃಢೀಕರಣ ಪತ್ರ ಮತ್ತು ಗ್ರಾಮ ಲೆಕ್ಕಾಧಿಕಾರಿಯಿಂದ ಭೂರಹಿತ, ಸಣ್ಣ ಮತ್ತು ಅತಿ ಸಣ್ಣ ರೈತ ಎನ್ನುವ ಬಗ್ಗೆ ಮಾಹಿತಿ ಪಡೆದು ಮೇವು ವಿತರಿಸಲಾಗುವುದು.  ಜಾನುವಾರುಗಳನ್ನು ಹೊಂದಿರುವ ಭೂರಹಿತರು, ಸಣ್ಣ ಮತ್ತು ಅತಿ ಸಣ್ಣ ರೈತ ಪಶುಪಾಲಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.  ಮೇವು ಬ್ಯಾಂಕ್‌ಗಳನ್ನು ಆಯಾ ತಹಸಿಲ್ದಾರರು ಕೂಡಲೆ ಸ್ಥಾಪಿಸಬೇಕು, ಮೇವು ಸಂಗ್ರಹಣೆಗೆ ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು ಎಂದು ಈಗಾಗಲೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ರಮಣದೀಪ್ ಚೌದರಿ ಅವರು ತಿಳಿಸಿದ್ದಾರೆ.

Please follow and like us:
error

Related posts

Leave a Comment