ವಾಹನ ಕಳ್ಳತನ : ಕೊಪ್ಪಳ ಗ್ರಾಮೀಣ ಪೊಲೀಸರಿಂದ ಓರ್ವನ ಬಂಧನ

ಕೊಪ್ಪಳ : ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಎರಡು ವಾಹನವನ್ನು ತೆಗೆದುಕೊಂಡು ತಿರುಗಾಡುತ್ತಿದ್ದ ಸಾದೀಕ್ ಕಲಾಡಿಯಾ ಗುಜಾರಾತ್ ಎಂಬಾತನನ್ನು ಕೊಪ್ಪಳ ಗ್ರಾಮೀಣ ಪೊಲೀಸರು ಬಂಧಿಸಿದ್ದು, ಒಂದು ಮಾರುತಿ ಸ್ವಿಫ್ಟ್ ಕಾರು ಹಾಗೂ ಒಂದು ಬಜಾಜ್ ಪಲ್ಸರ್ ದ್ವಿಚಕ್ರವಾಹನ ವಶಪಡಿಸಿಕೊಂಡಿದ್ದಾರೆ.
  ಕಳೆದ ನ. ೩೦ ರಂದು ಸಾದೀಕ್ ಕಲಾಡಿಯಾ ಹುಲಿಗಿ ಹತ್ತಿರ ಮಾರುತಿ ಸ್ವಿಫ್ಟ್ ವಾಹನ ಸಂ. ಆರ್.ಜೆ- ೦೧/ ಸಿಡಿ-೧೮೧೬ ಕಾರನ್ನು ಓಡಿಸುತ್ತಿದ್ದಾಗ, ಪೊಲೀಸರ ತಪಾಸಣೆ ಸಂದರ್ಭದಲ್ಲಿ ಕಾಗದ ಪತ್ರಗಳನ್ನು ಕೇಳಿದಾಗ ಪತ್ರಗಳು ಇಲ್ಲವೆಂದು ಉತ್ತರಿಸಿದನು, ಇನ್ನೊಂದು ದ್ವಿಚಕ್ರ ವಾಹನ ಇದ್ದ ಬಗ್ಗೆಯೂ ಬಾಯ್ಬಿಟ್ಟ ಈತ, ಬಜಾಜ್ ಪಲ್ಸರ್ ವಾಹನ ನಂ. ಜಿ.ಜೆ- ೧೦/ಎಇ-೫೫೯೨ ವಾಹನದ ದಾಖಲೆ ಪತ್ರಗಳೂ ಸಹ ಇಲ್ಲವೆಂದು ಉತ್ತರಿಸಿದ್ದಾನೆ.  ಪೊಲೀಸರು ಈತ ವಾಹನಗಳನ್ನು ಕಳ್ಳತನ ಮಾಡಿಕೊಂಡು ಬಂದಿರುವುದಾಗಿ, ವಾಹನಗಳನ್ನು ವಶಪಡಿಸಿಕೊಂಡು, ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಡಿ.ವೈಎಸ್‌ಪಿ, ಅವರ ನಿರ್ದೇಶನದಂತೆ ಸಿ.ಪಿ.ಐ ವೆಂಕಟಪ್ಪ ನಾಯಕ ಹಾಗೂ ಮುನಿರಾಬಾದ್ ಠಾಣೆ ಸಿ.ಪಿ.ಐ ಹೆಚ್. ವಿಶ್ವನಾಥ, ಪಿ.ಎಸ್.ಐ ಪರಶುರಾಮ ಪೂಜಾರ, ಸಿಬ್ಬಂದಿಯಾದ ನಿಸಾರ್, ಇನಾಯತ್, ಸುಭಾಸ್, ಈಶಪ್ಪ, ಮಹಾಂತಗೌಡ ಅವರು ದಾಳಿ ತಂಡದಲ್ಲಿದ್ದರು.
Please follow and like us:
error