ಡಾ. ಸ.ಜ.ನಾ. ಆದರ್ಶ ಶಿಕ್ಷಕ ಪ್ರಶಸ್ತಿ

ಕೊಪ್ಪಳ ಆ. ೨೪ (ಕ.ವಾ) : ಡಾ:: ಸ. ಜ. ನಾಗಲೋಟಿಮಠ ಅಂತರರಾಷ್ಟ್ರೀಯ ಪ್ರತಿಷ್ಠಾನವು ರಾಜ್ಯ ಮಟ್ಟದಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿಗಳನ್ನು ಅಂತರಾಷ್ಟ್ರೀಯ ಖ್ಯಾತಿ ವೈದ್ಯ ವಿಜ್ಞಾನಿ, ಸ್ವತಃ ಶಿಕ್ಷಕರೂ ಆಗಿದ್ದ ದಿ: ಡಾ: ಸ.ಜ. ನಾಗಲೋಟಿಮಠ ಅವರ ಸ್ಮರಣಾರ್ಥ ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತ ಬರುತ್ತಿದೆ.
ಪ್ರಸ್ತುತ ವರುಷದ ಪ್ರಶಸ್ತಿಗಾಗಿ ಅರ್ಹ ಪ್ರಾಥಮಿಕ, ಪ್ರೌಢ, ಕಿರಿಯ ಮಹಾವಿದ್ಯಾಲಯ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದ್ದು, ರಾಜ್ಯ ಮಟ್ಟದ ಪ್ರಶಸ್ತಿಗೆ ಪ್ರಸ್ತಾವನೆ ಸಲ್ಲಿಸಲು ಕರ್ನಾಟಕದ ಎಲ್ಲ ಶಿಕ್ಷಕರೂ ಅರ್ಹರು. ಸಂಪೂರ್ಣ ಮಾಹಿತಿ ಮತ್ತು ಸೂಕ್ತ ಅಡಕಗಳೊಂದಿಗೆ ಪ್ರಸ್ತಾವನೆಗಳನ್ನು ಡಾ. ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರ, ಶಿವಬಸವನಗರ, ಬೆಳಗಾವಿ- ೫೯೦೦೧೦ ವಿಳಾಸಕ್ಕೆ ಆಗಸ್ಟ್ ೨೭ ರ ಒಳಗಾಗಿ ತಲುಪುವಂತೆ ಕಳುಹಿಸಬೆಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂ: ೦೮೩೧- ೨೪೭೦೮೩೨ ಕ್ಕೆ ಸಂಪರ್ಕಿಸುವಂತೆ ಡಾ:: ಸ. ಜ. ನಾಗಲೋಟಿಮಠ ಅಂತರರಾಷ್ಟ್ರೀಯ ಪ್ರತಿಷ್ಠಾನದ ಸಂಜಯ ನಾಗಲೋಟಿಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply