You are here
Home > Koppal News > ಐಟಿಐ ತರಬೇತಿದಾರರ ಜಿಲ್ಲಾ ಮಟ್ಟದ ಸಮಾವೇಶ ಹಕ್ಕೊತ್ತಾಯಗಳು.

ಐಟಿಐ ತರಬೇತಿದಾರರ ಜಿಲ್ಲಾ ಮಟ್ಟದ ಸಮಾವೇಶ ಹಕ್ಕೊತ್ತಾಯಗಳು.

ತಾಂತ್ರಿಕ ನೈಪುಣ್ಯತೆಯನ್ನು ಗಳಿಸಿಕೊಂಡು ಕೈಗಾರಿಕೆಗಳಲ್ಲಿ ದುಡಿಯಲು ಶಕ್ತವಾಗಿರುವ ಕಾರ್ಮಿಕರನ್ನು ತಯಾರು ಮಾಡಲು ಕೇಂದ್ರ ಸರಕಾರವು ಜಿಲ್ಲಾ ಕೇಂದ್ರಗಳಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ)ಗಳನ್ನು ಸ್ಥಾಪಿಸಿದೆ. ಇದರಿಂದಾಗಿ, ಹಲವು ರೀತಿಯ ತಾಂತ್ರಿಕ ಕೌಶಲ್ಯ ಪಡೆದ ಯುವಕರ ಪಡೆ ಸಿದ್ಧವಾಯಿತು. ಗ್ರಾಮಾಂತರ ಹಾಗೂ ನಗರ ಪ್ರದೇಶಗಳ ಬಡ, ಹಿಂದುಳಿದ, ಕೆಳಮಧ್ಯಮ ವರ್ಗದ ಲಕ್ಷಾಂತರ ಜನ ವಿದ್ಯಾರ್ಥಿಗಳಿಗೆ ಅನುಕೂಲವಾಯಿತು. ಅವರು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ನೆರವಾಯಿತು. ಆದರೆ ಈಗ ಐಟಿಐಗಳು ಸಮಸ್ಯೆಗಳ ಕೂಪವಾಗಿವೆ. ಐದು ದಶಕಗಳಿಗೂ ಹೆಚ್ಚು ಹಳೆಯದಾಗಿರುವ ಯಂತ್ರಗಳು ಕೆಟ್ಟುಕೂತಿವೆ.  ತಂತ್ರಜ್ಞಾನ ಬೆಳೆದಂತೆ ಬದಲಾಗಬೇಕಾಗಿರುವ ಸೌಲಭ್ಯಗಳಲ್ಲಿ ತೀವ್ರ ಕೊರತೆ ಇದೆ. ಐಟಿಐಗಳ ಆಧುನಿಕರಣಕ್ಕೆ ಸರ್ಕಾರವು ಕ್ರಮಕೈಗೊಳ್ಳಲು ತಯಾರಿಲ್ಲ.
ಇನ್ನು ಹೊಸದಾಗಿ ಆರಂಭಿಸಲಾದ ಹಲವು ಐಟಿಐಗಳಿಗೆ ಕಟ್ಟಡವಿಲ್ಲ, ಮೂಲ ಸೌಕರ್ಯಗಳಿಲ್ಲ. ಹಳೆಯ ಐಟಿಐಗಳಲ್ಲಿ ಕನಿಷ್ಟ ಕುಡಿಯುವ ನೀರು, ಶೌಚಾಲಯ, ಸೂಕ್ತ ಗಾಳಿ ಬೆಳಕಿನ ವ್ಯವಸ್ಥೆಗಳಿಲ್ಲದೆ ಅವುಗಳ ಪರಿಸ್ಥಿತಿ ಶೋಚನೀಯವಾಗಿದೆ. ತರಬೇತಿ ಸಿಬ್ಬಂದಿ ಕೊರತೆಯಂತೂ ವಿಪರೀತವಾಗಿದೆ. ಇದರಿಂದಾಗಿ ಐಟಿಐ ಸೇರಿದ ವಿದ್ಯಾರ್ಥಿಗಳು ಸೂಕ್ತ ತರಬೇತಿ ಪಡೆಯಲು ಹರಸಾಹಸ ಪಡಬೇಕಾಗಿದೆ. ಇನ್ನುಅವರಲ್ಲಿ ಉತ್ಸಾಹ ಮೂಡಿಸುವ ಕ್ರೀಡೆ, ಸಾಂಸ್ಕೃತಿಕ ಚಟುವಟಿPಗಳಂತೂ ಸಾಧ್ಯವೇ ಇಲ್ಲಎನ್ನುವ ಪರಿಸ್ಥಿತಿ ಇದೆ.
ಯಾವದೋ ಹಳೆಯಕಾಲದಲ್ಲಿ ನಿಗದಿಗೊಳಿಸಿದ ತಿಂಗಳಿಗೆ ೫೦ ರೂ. ಸ್ಟೈಫಂಡ್ ಇಂದಿಗೂ ಮುಂದುವರೆದಿದೆ. ಅದುಕೂಡ ಸಕಾಲದಲ್ಲಿ ಸಿಗದೆ ತರಬೇತಿದಾರರು ಪರದಾಡುವಂತಾಗಿದೆ. ಅಲ್ಲದೆ, ಈ ತರಬೇತಿಗೆ ಸೇರಿದ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯವಿಲ್ಲದಿರುವುದು ಬಹಳ ಗಂಭೀರ ಸಮಸ್ಯೆಯಾಗಿದೆ. ಇದು ಬಹು ದೊಡ್ಡ ಆರ್ಥಿಕ ಹೊರೆಯಾಗಿದೆ. ಇಂತಹ ಸಮಸ್ಯೆಗಳಿಗೆ ಸಿಕ್ಕು ಎಷ್ಟೋ ಮಂದಿತಮ್ಮ ತರಬೇತಿ ಅವಧಿಯನ್ನು ಸಹ ಪೂರೈಸುವುದಿಲ್ಲ. ಇನ್ನು ಹಳ್ಳಿಗಳಿಂದ ದಿನ ಬಂದು ಹೋಗುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಅಥವಾ ಉಪಹಾರ ವ್ಯವಸ್ಥೆ ಇಲ್ಲದಿರುವುದರಿಂದ ಅವರು ಸಂಜೆ ವೇಳೆಗೆ ದೈಹಿಕವಾಗಿ ನಿತ್ರಾಣ ಸ್ಥಿತಿಯನ್ನು ತಲುಪುತ್ತಾರೆ. ಐಟಿಐಯು ದೈಹಿಕ ಶ್ರಮದ ನಿಂತಿರುವ ತರಬೇತಿ. ಆದ್ದರಿಂದ ಅವರಿಗೆ ಮಧ್ಯಾಹ್ನ ಉಚಿತ ಊಟ ಅಥವಾ ಉಪಹಾರ ವ್ಯವಸ್ಥೆಯಾದರೆ, ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಈ ರೀತಿ ವ್ಯವಸ್ಥೆ ಇರುವಾಗ ಸೆಮಿಸ್ಟರ್ ಪದ್ಧತಿ ಯಜಾರಿಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ತರಬೇತಿ ವಿರೋಧಿಯಾಗಿರುವ ಸೆಮಿಸ್ಟರ್ ಪದ್ಧತಿ ಕೈ ಬಿಟ್ಟುಹಿಂದಿನ ಪದ್ಧತಿಯನ್ನು ಜಾರಿಗೊಳಿಸಬೇಕಾಗಿದೆ.
ಒಟ್ಟಾರೆಯಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಐಟಿಐಗಳ ಮತ್ತು ಅಲ್ಲಿ ತರಬೇತಿ ಪಡೆಯುತ್ತಿರುವ ತರಬೇತಿದಾರರ ಹಿತಾಸಕ್ತಿಯನ್ನು ಕಾಪಾಡಲು ಈ ಕೆಳಗಿನ ಬೇಡಿಕೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಒತ್ತಾಯಿಸುತ್ತದೆ.
ಹಕ್ಕೊತ್ತಾಯಗಳು.
೧. ತರಬೇತಿ ವಿರೋಧಿಯಾಗಿರುವ ಸೆಮಿಸ್ಟರ್ ಪದ್ಧತಿ ಕೈ ಬಿಟ್ಟುಹಿಂದಿನ ತರಬೇತಿ ಮತ್ತು ಪರೀಕ್ಷಾ ವಿಧಾನವನ್ನೇ ಮುಂದುವರೆಸಬೇಕು.
೨. ಐಟಿಐತರಬೇತಿದಾರರಿಗೆಜಿಲ್ಲಾ ಹಾಗು ತಾಲ್ಲೂಕು ಕೇಂದ್ರಗಳಲ್ಲಿ ಅವಶ್ಯಕವಸತಿನಿಲಯಗಳನ್ನು ಆರಂಭಿಸಬೇಕು.
೩.ಐಟಿಐತರಬೇತಿದಾರರಿಗೆ ಸ್ಟೈಫಂಡ್‌ನ್ನು ರೂ.೧೫೦೦ಕ್ಕೆ ಏರಿಸಬೇಕು.
೪. ಕೈಗಾರಿಕೆಗಳಲ್ಲಿ ನೀಡುವತರಬೇತಿ ಭತ್ಯೆಯನ್ನು ಕನಿಷ್ಠ ಕೂಲಿಗೆ ಸರಿಸಮವಾಗಿ ನೀಡಲುಕ್ರಮ ಕೈಗೊಳ್ಳಬೇಕು.
೫. ಐಟಿಐಗಳಲ್ಲಿ ಖಾಲಿ ಇರುವತರಬೇತಿ ಸಿಬ್ಬಂದಿ ಹುದ್ದೆಗಳನ್ನು ಈ ಕೂಡಲೆ ಭರ್ತಿ ಮಾಡಬೇಕು.
೬. ಕುಡಿಯುವ ನೀರು, ಶೌಚಾಲಯ, ಸೂಕ್ತ ಗಾಳಿ-ಬೆಳಕು ಸೇರಿದಂತೆ ಮೂಲ ಸೌಕರ್ಯಗಳನ್ನು ಸರಿಪಡಿಸಬೇಕು.
೭. ಐಟಿಐತರಬೇತಿದಾರರಿಗೆ ಮಧ್ಯಾಹ್ನಉಚಿತ ಊಟ ಅಥವಾಉಪಹಾರಯೋಜನೆಜಾರಿಗೆತರಬೇಕು.
೮. ಓಅಗಿಖಿ ಮತ್ತುSಅಗಿಖಿ ನಡುವಿನ ತಾರತಮ್ಯವನ್ನು ನಿವಾರಿಸಬೇಕು. 
೯. ೨೦೧೪-೧೫ ನೇ ಸಾಲಿನಲ್ಲಿ ಪ್ರಾರಂಭವಾದ೧೦೦IಖಿI ಗಳಿಗೆ ಕಟ್ಟಡ, ಸಿಬ್ಬಂದಿ ಮತ್ತುಇತರೆ ಮೂಲ ಸೌಕರ್ಯಗಳನ್ನು  ತಕ್ಷಣವೇಒದಗಿಸಬೇಕು.
೧೦.ಐಟಿಐ ವಿದ್ಯಾರ್ಥಿಗಳಿಗಾಗಿ ಅವಶ್ಯಕತೆಇರುವ ಜಿಲ್ಲೆಗಳಲ್ಲಿ ಸಂಜೆ ಪಾಲಿಟೆಕ್ನಿಕ್‌ಗಳನ್ನು ಪ್ರಾರಂಭಿಸಬೇಕು. ತರಬೇತಿ ವಿರೋಧಿಯಾಗಿರುವ ಸೆಮಿಸ್ಟರ್ ಪದ್ಧತಿ ಕೈ ಬಿಟ್ಟುಹಿಂದಿನ ತರಬೇತಿ ಮತ್ತು ಪರೀಕ್ಷಾ ವಿಧಾನವನ್ನೇ ಮುಂದುವರೆಸಬೇಕು.

Leave a Reply

Top