ನಮ್ಮೂರಲ್ಲೂ ನಗರ ಸಂಚಾರಿ ಪೊಲೀಸ್ ಠಾಣೆ ಆರಂಭ

ಕೊಪ್ಪಳ ನಗರ ಸಂಚಾರಿ ಪೊಲೀಸ್ ಠಾಣೆಗೆ ಜಿ.ಪಂ. ಸಿಇಓ ರಾಜಾರಾಂ ಚಾಲನೆ
ಕೊಪ್ಪಳ. ಮೇ.   ಕೊಪ್ಪಳ ನಗರದ ಸಂಚಾರಿ ಪೊಲೀಸ್ ಠಾಣೆ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಬುಧವಾರ ನೆರವೇರಿಸುವುದರ ಸಂಚಾರಿ ಪೊಲೀಸ್ ಠಾಣೆ ಕಾರ್ಯ ನಿರ್ವಹಣೆಗೆ ಅಧಿಕೃತ ಚಾಲನೆ ನೀಡಿದರು.

  ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್.ರಾಜಾರಾಂ ಅವರು ನಗರದ ತಹಸಿಲ್ದಾರರ ಕಚೇರಿ ಪಕ್ಕದಲ್ಲಿರುವ ಪೊಲೀಸ್ ಸಮುದಾಯ ಭವನದ ಆವರಣದಲ್ಲಿ ಸಂಚಾರಿ ಪೊಲೀಸ್ ಠಾಣೆಯನ್ನು ಪ್ರಾರಂಭಿಸಲಾಯಿತು.  ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಪ್ರಕಾಶ ಮಾತನಾಡಿ, ನಗರಕ್ಕೆ ಸಂಚಾರಿ ಪೊಲೀಸ್ ಠಾಣೆ ಬೇಕು ಎಂಬ ಸಾರ್ವಜನಿಕರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ನಗರದಲ್ಲಿ ವಾಹನ ಸಂಚಾರ ಸುಗಮಗೊಳ್ಳಲು ಇಂದು ಸಂಚಾರಿ ಪೊಲೀಸ್ ಠಾಣೆಗೆ ಚಾಲನೆ ನೀಡಲಾಗಿದ್ದು, ಈ ಠಾಣೆಗೆ ೪೦ ಜನ ಪೊಲೀಸ್ ಸಿಬ್ಬಂದಿಗಳನ್ನು ತಾತ್ಕಾಲಿಕವಾಗಿ ನೇಮಕಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿಗಳನ್ನು ನೇಮಕಗೊಳಿಸಲಾಗುವುದು, ಕೊಪ್ಪಳ ನಗರಸಭೆ ವ್ಯಾಪ್ತಿ. ಭಾಗ್ಯನಗರ ಗ್ರಾ.ಪಂ. ಹಾಗೂ ಅಗ್ನಿಶಾಮಕ ದಳ ಕಚೇರಿವರೆಗೂ ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿ ಇದೆ ಎಲ್ಲ ಬಗೆಯ ವಾಹನ ಚಾಲಕರು, ವಾಹನ ಚಾಲನಾ ಸಮಯದಲ್ಲಿ ಚಾಲನಾ ಪರವಾನಿಗೆ, ವಾಹನದ ವಿಮೆ ಮತ್ತಿತರರ ಅಗತ್ಯ ದಾಖಲೆ ಪ್ರತಿಗಳನ್ನು ತಮ್ಮ ಬಳಿಯೇ ಇಟ್ಟುಕೊಂಡು ಚಾಲನೆ ಮಾಡಬೇಕು. ಅಧಿಕಾರಿಗಳ ತಪಾಸಣೆ ಸಂದರ್ಭದಲ್ಲಿ ಅಗತ್ಯ ದಾಖಲೆ ಪ್ರತಿಗಳನ್ನು ತೋರಿಸಿ ಸಹಕರಿಸುವಂತೆ ಸಂಚಾರಿ ಪೊಲೀಸ್ ಠಾಣೆ ಅಧಿಕಾರಿಗಳು ನಾಗರಿಕರಲ್ಲಿ ಮನವಿ ಮಾಡಿದರು.
  ಜಿ.ಪಂ.ಸದಸ್ಯ ಟಿ. ಜನಾರ್ಧನ ಹುಲಿಗಿ, ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್, ನಗರಸಭೆ ಸದಸ್ಯರಾದ ಮಾನ್ವಿ ಪಾಷಾ, ಮಹೆಬೂಬ ನಾಲಬಂದ, ಡಿವೈಎಸ್‌ಪಿ ವಿಜಯಕುಮಾರ ಡಂಬಳ, ಗ್ರಾಮೀಣ ಠಾಣೆ ಸಿಪಿಐ ವೆಂಕಟಪ್ಪ ನಾಯಕ, ನಗರ ಠಾಣೆ ಪಿಐ ಪ್ರಕಾಶ ಸಿಂಗ್ ಮತ್ತಿತರರು ಉಪಸ್ಥಿತರರಿದ್ದರು.
Please follow and like us:
error