fbpx

ವಿದ್ಯಾರ್ಥಿಗಳು ದಿನವೂ ನಿರಂತರವಾಗಿ ಅಧ್ಯಾಯನ ಮಾಡುವುದರ ಮೂಲಕ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯ- ಪಿ.ಚನ್ನಬಸವನಗೌಡ ಪಾಟೀಲ್.

ಸ್ಥಳೀಯ ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ  ಸ್ವಾಗತ ಕಾರ್ಯಕ್ರಮ ಹಾಗೂ ೨೦೧೫ -೧೬ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು. 
ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ  ಸಕ್ರೀಯವಾಗಿ ಪಾಲ್ಗೊಳ್ಳುವುದರ ಮೂಲಕ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಧೃಢವಾಗಲು ಸಾಧ್ಯ ಎಂದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹೊಸಬಂಡಿ ಹರ್ಲಾಪುರದ ಪ್ರಾಚಾರ್ಯರಾದ ಗುರುಬಸವರಾಜ್ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯರು ಬಸವರಾಜ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಮಹಮ್ಮದ್ ಮನಿಯಾರ್, ಟಿ.ಎಂ.ಲಿಂಗರಾಜ್, ವೈ.ಜಯಂತಿ ಮಾಲಾ, ಎರ್ರಿಸ್ವಾಮಿ ಪಾಟೀಲ್, ಚನ್ನಬಸಪ್ಪ, ಮಲ್ಲಿಕಾರ್ಜುನ ಬಿದರ ಕುಂದಿ, ಅಂಬಳಿ ವಿರೇಂದ್ರ, ಉಪಸ್ಥಿತರಿದ್ದರು ಹಾಗೂ  ವಿದ್ಯಾರ್ಥಿ ಭಾಗ್ಯಲಕ್ಷ್ಮಿ ನಿರೂಪಿಸಿ ವಿದ್ಯಾರ್ಥಿ ಜ್ಯೋತಿ ಗುನ್ನಾಳ್ ವಂದಿಸಿದರು,  
Please follow and like us:
error

Leave a Reply

error: Content is protected !!