ಸತ್ಸಂಗದಿದಲೇ ಸಾರ್ಥಕ ಬದುಕು.

  ಮನುಷ್ಯ ಸತ್ಸಂಗದಲ್ಲಿ ಹೆಚ್ಚಿನ ಸಮಯ ಕಳೆಯುವುದರ ಮೂಲಕ ತನ್ನ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು. ದದೇಗಲ್ ಸಿದ್ದಾರೂಢ ಮಠದ ಆತ್ಮಾನಂದ ಸ್ವಾಮಿಗಳು ನುಡಿದರು. ಅವರು ಭಾಗ್ಯನಗರದ ಸದಾನಂದ ಜ್ಞಾನಯೋಗಾಶ್ರಮದ ಲಕ್ಷ್ಮಪ್ಪ ದೇವರಕೊಳ್ಳದ ಯಜಮಾನರ ೧೪ ನೆಯ ಪುಣಾರಾಧನಾ ನಿಮಿತ್ತ ಜ ೧೮ ರಂದು ಏರ್ಪಡಿಸಿದ ಸತ್ಸಂಗ ಸಭೆಯ ಸಾನ್ನಿಧ್ಯವಹಿಸಿದ್ದರು. 
ಮನುಷ್ಯ ಜನ್ಮ ಬರುವುದು ದುರ್ಲಭ. ಬಂದಬಳಿಕ ಶರಿರವನ್ನು ಕ್ರಿಮಿಕೀಟ ಪ್ರಾಣಿಗಳಂತೆ ಕಳೆದುಕೊಳ್ಳದೆ ಸದ್ಗುರುಗಳ ಆಶೀರ್ವಾದದಿಂದ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು 
ಇದೇ ಸಂದರ್ಭದಲ್ಲಿ ಉಪನ್ಯಾಸ ನೀಡಿದ ಸಾಹಿತಿ ವೀರಣ್ಣ ಹುರಕಡ್ಲಿ ಗುರು ಎನ್ನುವನು ಒಬ್ಬನೇ ಯಾರು ನಿರ್ವಂಚನೆಯಿಂದ ಜ್ಞಾನಬೋಧನೆ ಮಾಡುತ್ತಾರೊ ಅವರೇ ನಿಜವಾದ ಗುರು ಎಂದರು. ಜ್ಞಾನಯೋಗಾಶ್ರಮದ ವಿಠ್ಠಪ್ಪ ಗೋರಂಟ್ಲಿ ಅಧ್ಯಕ್ಷತೆವಹಿಸಿದ್ದರು ದೇವರಕೊಳ್ಳ ಕುಟುಂಬದ ಹೈಕೋರ್ಟ ವಕೀಲರಾದ ಗುರುರಾಜ ಮತ್ತು ರಾಘವೇಂದ್ರ ಹಾಗೂ ಅಜ್ಜಿ ನಿಂಗಜ್ಜ, ಉಪಸ್ಥಿತರಿದ್ದರು. ಸ್ವಾತಂತ್ರ್ಯ ಹೋರಾಟಗಾರರಾದ ಹಾಗೂ ದಾನಿಗಳಾದ ಯಲ್ಲಪ್ಪರೆಡ್ಡಿ ಮಾದಿನೂರ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿಲಾಯಿತು. ಮಾತೋಶ್ರೀ ಗಂಗಮ್ಮನವರು ಮಾತನಾಡಿದರು. ವೀರಣ್ಣ ನಂದ್ಯಾಲ ಕಾರ್ಯಕ್ರಮವನ್ನು ನಿರೂಪಿಸಿದರು ಪ್ರಾರಂಭದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ ಗದ್ದುಗೆ ಪೂಜೆ ಮಾಡಿ ಕೊನೆಯಲ್ಲಿ  ಪ್ರಸಾದ ವಿತರಣೆ ಮಾಡಲಾಯಿತು.  

Leave a Reply