You are here
Home > Koppal News > ಶ್ರೀಗವಿಮಠದಲ್ಲಿ ೩೦ರಂದು ಅಕ್ಷರಾಭ್ಯಾಸ ಕಾರ್ಯಕ್ರಮ..

ಶ್ರೀಗವಿಮಠದಲ್ಲಿ ೩೦ರಂದು ಅಕ್ಷರಾಭ್ಯಾಸ ಕಾರ್ಯಕ್ರಮ..

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದಲ್ಲಿ ದಿನಾಂಕ ೩೦-೦೫-೨೦೧೪ ರಂದು ಶುಕ್ರವಾರ ಬೆಳಿಗ್ಗೆ ೯.೨೫ ಗಂಟೆಯಿಂದ ೧೧.೩೦ ರವರೆಗೆ ಶ್ರೀಮ.ನಿ.ಪ್ರ.ಜ.ಗವಿಸಿದ್ಧೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ  ಹೊಸದಾಗಿ ಶಾಲೆಗೆ ಸೇರುವ  ಮಕ್ಕಳಿಗೆ ಅಕ್ಷರಾಭ್ಯಾಸ ಪ್ರಾರಂಭ ಮಾಡಿಸುವಂತಹ  ಕಾರ್ಯಕ್ರಮ ಶ್ರೀ ಗವಿಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಲಿದೆ.
         ಅಂದು ಪೂಜ್ಯರ ಸಾನಿಧ್ಯದಲ್ಲಿ ಶ್ರೀಗಣಪತಿ ಹಾಗೂ ಮಹಾಸರಸ್ವತಿ ಪೂಜೆಯೊಂದಿಗೆ ಈ ಕಾರ್ಯಕ್ರಮ ಆರಂಭವಾಗುವದು. ಕೊಪ್ಪಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ಹೊಸದಾಗಿ ಶಾಲೆಗೆ ಸೇರಿಸುವ ಮುಂಚಿತವಾಗಿ ತಮ್ಮ ಮಕ್ಕಳನ್ನು ಶ್ರೀಗವಿಮಠಕ್ಕೆ ಕರೆತಂದು ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳ  ಸಾನಿಧ್ಯದಲ್ಲಿ  ಅಕ್ಷರಾಭ್ಯಾಸ  ಪ್ರಾರಂಭ ಮಾಡಿಸುವದರ ಮೂಲಕ  ತಮ್ಮ  ಮಕ್ಕಳ ಉಜ್ವಲ ಭವಿಷ್ಯ ಹಾಗೂ ಸಂಸ್ಕಾರಯುತ ಜೀವನ  ರೂಪಿಸುವಲ್ಲಿ ಪಾಲಕರು ನೆರವಾಗಬೇಕು.  ಈ ಕಾರ್ಯಕ್ರಮಕ್ಕೆ  ಹೆಚ್ಚು ಸಂಖ್ಯೆಯಲ್ಲಿ  ಪಾಲಕರು ತಮ್ಮ ಮಕ್ಕಳನ್ನು ಕರೆದುಕೊಂಡು ಹೊಸಪಾಟಿ/ನೋಟಬುಕ್, ಚಾಕ್ ಪೀಸ್/ಪೆನ್ಸಿಲ್‌ಗಳನ್ನು ತಂದು ಭಾಗಿಯಾಗುವದರ ಮೂಲಕ  ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಶ್ರೀಗವಿಮಠದ  ತಿಳಿಸಿದೆ. 

Leave a Reply

Top