You are here
Home > Koppal News > ಕಳಪೆ ಗುಣಮಟ್ಟದ ಔಷಧ ಪತ್ತೆ ಎಚ್ಚರಿಕೆಯ ಸೂಚನೆ

ಕಳಪೆ ಗುಣಮಟ್ಟದ ಔಷಧ ಪತ್ತೆ ಎಚ್ಚರಿಕೆಯ ಸೂಚನೆ

ಕೊಪ್ಪಳ,
ಜು. ೨೭ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಔಷಧ ಮಾರಾಟ
ಸಂಸ್ಥೆಗಳ ತಪಾಸಣೆ ಮಾಡಿ ಮಾದರಿ ಪಡೆದ ಔಷಧಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದ್ದು,
ವಿವಿಧ ಔಷಧಗಳು ಉತ್ತಮ ಗುಣಮಟ್ಟ ಹೊಂದಿಲ್ಲವೆಂದು ಘೋಷಿಸಲ್ಪಿಟ್ಟಿವೆ. ಸಾರ್ವಜನಿಕರು ಈ
ಕೆಳಗಿನ ಬ್ಯಾಚ್ ಸಂಖ್ಯೆಯ ಔಷಧಗಳನ್ನು ಉಪಯೋಗಿಸಬಾರದು ಹಾಗೂ ಎಚ್ಚರಿಕೆ ವಹಿಸುವುದು
ಅಗತ್ಯವಾಗಿದೆ ಎಂದು  ಕೊಪ್ಪಳ ಸಹಾಯಕ ಔಷಧ ನಿಯಂತ್ರಕ ರೇಣುಕಸ್ವಾಮಿ ಅವರು
ತಿಳಿಸಿದ್ದಾರೆ.
     ಔಷಧಿ ಹೆಸರು, ಬ್ಯಾಚ್ ಸಂಖ್ಯೆ ಹಾಗೂ ತಯಾರಕರ ವಿವರ
ಇಂತಿದೆ.  ಪ್ಯಾರಾಸೆಟಮಾಲ್ ಪ್ಯಾರಾರಿಕ್ಸ್ ೬೫೦, ಬ್ಯಾಚ್ ಸಂ: ಜಿಟಿ-೭೪೧, ಝೀ
ಲ್ಯಾಬೊರೆಟರೀಸ್ ಲಿಮಿಟೆಡ್, ಸಾಹಿಬ್- ೧೭೩೦೨೫.  ಅಗರಾಲ್ ಎಮಲ್ಷನ್, ಬ್ಯಾಚ್ ನಂ.
೪೨೦-೦೯೧೦೩೦, ಮೆ: ಪಿಫೈಜ್ಹರ್ ಲಿಮಿಟೆಡ್, ಪುಣೆ.  ಲಿವೋಜಿನ್, ಬ್ಯಾಚ್ ಸಂ. ಎಂ.ಟಿ.
೧೩ಎಲ್೨೩, ಮೆ: ಮಾರ್ಟಿನ್ ಅಂಡ್ ಬ್ರೌನ್ ಬಯೋ ಸೈನ್ಸ್, ಸೋಲನ್ (ಹಿಮಾಚಲ ಪ್ರದೇಶ್),
ಪವೊಡಿನ್ ಐಯೋಡಿನ್ ಸಲ್ಯೂಷನ್.  ಬ್ಯಾಚ್ ಸಂ. ೦೧೧, ಮೆ: ಮೆಡಿಸ್ಮಿತ್ ಫಾರ್ಮ ಲ್ಯಾಬ್,
ಕುವೆಂಪು ನಗರ, ಬೆಂಗಳೂರು.  ವೊಮಿಯೋನ್ ಸಿರಪ್, ಬ್ಯಾಚ್ ಸಂ. ಐಪಿವಿ ೧೩೧೨೦೧, ಮೆ:
ಮೆರಿನೊ ಲ್ಯಾಬರೇಟರಿಸ್ ಪ್ರೈ.ಲಿ. ಪ್ರಶಾಂತನಗರ, ಹೈದ್ರಾಬಾದ್.  ವೆರಾಲ್ ೬೫೦ ಡಿಟಿ.
ಬ್ಯಾಚ್ ಸಂ. ವಿಆರ್‌ಎಲ್-೧೦೩, ಮೆ: ಎಂಬಯೋಟಿಕ್ ಲ್ಯಾಬೊರೆಟರಿಸ್ ಪ್ರೈ.ಲಿ.
ಕುಂಬಳಗೋಡು, ಬೆಂಗಳೂರು.  ಸಿಫಡ್ರಾಕ್ಸಿಲ್ ಡಿಟಿ ೧೨೫.  ಬ್ಯಾಚ್ ಸಂ. ಸಿಎಫ್‌ಕೆ ೮೦,
ಮೆ: ಮಹೇಂದ್ರ ಲ್ಯಾಬ್ಸ್ ಪ್ರೈ.ಲಿ. ಪೀಣ್ಯ ಇಂಡಸ್ಟ್ರಿಯಲ್ ಏರಿಯಾ, ಬೆಂಗಳೂರು.
    
ಔಷಧಿ ವ್ಯಾಪಾರಿಗಳು, ವೈದ್ಯರು, ಆಸ್ಪತ್ರೆಗಳು ಈ ಮೇಲಿನ ಔಷಧಗಳನ್ನು ದಾಸ್ತಾನು
ಮಾಡುವುದಾಗಲಿ, ಮಾರಾಟ ಮಾಡುವುದಾಗಲಿ, ಉಪಯೋಗಿಸುವುದಾಗಲಿ ಮಾಡಬಾರದು. ಯಾರಾದರೂ ಈ
ಔಷಧಿಗಳ ದಾಸ್ತಾನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ  ಕ್ಷೇತ್ರದ ಔಷಧ ಪರಿವೀಕ್ಷಕರು
ಅಥವಾ ಸಹಾಯಕ ಔಷಧ ನಿಯಂತ್ರಕರು ೦೮೫೩೯-೨೨೧೫೦೧ ಗಮನಕ್ಕೆ ತರುವಂತೆ
ತಿಳಿಸಿದ್ದಾರೆ. 

Leave a Reply

Top