ವೈಶ್ಯ ಎಂದು ನಮೂದಿಸಿ

 ಹೊಸಪೇಟೆ: ಆರ್ಯವೈಶ್ಯ ಸಮಾಜವು ಸಮೀಕ್ಷೆಗೆ ಬಂದಾಗ ವೈಶ್ಯ ಜಾತಿ ಎಂದು ನಮೂದಿಸಬೇಕೆಂದು ಆರ್ಯವೈಶ್ಯ ಸಮಾಜ ತಿಳಿಸಿದೆ.
ಸಮಾಜದ ಕಾರ್ಯದರ್ಶಿ ಭೂಪಾಳ್ ರಾಘವೇಂದ್ರಶೆಟ್ಟಿ ಈ ಕುರಿತು ಪತ್ರಿಕಾಹೇಳಿಕೆ ನೀಡಿದ್ದು, ಧರ್ಮ ಹಿಂದೂ ಎಂದು ಜಾತಿ ಕಾಲಂನಲ್ಲಿ ಕೋಡ್ ನಂ.೧೨೮೯ ವೈಶ್ಯ ಎಂದು ಉಪಜಾತಿ ಕಾಲಂನಲ್ಲಿ ಕೋಡ್‌ನಂ.೦೦೫೨ ಆರ್ಯವೈಶ್ಯ ಎಂದು ನಮೂದಿಸಬೇಕೆಂದು ಕೋರಿದ್ದಾರೆ. 
ಹೊಸಪೇಟೆ: ಕಮಲಾಪುರದ ೧೧ನೇ ವಾರ್ಡಿನ ೨೨ನೇ ಅಂಗನವಾಡಿ ಕೇಂದ್ರಕ್ಕೆ ಶುಕ್ರವಾರ ರಾಜ್ಯಸರ್ಕಾರದ ಪ್ರಧಾನ ಕಾರ್ಯದರ್ಶಿ ರಜನೀಶ್ ಗೊಯಲ್ ಕೇಂದ್ರದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಅಂಗನವಾಡಿ ಕಾರ್ಯಕರ್ತೆ ಪಿ.ಚಂದ್ರಕಲಾ ಕೇಂದ್ರವನು ಚೆನ್ನಾಗಿಟ್ಟುಕೊಂಡು ಮಕ್ಕಳಿಗೆ ಅಕ್ಷರ ಜ್ಞಾನವನ್ನು ಪರಿಚಯಿಸುತ್ತಿದ್ದಾರೆಂದು ಸಂದರ್ಶನ ಪುಸ್ತಕದಲ್ಲಿ ಸಂತಸ ವ್ಯಕ್ತ ಪಡಿಸಿದ್ದಾರೆ. ಕಮಲಾಪುರ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮುಕ್ತಿಯಾರ್ ಪಾಷಾ, ಪಂಚಾಯ್ತಿ ಮುಖ್ಯಾಧಿಕಾರಿ ಉಮೇಶ ಕೆ. ಹಿರೇಮಠ, ಶಿಶುಅಭಿವೃದ್ಧಿ ಅಧಿಕಾರಿ ಬಾಬು ಕಲಾದಗಿ, ರಾಜ ನಾಯಕ, ಯೋಜನಾಧಿಕಾರಿ ಪ್ರಭಾಕರ, ಮೇಲ್ವೇಚಾರಕಿ ಎಲ್.ಡಿ.ನದಾಫ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. 

Leave a Reply