fbpx

ಧೂಳು ಮುಕ್ತ ಕೊಪ್ಪಳ ಹೋರಾಟ ಸಮಿತಿಯ ಮಹಿಳಾ ಪ್ರತಿಭಟನೆ ಕಾರರ ಮೇಲಿನ ಹಲ್ಲೆ ಖಂಡಿಸಿ.

ಕೊಪ್ಪಳ -03-  ೦೧ ರಂದು ಧೂಳು ಮುಕ್ತ  ಹೋರಾಟ ಸಮಿತಿಯ ಮಹಿಳಾ  ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದು ಅಲ್ಲದೆ ಅವಾಚ್ಚ ಶಬ್ದಗಳಿಂದ ನಿಂದಿಸಿದಂತ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಿಯವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ನಿಮ್ಮ ಕೆಲಸ ನೀವು ಸರಿಯಾಗಿ ಮಾಡಿದರೆ ಸಾರ್ವಜನಿಕರು ಪ್ರತಿಭಟನೆ ಮಾಡುವ ಪ್ರಸಂಗವೆ ಬರುತ್ತಿರಲಿಲ್ಲ.
    ಸಚಿವರು ಪ್ರಮಾಣ ವಚನ ಸ್ವಿಕಾರ ಮಾಡಿದ ದಿನದಿಂದ ಜನ ವಿರೋಧಿ ನೀತಿಯೇ ಅನುಸರಿಸಿದ್ದಾರೆ ಹೊರತು ಜನಪರ ಯೋಜನೆಗಳಿಂದ ಜನರಿಗೆ ಬೇಕಾದಂತಹ ಸೌಲಭ್ಯವನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ. ಜನರಿಗೆ ಕೊಟ್ಟಿದ್ದೇನ್ನು ಎಂದರೇ, ಯಲ್ಲಾಲಿಂಗ ಎನ್ನುವ ವಿದ್ಯಾರ್ಥಿಗೆ ಸಾವು ಭಾಗ್ಯ, ದಲಿತರಿಗೆ ದೌರ್ಜನ್ಯ ಭಾಗ್ಯ, ಜನ ಸಾಮಾನ್ಯರಿಗೆ, ಕಲುಷಿತ ನೀರು ಮತ್ತು ಧೂಳಿನಿಂದ ಅನಾರೋಗ್ಯ ಭಾಗ್ಯ, ಇದೇ ಇವರ ಸಾಧನೆಯಾಗಿತ್ತು. ಆದರೆ ಇವಾಗ

ಅದನ್ನು ವಿರೋಧ ಮಾಡಿ ಪ್ರತಿಭಟನೆ ಮಾಡುವ ಸಾರ್ವಜನಿಕರಿಗೆ ಜೈಲು ಭಾಗ್ಯ. ಇದೇನಾ ಇವರು ಜನರಿಗೆ ಕೊಡುವಂತಹ ಭಾಗ್ಯಗಳು, ಕೊಪ್ಪಳದಲ್ಲಿ ಜಿಲ್ಲಾಧಿಕಾರಿಯಿಲ್ಲದೆ ೨ ತಿಂಗಳು ಕಳೆದಿದೆ ಅದು ಬಗ್ಗೆ ಗಮನ ಹರಿಸದ ಸಚಿವರು ಈ ದಿನ ತಮಗೆ ಅಗೌರವ ಆಯಿತಂತೆ ಅದಕ್ಕೆ ಸಾರ್ವಜನಿಕರ ಮೇಲೆ ಕೇಸ ದಾಖಲಿಸತ್ತಾರಂತೆ ಇದು ಎಂತಹ ದುರದೈವ ಸ್ವಾಮಿ ಸಚಿವರ ರೀತಿಯಾ ನಿಮ್ಮ ನಡೆ ನಿಜಕ್ಕೂ ವಿಷಾದನೀಯ ತಾವು ನಿಜವಾಗಿಯು ಜನರಿಗಾಗಿ ಏನಾದರೂ ಮಾಡಬೇಕೆಂದರೆ ದಯವಿಟ್ಟು ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡಿ. ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ನಗರ ಸಹ ಕಾರ್ಯದರ್ಶಿ ಮುಕುಂದ ಕರುರ್ಣ ತಿಳಿಸಿದ್ದಾರೆ.

Please follow and like us:
error

Leave a Reply

error: Content is protected !!