ಶಾಸಕ ಕರಡಿ ಸಂಗಣ್ಣ ಮತ್ತು ಬೆಂಬಲಿಗರ ಬಂಧನ,ಬಿಡುಗಡೆ

ಕೊಪ್ಪಳ : ಮುಖ್ಯಮಂತ್ರಿಗಳ ಸೀರೆ ವಿತರಣೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಶಾಸಕ ಕರಡಿ ಸಂಗಣ್ಣ ಮತ್ತು ಅವರ ಬೆಂಬಲಿಗರನ್ನು ಜಿಲ್ಲಾಡಳಿತ ಭವನದ ಹತ್ತಿರವೇ ತಡೆದು ನಿಲ್ಲಿಸಿದ ಪೋಲೀಸರು ನಂತರ ಅವರನ್ನ ಬಂಧಿಸಿ ಗದಗ್ ಗೆ ಕರೆದೊಯ್ದರು. ಬಂಧನ ಸಮಯದಲ್ಲಿ ಶಾಸಕರ ಬೆಂಬಲಿಗರು ಮತ್ತು ಪೋಲೀಸರ ನಡುವೆ ಘರ್ಷಣೆ ನಡೆಯಿತು. ಇದರಿಂದ ಪೋಲೀಸರು ಲಘು ಲಾಠಿ ಪ್ರಹಾರ ಮಾಡಿ ಅವರನ್ನು ಚದುರಿಸಿದರು. ನಂತರ ಶಾಸಕರನ್ನು ಮತ್ತು ಅವರ ಬೆಂಬಲಿಗರನ್ನು ಪೊಲೀಸ್ ವ್ಯಾನ್ ನಲ್ಲಿ ಹತ್ತಿಸಿದರು. ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ, ಪೊಲೀಸ್ ವರಿಷ್ಠಾಧಿಕಾರಿ ಈಶ್ವರ ಚಂದ್ರಸಾಗರ ಶಾಸಕರ ಜೊತೆ ಸಂಧಾನ ನಡೆಸಲು ಯತ್ನಿಸಿದರು. ಶಾಸಕರು ಪೊಲೀಸರ ಕ್ರಮವನ್ನು ವಿರೋಧಿಸಿದಾಗ ಅವರನ್ನು ಗದಗ್ ಗೆ ಕರೆದೊಯ್ಯಲಾಯಿತು. ನಂತರ ಅವರನ್ನು ಅಲ್ಲಿ ಬಿಡುಗಡೆ ಮಾಡಲಾಯಿತು.
ಯಡಿಯೂರಪ್ಪನವರು ಹಿಟ್ಲರ್ ನ ಆಡಳಿತ ನಡೆಸುತ್ತಿದ್ದಾರೆ. ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಕರಡಿ ಸಂಗಣ್ಣ ಆರೋಪಿಸಿದರು.
Please follow and like us:
error