ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಅಕ್ರಮ: ತನಿಖೆಗೆ ಎಸ್.ಎಫ್.ಐ ಒತ್ತಾಯ

          ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನ ಪ್ರಾಚಾರ್ಯ ರಾಘವೇಂದ್ರಾಚಾರ್ಯ ಬ್ರಷ್ಟಾಚಾರ ನಡೆಸುವುದರಲ್ಲಿ ಸಾಕಷ್ಟು ತರಬೇತಿಯನ್ನು ಪಡೆದುಕೊಂಡಂತೆ ಕಾಣಿಸಯತ್ತಿದೆ.ಕಾಲೇಜು ಅಭಿವೃದ್ಧಿ ಕಡೆ ಗಮನ ಹರಿಸದೆ, ಸದಾ ಬ್ರಷ್ಟಾಚಾರ ಮತ್ತು ವಿವಾದಗಳನ್ನು ಸೃಷ್ಠಿಸಿಕೊಳ್ಳುವಲ್ಲಿ ಇವರು ಕಾರ್ಯನಿರತರಾಗಿದ್ದೆ ಹೆಚ್ಚು.
ಅತಿಥಿ ಉಪನ್ಯಾಸಕರನ್ನು ನೇಮಕ ಮಾಡುವಾಗ, ಸೇವೆಯಲ್ಲಿ ಅನುಭವವಿರುವ ಮತ್ತು ಸ್ನಾತ್ತಕೋತ್ತರ ಪದವಿಯಲ್ಲಿ ಶೆ ೫೫% ಅಂಕಗಳಿಗಿಂತಲೂ ಹೆಚ್ಚು ಅಂಕಗಳಿಸಿರುವ, ಮತ್ತು ಪಿ.ಎಚ್.ಡಿ, ನೆಟ್, ಸೆಟ್ ಪದವಿ ಪಡೆದವರಿಗೆ ಮೊದಲ ಆಧ್ಯತೆ ನೀಡಬೇಕು ಎಂದು ವಿಶ್ವ ವಿದ್ಯಾಲಯ ನಿಯಮಾವಳಿಗಳನ್ನು ಅಳವಡಿಸಿದೆ. ಆದರೆ ಕೊಪ್ಪಳದ ಸರಕಾರಿ ಪದವಿ ಕಾಲೇಜಿಗೆ ಮಾತ್ರ ಈ ನಿಯಮಾವಳಿ ಅನ್ವಯವಾಗುತ್ತಿಲ್ಲವೆಂಬುದು ಈಗ ನಡೆದಿರುವ ನೇಮಕಾತಿಯನ್ನು ನೋಡಿದರೆ ಗೊತ್ತಾಗುತ್ತದೆ. ಅದೆ ಕಾಲೇಜಿನಲ್ಲಿ ೭ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ಕನ್ನಡ ಉಪನ್ಯಾಸಕ ಶಿವಪ್ರಸಾದ್ ಹಾದಿಮನಿಯವರನ್ನು ಕಡಿಮೆ ಅಂಕಗಳ ನೆಪವೊಡ್ಡಿ ಆಯ್ಕೆ ಪಟ್ಟಿಯಿಂದ ಕೈಬಿಡಲಾಗಿದೆ. ಅವರ ಅನುಭವವನ್ನು ಪರಿಗಣನೆಗೆ ತೆಗೆದುಕೊಳ್ಳದೆ ಅವರಿಗೆ ಅನ್ಯಾಯ ಮಾಡಲಾಗಿದೆ. ಶಿಕ್ಷಣ ಶಾಸ್ತ್ರ ವಿಷಯದಲ್ಲಿಯೂ ಅಂತಹದ್ದೆ ಅನ್ಯಾಯ ಮಾಡಲಾಗಿದೆ. ಅರ್ಜಿ ಹಾಕಿರುವ ಉಪನ್ಯಾಸಕರಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ, ಎಂ.ಎ, ಎಂ.ಎಡ್, ಪಿ.ಎಚ್.ಡಿ ಮುಗಿಸಿರುವ ಬಸವರಾಜ್ ಹುಳಕಣ್ಣನವರ್(೭೬.೯೨) ಅವರನ್ನು ಕೈಬಿಟ್ಟು. ಕಡಿಮೆ ಅಂಕ ಪಡೆದಿರುವ, ಆಯ್ಕೆಗೆ ಯೋಗ್ಯರಾಗಿರದ ನಾಗರಾಜ್ ಅಂಗಡಿಯವರನ್ನು ನೇಮಕ ಮಾಡಲಾಗಿದೆ. ೨೦೧೦.೧೧ ರಿಂದ ಅಂಗಡಿಯವರು ಕೇವ ಎಂ.ಎಡ್‌ನ ಪ್ರಥಮ ವರ್ಷದ ಅಂಕಪಟ್ಟಿ ನೀಡಿ ಅಕ್ರಮವಾಗಿ ಭೋಧನೆ ಮಾಡುತ್ತಿದ್ದಾರೆ. ಶೈಕ್ಷಣಿಕ ಅರ್ಹತೆ ಇಲ್ಲದಿವರನ್ನು ನೇಮಕಮಾಡಿಕೊಂಡು ವಿ.ವಿ ನಿಯಮಗಳನ್ನು ಗಾಳಿಗೆ ತೋರಲಾಗಿದೆ. ಇದಕ್ಕೆ ಸಂಬಂಧಪಟ್ಟ ಸೂಕ್ತ ದಾಖಲೆಗಳು ಎಸ್.ಎಫ್.ಐ ನಾಯಕರ ಬಳಿ ಲಭ್ಯವಿವೆ.
೨೦೦೯ರಿಂದಲೂ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ವಿ.ವಿ ಗಮನಕ್ಕೆ, ಸಂಬಧಪಟ್ಟ  ಅಧಿಕಾರಿಗಳ ಗಮನಕ್ಕೆ ತಂದರು ಕ್ರಮ ಜರುಗಿಸಲು ಹಿಂದೇಟಾಕುತ್ತಿರುವುದರ ಒಳಾರ್ಥ ಮಾತ್ರ ಅರ್ಥವಾಗುತ್ತಿಲ್ಲ. ವಿದ್ಯಾರ್ಥಿಗಳ ಶಿಶ್ಯ ವೇತನದಲ್ಲಿ, ಅತಿಥಿ ಉಪನ್ಯಾಸಕರ ವೇತನದಲ್ಲಿ ಕಾಲೇಜಿಗೆ ಬಂದ ಅನುದಾನವನ್ನು ದುರ್ಭಳಿಕೆ ಮಾಡಿಕೊಂಡಿದ್ದಾರೆ ಎಂದು ತನಿಖೆಯಿಂದ ಸಾಬಿತಾಗಿದ್ದರೂ. ಈಗ ಮತ್ತೆ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಅಕ್ರಮವೆಸಗುವುದು ಮುಂದುವರಿದಿದೆ. ಪ್ರಾಚಾರ್ಯ ಬ್ರಷ್ಠಾಚಾರಕ್ಕೆ ವಿ.ವಿ ಮತ್ತು ಅಧಿಕಾರಿಗಳೆ ರಕ್ಷಣೆಗೆ ನಿಂತಂತೆ ಕಾಣುತ್ತದೆ.
ಕೂಡಲೆ ಸಂಬಂಧ ಪಟ್ಟ ಅಧಿಕಾರಿಗಳು ಹುಚ್ಚುವರಿ ತನಿಖೆ ನಡೆಸಿ ಕಾಲೇಜಿನ ಅಭಿವೃದ್ಧಿ, ವಿದ್ಯಾರ್ಥಿಗಳಿಗೆ ಸೌಲಭ್ಯ ನೀಡುವತ್ತ ಗಮನ ಹರಿಸಲಿ ಎಂದು ಎಸ್.ಎಫ್.ಐ ಒತ್ತಾಯಿಸುತ್ತದೆ.
ಗುರುರಾಜ್ ದಾಸಾಯಿ    ಜಿಲ್ಲಾಧ್ಯಕ್ಷ    ಮಾರುತಿ ಮ್ಯಾಗಳಮನಿ     ತಾಲೂಕಾಧ್ಯಕ್ಷ     ಸುಬಾನ್ ಸೈಯ್ಯದ ತಾಲೂಕ್ ಕಾರ್ಯದರ್ಶಿ
                 
Please follow and like us:
error