ಕಾರ್ಮಿಕ ಕಲ್ಯಾಣ ನಿಧಿಗೆ ವಂತಿಗೆ ಪಾವತಿಸಲು ಸೂಚನೆ

ಕೊಪ್ಪಳ ನ. : ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾರ್ಖಾನೆಗಳು, ಪ್ಲಾಂಟೇಶನ್‌ಗಳು, ಕಾರ್ಯಾಗಾರಗಳು, ಮೋಟಾರು ವಾಹನ ಸಂಸ್ಥೆಗಳ ಮಾಲೀಕ ವರ್ಗದವರು ನೇಮಿಸಿಕೊಂಡಿರುವ ವೇತನ ಪಡೆಯುತ್ತಿರುವ ಪ್ರತಿ ಸಿಬ್ಬಂದಿಗಳಿಗನುಗುಣವಾಗಿ ಕಾರ್ಮಿಕ ಕಲ್ಯಾಣ ನಿಧಿಗೆ ವಂತಿಗೆ ಪಾವತಿಸುವಂತೆ ಸೂಚನೆ ನಿಡಲಾಗಿದೆ.
  ಪ್ರತಿ ಸಿಬ್ಬಂದಿ ನೌಕರರ ವಂತಿಕೆಯನ್ನು ಸರ್ಕಾರಿ ಅಧಿಸೂಚನೆಯನ್ವಯ ರೂ. ೬, ಅದಕ್ಕೆ ಮಾಲೀಕರ ವಂತಿಕೆ ರೂ. ೧೨ ರಂತೆ ಪ್ರತಿ ಸಿಬ್ಬಂದಿಗೆ ಒಟ್ಟು ರೂ. ೧೮ ರಂತೆ ನಮೂನೆ ಡಿ ನೊಂದಿಗೆ ಕಡ್ಡಾಯವಾಗಿ ಪಾವತಿಸಬೇಕು.  ಅದೇ ರೀತಿ ೫೦ ಮತ್ತು ಅದಕ್ಕಿಂತ ಹೆಚ್ಚಿನ ನೌಕರರರನ್ನು (ಬೌದ್ಧಿಕ ಕೆಲಸ ಮಾಡುವ ಎಲ್ಲಾ, ನುರಿತ ನೌಕರು ಹಾಗೂ ಆಡಳಿತ ವರ್ಗದ ನೌಕರರೂ ಸೇರಿ) ನೇಮಿಸಿಕೊಂಡ ಎಲ್ಲಾ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, ಚಾರಿಟೆಬಲ್ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ ಅಡಿಯಲ್ಲಿ ನೋಂದಣಿಯಾದ ಎಲ್ಲಾ ಸಂಘ ಸಂಸ್ಥೆಗಳ ಮಾಲೀಕ ವರ್ಗದವರು ಕಡ್ಡಾಯವಾಗಿ ಮೇಲೆ ತಿಳಿಸಿರುವ ದರಗಳಂತೆ ಕಾರ್ಮಿಕ ಮತ್ತು ಮಾಲೀಕರ ವಂತಿಗೆಯನ್ನು ಪಾವತಿಸಬೇಕು.  ಅಧಿನಿಯಮ ೭ ರಂತೆ ಕಾರ್ಮಿಕರಿಗೆ ಪಾವತಿಯಾಗದೇ ಇರುವ ಬಾಕಿ ವೇತನ ಹಾಗೂ ಇತರ ಭತ್ಯೆಗಳು, ಬೋನಸ್ ಮತ್ತು ದಂಡದ ರೂಪದಲ್ಲಿ ವಸೂಲು ಮಾಡಿ ಸಂಗ್ರಹಿಸಿರುವ ಮೊತ್ತ ಸೇರಿಸಿ ಕಡ್ಡಾಯವಾಗಿ ಕಲ್ಯಾಣ ಮಂಡಳಿಗೆ ಪಾವತಿಸಬೇಕು, ನಿಯಮ ಉಲ್ಲಂಘಿಸಿ, ವಿಳಂಬವಾಗಿ ಪಾವತಿಸುವ ಮಾಲೀಕರು ಶೇ. ೧೮ ರಂತೆ ಬಡ್ಡಿ ತೆರಬೇಕಾಗುತ್ತದೆ.  ಅಲ್ಲದೆ ಅಂತಹ ಮಾಲೀಕರ ವಿರುದ್ಧ  ಮೊಕದ್ದಮೆ ದಾಖಲಿಸಿ, ರೂ. ೫೦೦ ರಿಂದ ೧೦೦೦ ಗಳ ದಂಡ ಹಾಗೂ ಮೂರರಿಂದ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.  ಈ ಕಾಯ್ದೆಯಡಿ ಪಾವತಿಸಬೇಕಾದ ವಂತಿಗೆ ಹಾಗೂ ಕಾರ್ಮಿಕರು ಸ್ವೀಕರಿಸದೆ, ಪಾವತಿಯಾಗದೆ ಬಾಕಿ ಇರುವ ಮೊತ್ತವನ್ನು ೨೦೧೨ ರ ಜನವರಿ ೧೫ ರೊಳಗಾಗಿ ಕಲ್ಯಾಣ ಆಯುಕ್ತರು, ಕರ್ನಾಟಕ ಕಾರ್ಮಿಕ ಕಲ್ಯಾಣ ಭವನ, ನಂ. ೪೮, ೨ನೇ ಮಹಡಿ, ಮತ್ತಿಕೆರೆ ಮುಖ್ಯರಸ್ತೆ, (ಆರ್.ಟಿ.ಓ. ಕಚೇರಿ ಹತ್ತಿರ) ಯಶವಂತಪುರ, ಬೆಂಗಳೂರು-೨೨ ಇವರಿಗೆ ಪಾವತಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಆಯುಕ್ತರನ್ನು ದೂರವಾಣಿ ಸಂ: ೦೮೦-೨೩೫೭೦೨೬೬ ಕ್ಕೆ ಸಂಪರ್ಕಿಸುವಂತೆ ಕಲ್ಯಾಣ ಆಯುಕ್ತರಾದ ಡಾ. ಗಿರಿಜಾ ಹೆಚ್. ಕೊಂಗಿ ಅವರು   ತಿಳಿಸಿದ್ದಾರೆ.

Related posts

Leave a Comment