ಜಿಲ್ಲೆಯಿಂದ ೩೦ ಸಾವಿರ ಜನತೆ ತೇರಳುವ ನಿರೀಕ್ಷೆ : ಕೆ.ಎಂ.ಸಯ್ಯದ್

ಬಿಎಸ್‌ಆರ್ ಕಾಂಗ್ರೆಸ್ ರಾಯಚೂರು ಐತಿಹಾಸಿಕ ಬೃಹತ್ ಸಮಾವೇಶ
ಕೊಪ್ಪಳ,ಫೆ.೧೨: ಇದೇ ದಿ. ೧೩ ರಂದು ಬುಧವಾರ ನೆರೆಯ ರಾಯಚೂರನಲ್ಲಿ ನಡೆಯುವ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ರಾಜ್ಯಮಟ್ಟದ ಐತಿಹಾಸಿಕ ಮಹಾ ಸಮಾವೇಶಕ್ಕೆ ಜಿಲ್ಲೆಯಿಂದ ೩೦ ಸಾವಿರಕ್ಕೂ ಅಧಿಕ ಜನತೆ ತೇರಳುವ ನಿರೀಕ್ಷೆ ಇದೆ ಎಂದು ಸಯ್ಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಕೆ.ಎಂ.ಸಯ್ಯದ್ ರವರು ಹೇಳಿದರು.
 ರಾಯಚೂರು ನಗರದ ಹೊರವಲಯದ ಲಿಂಗಸ್ಗೂರು ರಸ್ತೆಯ ಸಾತ್‌ಮೈಲ್ ಕ್ರಾಸ್ ಹತ್ತಿರ ನಾಳೆ ಹಮ್ಮಿಕೊಂಡಿರುವ ಬೃಹತ್ ಐತಿಹಾಸಿಕ ಸಮಾವೇಶಕ್ಕೆ ಜಿಲ್ಲೆಯ ೫ ಕ್ಷೇತ್ರಗಳಿಂದ ಬಾರಿ ಪ್ರಮಾಣದ ಜನತೆ ತೇರಳಿದೆ. ನಮ್ಮ ಲೆಕ್ಕಾಚಾರಕ್ಕಿಂತ ಅಭಿಮಾನಿಗಳ ಸಂಖ್ಯೆ ಹೆಚ್ಚಿದ್ದು, ಈಗಾಗಲೇ ಕೇವಲ ಕೊಪ್ಪಳ ಕ್ಷೇತ್ರ ವ್ಯಾಪ್ತಿಯಿಂದ ೧೧ ಬಸ್ ಹಾಗೂ ೧೦೦ ಕ್ರಶರ್ ಹಾಗೂ ಇತರೆ ವಯಕ್ತಿಕ ವಾಹನಗಳ ಮೂಲಕ ಸುಮಾರು ೮ ರಿಂದ ೧೦ ಸಾವಿರ ಜನತೆ ಸಮಾವೇಶಕ್ಕೆ ತೇರಳಲು ವ್ಯವಸ್ಥೆ ಕಲ್ಪಿಸಲಾಗಿದ್ದು ಒಟ್ಟಾರೆ ಜಿಲ್ಲೆಯ ೫ ವಿಧಾನಸಭಾ  ಕ್ಷೇತ್ರಗ ಳಿಂದ ಸುಮಾರ ೩೦ ರಿಂದ ೪೦ ಸಾವಿರ ಜನತೆ ತೇರಳುವ ನಿರೀಕ್ಷೆ ಇದೆ.
ಈ ಸಮಾರಂಭದಲ್ಲಿ ಸ್ವಾಭಿಮಾನಿ ಶ್ರೀರಾಮುಲು ರವರು ಪರಿಶಿಷ್ಟರಲ್ಲಿ ಸ್ವಾಭಿಮಾನ ಹಾಗೂ ಶಕ್ತಿ ತುಂಬುವ ಕಾರ್ಯ ಇದಾಗಿದ್ದು. ಶೋಷಣೆ ತುಳಿತಕ್ಕೊಳಗಾಗಿರುವ, ಧ್ವನಿ ಇಲ್ಲದವರ ಧ್ವನಿಯಾಗುವ ಸಾಮಾಜಿಕ ನ್ಯಾಯ ಓದಗಿಸಿ ಕೋಡುವ ಮಹಾನ್ ಸಮಾವೇಶ ಇದಾಗಿದೆ. ೧೫೦ ಕ್ಕೂ ಹೆಚ್ಚು ಉಪಜಾತಿ ಹೊಂದಿರುವ ದಲಿತಶಕ್ತಿಗೆ ಹೊಸಶಕ್ತಿ ನೀಡುವ ಬಹುಸಂಖ್ಯಾತ ಜನಶಕ್ತಿಗೆ ಹೊಸ ಆಶಾಕಿರಣ ಸ್ವಾಭಿಮಾನಿ ಶ್ರೀರಾಮುಲು ರವರು ಜನೆತೆಗೆ ವಿಶೇಷ  ಪರಿವರ್ತನೆಯ ದಿಕ್ಸೂಚಿ ನೀಡಲಿದ್ದಾರೆ ಎಂದು ಅವರಿಲ್ಲಿ ತಿಳಿಸಿದರು. ಈ ಸಂದ ರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತರ ಯುವ ಸಂಘಟನಾ ಕಾರ್ಯದರ್ಶಿ ಮಹಿಬೂಬ ಮುಲ್ಲಾ ಹನುಮಸಾಗರ, ತಾಲೂಕಾಧ್ಯಕ್ಷ ಪ್ರಭುಗೌಡ ಪಾಟೀಲ್, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಮಾಮ್ ಸಾಬ್ ಬಿಜಾಪುರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕುಮಾರಿ ಲಕ್ಷ್ಮೀಪ್ರೀಯಾ, ಶಾಂತ ನಾಯಕ್, ಸರಫ್‌ರಾಜ್, ಮಾರುತಿ, ಗವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Please follow and like us:
error

Related posts

Leave a Comment