ಜೆ.ಡಿ.ಎಸ್. ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ

 ಇತ್ತೀಚೆಗೆ ನಡೆದ ಕೊಪ್ಪಳ ನಗರದ ನಗರ ಸಭೆ ಚುನಾವಣೆಗೆ ಸಂಬಂದಪಟ್ಟಂತೆ ಕೊಪ್ಪಳ ತಾಲೂಕಿನ ಜೆ.ಡಿ.ಎಸ್. ಮುಖಂಡರುಗಳು ಅಲ್ಪಸಂಖ್ಯಾತರನ್ನು ಕಡೆಗಣಿಸಿ ತಮ್ಮ ವಯಕ್ತಿಕ ಪ್ರತಿಷ್ಟೆಗಾಗಿ ಕೊಪ್ಪಳ ನಗರದ ನಗರಸಭೆ  ಚುನಾವಣೆಯಲ್ಲಿ ಹೀನಾಯ ಸೊಲಿಗೆ ಕಾರಣರಾಗಿರುತ್ತಾರೆ. ಆದುದರಿಂದ ನಾನು ಈ ವರೆಗೆ ಕೊಪ್ಪಳ ಜಿಲ್ಲೆಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷನಾಗಿ ನಾನು ನಮ್ಮ ಜಿಲ್ಲೆಯ ಅಲ್ಪಸಂಖ್ಯಾತರ ಘಟಕವನ್ನು ಸದೃಡಗೊಳಿಸಿದ್ದೆನೆ. ಈ ಸೇವೆಯನ್ನು ಮಾಡಲು ಅನುಕೂಲ ಮಾಡಿಕೊಟ್ಟ ತಮಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಕೊಪ್ಪಳ ತಾಲೂಕಿನ ಮುಖಂಡರ ವಯಕ್ತಿಕ ಪ್ರತಿಷ್ಟೆಗಾಗಿ ಪಕ್ಷವನ್ನು ಮೊಲೆಗುಂಪನ್ನಾಗಿ ಮಾಡಿದ್ದಾರೆ. ಅದರ ನ್ಯತಿಕತೆ ಹೊಣೆಯನ್ನು ಹೊತ್ತು ನಾನು ನನ್ನ ಸ್ಥಾನಕ್ಕೆ ರಾಜಿನಾಮೆಯನ್ನು  ಕೊಡುತ್ತಿದ್ದೆನೆ. ಬೇರೆಯವರು ಇದರ ಬಗ್ಗೆ ಹೊರುತ್ತಾರೋ ಇಲ್ಲೋ ಗೊತ್ತಿಲ್ಲ ನಾನಾದರೂ ಇದರ ಹೋಣೆ ಹೊರಲು ಸಿದ್ಧನಾಗಿ ನನ್ನ ಜಿಲ್ಲಾಧ್ಯಕ್ಷಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೆನೆ. ಸದ್ಯ ತಟಸ್ಥನಾಗಿದ್ದು ಮುಂದಿನ ದಿನಗಳಲ್ಲಿ ನನ್ನ ಸ್ನೆಹಿತರೊಂದಿಗೆ ಚರ್ಚಿಸಿ ಮುಂದಿನ ರಾಜಕೀಯ ನಿರ್ದಾರಗಳನ್ನು ಕೈಗೊಳ್ಳುತ್ತೆನೆ ಎಂದು   ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ತಿಳಿಸಿ ಸೈಯದ್ ಹಜರತ್ ಪಾಶಾ ಖಾದ್ರಿ ರಾಜೀನಾಮೆ ಸಲ್ಲಿಸಿದ್ದಾರೆ.
Please follow and like us:
error