ಡಂಬ್ರಳ್ಳಿ : ಮಾರುತೇಶ್ವರ ಜಾತ್ರೆ

ಕೊಪ್ಪಳ ಏ ೧೨ : ಹೈನೋದ್ಯಮಕ್ಕೆ ಹೆಸರಾಗಿರುವ ಕೊಪ್ಪಳ ತಾಲೂಕಿನ ಡೊಂಬರಳ್ಳಿ ಗ್ರಾಮದಲ್ಲಿ ಇಂದು ಏ. ೧೩ ರಂದು ಮಾರುತೇಶ್ವರ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. 
ಜಾತ್ರೆಯಲ್ಲಿ ಡೊಳ್ಳಿನ ಮಜಲಿನದ್ದೇ ಕಾರುಬಾರು. ಜಿಲ್ಲೆಯಲ್ಲಿಯೇ ವಿಶೇಷ ಎನ್ನುವಂತೆ ದಿನದ ಎರಡು ಸಾರಿ ಮೆರವಣಿಗೆಯಲ್ಲಿ ಡೊಳ್ಳಿನ ಸದ್ದು ಜೋರಾಗಿ ಮತ್ತು ಲಯಬದ್ಧವಾಗಿ ನಡೆಯುತ್ತದೆ. ಹೀಗಾಗಿ, ಸುತ್ತಮುತ್ತಲ ಗ್ರಾಮದಿಂದಲೂ ಡೊಳ್ಳು ಬಡಿತ ನೋಡಲು ಆಗಮಿಸುತ್ತಾರೆ.
ಬೆಳಗ್ಗೆ ಶ್ರೀಮಾರುತೇಶ್ವರ ದೇವಸ್ಥಾನದಲ್ಲಿ ಅಭಿಷೇಕ, ಪುಷ್ಪಾರ್ಚನೆ, ವೀಳ್ಯದೆಲೆ ಪೂಜೆ ಸೇರಿದಂತೆ ನಾನಾ ರೀತಿಯ ಪೂಜೆ, ಪುನಸ್ಕಾರಗಳು ಅತ್ಯಂತ ಭಯ-ಭಕ್ತಿಯಿಂದ ನಡೆಯುತ್ತವೆ. ಇದಾದ ಬಳಿಕ ಮಧ್ಯಾಹ್ನ ಗಂಗೆಗೆ ಹೋಗಿ ಬರಲಾಗುತ್ತದೆ. ನಂತರ ಪೂಜಾರಿಗಳ  ಸೇರಿದಂತೆ ಗ್ರಾಮದ ಹಿರಿಯರು ಬ್ಯಾಟಿಗೀಡವನ್ನು ಕಿತ್ತುಕೊಂಡು ಬರುತ್ತಾರೆ. ಹೀಗೆ ಬ್ಯಾಟಿ ಗಿಡ ಕೀಳವ ಸಂದರ್ಭದಲ್ಲಿ ದವನ ಕಲ್ಲಿನ ಮೇಲೆಯೂ ಬೆಳೆಯುತ್ತದೆ. ಬ್ಯಾಟಿ ಗೀಡ ಮಾಡುವ ಸಂದರ್ಭದಲ್ಲಿ ದವನ ಏಕಕಾಲಕ್ಕೆ ಬೆಳೆಯುವುದು ವಿಶೇಷವಾಗಿದೆ. 
 ಹೀಗೆ ತಂದ ಬ್ಯಾಟಿ ಗಿಡವನ್ನು ಪೂಜಾರಿ ಹಿಡಿದುಕೊಂಡು ಡೊಳ್ಳು ಮಜಲಿನಲ್ಲಿ ಕುಣಿಯುತ್ತಾನೆ. ಸುಮಾರು ಮಧ್ಯಾಹ್ನ ೧ ಗಂಟೆಗೆ ಪ್ರಾರಂಭವಾಗುವ ಡೊಳ್ಳಿನ ಮಜಲು ಸಂಜೆ ನಾಲ್ಕು ಗಂಟೆಯ ವೇಳೆಗೆ ಮುಗಿಯುತ್ತದೆ. ಇದಾದ ಬಳಿಕ ಮಧ್ಯಾಹ್ನ ಮತ್ತೆ ಕತ್ತಿ ವರಸೆಯ ಮೆರವಣಿಗೆ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ನಡೆಯುವ ಮೆರವಣಿಗೆಯಲ್ಲಿ ಡೊಳ್ಳಿನ ಸದ್ದು ಪೈಪೋಟಿಯಲ್ಲಿ  ನಡೆಯುತ್ತದೆ.

Related posts

Leave a Comment