ಬಂಧನದಲ್ಲಿರುವ ಎಸ್.ಎಫ್.ಐ ನಾಯಕರ ಬಿಡುಗಡೆಗೆ ಎಸ್.ಎಫ್.ಐ ಕೊಪ್ಪಳ ಜಿಲ್ಲಾ ಸಮಿತಿ ಆಗ್ರಹ

ಪ್ರತಿಭಟನೆಯು ಎಲ್,ಐ,ಸಿ,ಕಛೇರಿಯಿಂದ ಪ್ರಾರಂಭವಾಗಿ ನಗರದ ಕೇಂದ್ರಿಯ ಬಸ್ಸ ನಿಲ್ದಾಣ ಎದುರಗಡೆ ಕೇರಳ ಮುಖ್ಯಮಂತ್ರಿ ಪ್ರತಿಕ್ರತಿದಹನ ಮಾಡಲಾಯಿತು.
ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹತ್ತಿಕ್ಕುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಮತ್ತು ಬಂಧನದಲ್ಲಿರುವ  ಎಸ್.ಎಫ್.ಐ ರಾಷ್ಟ್ರ ನಾಯಕರ ಬಿಡುಗಡೆಗೆ ಎಸ್.ಎಫ್.ಐ ಕೊಪ್ಪಳ ಜಿಲ್ಲಾ  ಸಮಿತಿ ಆಗ್ರಹ.
ಕೇರಳ ಸರ್ಕಾರದ ಭ್ರಷ್ಟಚಾರವನ್ನು ವಿರೋಧಿಸಿ ದೆಹಲಿಯ ಕೇರಳ ಹೌಸ್ ಎದುರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಎಸ್.ಎಫ್.ಐ. ರಾಷ್ಟ್ರನಾಯಕರ ಮೇಲೆ ನಡೆದ ಪೋಲಿಸ್ ದೌರ್ಜನ್ಯವನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ), ಕೊಪ್ಪಳ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.
ಕೇರಳ ಸರ್ಕಾರ ನಡೆಸುತ್ತಿದ್ದ ಬಹುಕೋಟಿ ಸೋಲಾರ್ ಹಗರಣದಲ್ಲಿ ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸೇರಿದಂತೆ ಇತರೆ ಸಚಿವರು ಭಾಗಿಯಾಗಿದ್ದು ಈ ಹಗರಣ ಪ್ರಕರಣದಲ್ಲಿ  ಓರ್ವ ಸಚಿವೆ ರಾಜೀನಾಮೆ ನಿಡಿದ್ದು ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾಗ, ಕೇಂದ್ರ ಮತ್ತು ದೆಹಲಿ ಸರ್ಕಾರ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಪೋಲಿಸರ ಮೂಲಕ ಹಲ್ಲೆ ನಡೆಸಿದೆ. ಇದರಿಂದ ಹಲವು ನಾಯಕರು ಮಾರಣಾಂತಿಕ ಹಲ್ಲೆಗೆ ಒಳಾಗಾಗಿದ್ದಾರೆ. ಎಸ್.ಎಫ್.ಐ. ರಾಷ್ಟ್ರಾಧ್ಯ್ಯಕ್ಷರಾದ ಕಾಂ.ಡಾ.ವಿ.ಶಿವದಾಸನ್, ಉಪಾಧ್ಯಕ್ಷರಾದ ನೂರ್‌ಮಹ್ಮದ್, ಸಹ ಕಾರ್‍ಯದರ್ಶಿಗಳಾದ ಶರತರೂಸ್ .ಪಿ ಲಕ್ಷಮ್ಮಯ್ಯ. ಮತ್ತು ಕೇಂದ್ರ ಸಮಿತಿ ಸದಸ್ಯರಾದ ಎಮ್.ಸೂಭನ್, ವೈ.ರಾಮ, ಉಪೇಂದ್ರಮುಂಡಲ್, ದೆಹಲಿ ವಿದ್ಯಾರ್ಥಿ ನಾಯಕರಾದ ರಾಹುಲ್, ನಿತೀಶ್, ನಾರಾಯಣ ಸೇರಿದಂತೆ ಇತರರ ಮೇಲೆ ಜಾಮೀನು ರಹಿತ ಮೊಕದ್ದಮೆ ದಾಖಲು ಮಾಡುವ ಮೂಲಕ ಭ್ರಷ್ಟಚಾರವನ್ನು ವಿರೋಧಿಸುವವರನ್ನು ಜೈಲಿಗೆ ಕಳಿಸುತ್ತೇವೆ ಎಂದು ಸ್ಪಷ್ಟ ಸಂದೇಶವನ್ನು ಕೇಂದ್ರ ಸರ್ಕಾರ ರವಾನಿಸಿದೆ. 
ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ನೀತಿ ಖಂಡಿಸುತ್ತಾ, ಬಂಧನಕ್ಕೆ ಒಳಗಾಗಿರುವ ಎಸ್.ಎಫ್.ಐ.ನ ಅಖಿಲ ಭಾರತ ಅಧ್ಯಕ್ಷರಾದ ಕಾಂ.ಡಾ.ವಿ.ಶಿವದಾಸನ್ ಸೇರಿದಂತೆ ೯ ಜನ ನಾಯಕರನ್ನು ಕೂಡಲೇ ಬಿಡುಗಡೆ ಮಾಡಬೇಕು. ಬಹುಕೋಟಿ ಸೋಲಾರ್ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ತಕ್ಷಣದಲ್ಲಿ ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರು ರಾಜೀನಾಮೆ ನೀಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್.ಎಫ್.ಐ) ಕೊಪ್ಪಳ ಜಿಲ್ಲಾ   ಸಮಿತಿಯು ಆಗ್ರಹಿಸಿದೆ.
        ಈ ಸಂದರ್ಭದಲ್ಲಿ ಅಮರೇಶ ಕಡಗದ  ಬಾಳಪ್ಪ ಹುಲಿಹೈದರ್   ಸುಬಾನ್ ಸೈಯದ್   ಪರಶುರಾಮ ರಾಠೋಡ್, ಅಜಯ್ಜಿ ಲ್ಲಾ ಅಧ್ಯಕ್ಷರು    ಜಿಲ್ಲಾ ಕಾರ್ಯದರ್ಶಿ   ತಾಲೂಕ ಕಾರ್ಯದರ್ಶಿ   ಜಿಲ್ಲಾ ಮುಖಂಡರುಗಳು ವಿರೇಶ ಕೆ,ಶಿವುಕುಮಾರ್,ಬಸವರಾಜ,ದುರಗೆಶ,ಸೋಮನಾಥ,ರಮೇಶ,ಖಾಸಿಂಸಾಬ ಸರದಾರ ,ಡಿ.ವಾಯ್.ಎಫ್.ಐ.ನ ಹುಲಗಪ್ಪ ಗೋಕಾವಿ.ಹುಸೇನಸಾಬ ನಧಾಫ್.ಸುಂಕಪ್ಪ ಗದಗ. ಉಪಸ್ಥಿತರಿದ್ದರು.
Please follow and like us:
error