ಮಕ್ಕಳ ಮನಗೆದ್ದ ಬೀದಿನಾಟಕ

ಗಂಗಾವತಿ ೧೨: ತಾಲೂಕಿನಾದ್ಯಂತ ಶಾಲೆಗೊಂದು ಪಾಠನಾಟಕದ ಪರಿಕಲ್ಪನೆಯೊಂದಿಗೆ ಸಂಚರಿಸುತ್ತಿರುವ ಬೀದಿ ನಾಟಕದ ತಂಡ ಇಂದು ಹೊಸಕೇರಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ಅರಿವು, ಆರೋಗ್ಯ, ಬಾಲಕಾರ್ಮಿಕ ಮತ್ತು ಬಾಲ್ಯವಿವಾಹ ಪದ್ಧತಿ ವಿಚಾರವಾಗಿ ಪ್ರದರ್ಶನಗೊಂಡ ಬೀದಿ ನಾಟಕ ಗ್ರಾಮಸ್ಥರ ಜೊತೆಗೆ ಶಾಲಾ ಮಕ್ಕಳ ಮನ ಗೆದ್ದಿತು. 
ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿ ಅಲ್ಲಾಗಿರಿರಾಜ್ ಯಾವುದೇ ಒಂದು ದೇಶ ಸಂಪತ್ತಿನಿಂದ ಕೂಡಿದ್ದರೆ ಅಭಿವೃದ್ಧಿಹೊಂದಿದ ದೇಶವಾಗುವುದಿಲ್ಲ; ಅದರ ಬದಲಾಗಿ ಶಿಕ್ಷಣ ಮತ್ತು ಆರೋಗ್ಯವಂತರಿಂದ ಕೂಡಿದ ನಾಗರಿಕರ ದೇಶ ಅದು ಪ್ರಪಂಚದಲ್ಲಿ ಬಲಿಷ್ಠ ರಾಷ್ಟ್ರವಾಗುತ್ತದೆ ಎಂದು ಹೇಳಿದರು ಹಾಗೆ ಸರ್ಕಾರ ಇಂದು ಹಾಲು, ಬಿಸಿಊಟ, ಬಟ್ಟೆ, ಪಠ್ಯಪುಸ್ತಕ, ಸೈಕಲ್ ಉಚಿತವಾಗಿ ನೀಡಿದರೂ  ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಬಡತನದ ನೆಪದಲ್ಲಿ ಬಾಲಕಾರ್ಮಿಕ ಪದ್ಧತಿಗೆ ಮತ್ತು ಬಾಲ್ಯವಿವಾಹ ಪದ್ಧತಿಗೆ ಬಲಿಯಾಗುತ್ತಿರುವುದು ದುರಂತ ಸಂಗತಿಯೆಂದು ವಿಷಾದ ವ್ಯಕ್ತಪಡಿಸಿದರು.
ನಂತರ ಶಾಲಾ ಆವರಣದಲ್ಲಿ ರಂಗತರಬೇತಿ ಹೊಂದಿದ ಕಲಾವಿದರಾದ ತಿಪ್ಪೇಸ್ವಾಮಿ ನವಲಿ, ಶಿವಕುಮಾರ ಮತ್ತು ತಂಡದ ಸಂಯೋಜಕರಾದ ಅಲ್ಲಾಗಿರಿರಾಜ್ ಹಾಗೂ ರಾಘವೇಂದ್ರ ಇವರಿಂದ ಬೀದಿನಾಟಕ ಪ್ರದರ್ಶನ ಮಾಡಲಾಯಿತು. ಈ ವೇಳೆಯಲ್ಲಿ ಶಾಲಾ ಮುಖ್ಯಗುರುಗಳು ಹಾಗೂ ಸಹಶಿಕ್ಷಕರು ಉಪಸ್ಥಿತರಿದ್ದರು.  

Leave a Reply