ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ

ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ ಕಿನ್ನಾಳ ದಿನಾಂಕ ೧೨-೦೧-೨೦೧೪ ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯನ್ನು ಕಿನ್ನಾಳ ಗ್ರಾಮದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ (ಕಾಮನಕಟ್ಟಿ) ಆಚರನೆ ಮಾಡಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯರಾದ ಮಾಬುಸಾಬ್ ಹಿರಾಳ ವಹಿಸಿದ್ದರು. ವೇದಿಕೆ ಮೇಲೆ ಷಡಕ್ಷರ ಸ್ವಾಮಿ, ತಾ. ಪಂ ಸದಸ್ಯ ಅಮರೇಶ ಉಪಲಾಪೂರ, ಮುಖ್ಯ ಆತಿಥಿಗಳಾಗಿ ಗುರುದತ್ತ ಸಾಂಗಬಾಳ ಆಗಮಿಸಿದ್ದರು. ಹಾಗೂ ಎಬಿವಿಪಿ ಜಿಲ್ಲಾ ಸಂಚಾಲಕರಾದ ಮೌನೇಶ ಕಮ್ಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.  ಯುವಕರನ್ನುದ್ದೇಶಿಸಿ ಮಾತನಾಡುತ್ತಾ, ಗುರುದತ್ತ ಸಾಂಗಭಾಳ ಯುವಕರೆಲ್ಲರೂ ಎಚ್ಚೇತ್ತುಕೊಂಡು ದೇಶ ಸೇವೆಗೆ ಮುಂದಾಗಬೇಕು. ಪ್ರತಿಯೊಂದು ಹಳ್ಳಿ ಹಳ್ಳಿಯಲ್ಲೂ, ಮನೆ ಮನೆ ಯಿಂದಲೂ ಸ್ವಾಮಿ ವಿವೇಕಾನಂದರ ಆಧರ್ಶವನ್ನು ಪಾಲಿಸುವಂತ ಯುವಕರು ದೇಶಸೇವೆಗೆ ಮುಂದಾಗಬೇಕೆಂದು ಕರೆ ನೀಡಿದರು.

ಶ್ರೀನಿವಾಸ ಚಿತ್ರಗಾರ ಸ್ವಾಗತಿಸಿದರು.  ಲಿಂಗರಾಜ ಸಿರಿಗೇರಿ ವಂದಿಸಿದರು. ಸಂಗಪದ್ಪ ಚಕ್ರಸಾಲಿ ನಿರೂಪಿಸಿದರು. 
ಈ ಸಂದರ್ಭದಲ್ಲಿ ಕಿನ್ನಾಳ ಗ್ರಾಮದ ಎಬಿವಿಪಿ ಕಾರ್ಯಕರ್ತರು, ಅಮೀತ್ ಕಂಪ್ಲಿಕರ್, ಗ್ರಾಮದ ಯುವಕರು, ಶಿಕ್ಷಕವೃಂದ, ಗ್ರಾ.ಪಂ. ಅಧ್ಯಕ್ಷರು, ಸರ್ವ ಸದಸ್ಯರು, ಇನ್ನುಳಿದ ಗ್ರಾಮದ ಸಂಘ ಸಂಸ್ಥೆಗಳ ಪಧಾದಿಕಾರಿಗಳು ಉಪಸ್ಥಿತರಿದ್ದರು .
Please follow and like us:
error

Related posts

Leave a Comment