೭ ನೇ ವೇತನ ಅಯೋಗದ ಶಿಪಾರಸ್ಸುಗಳ ಜಾರಿಗೊಳಿಸಲು ಒತ್ತಾಯ

       ೭ ನೇ ವೇತನ ಅಯೋಗದ ಶಿಪಾರಸ್ಸುಗಳನ್ನು ೨೦೧೪ ಜನೆವರಿಯಿಂದಲೆ ಜಾರಿಗೊಳಿಸಲು ಒತ್ತಾಯಿಸಿ, ಕೇಂದ್ರ ಸರಕಾರದ ವಿವಿದ ಇಲಾಖೆಗಳ ನೌಕರರು ನಡೆಸಿರುವ ೨ ದಿನಗಳ ಮುಷ್ಕರಕ್ಕೆ, ಟ್ರೇಡ್ ಯೂನಿಯನ್ ಸೆಂಟರ ಆಫ್ ಇಂಡಿಯಾ (ಟಿಯುಸಿಐ) ರಾಜ್ಯ ಸಮಿತಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಶಿಕ್ಷಣ, ಆರೋಗ್ಯ, ಇತರೆ ಆರ್ಥಿಕ ಹೊರೆ ಹೆಚ್ಚಾಗಿದ್ದರಿಂದ, ನೌಕರರ ಜೀವನ ನಿರ್ವಹಣಿ ಅತಂತ್ರವಾಗಿದೆ. ಕೇಂದ್ರ ಸರಕಾರ ೭ನೇ ವೇತನ ಆಯೋಗದ ಜಾರಿಯನ್ನು ೨೦೧೪ ರಿಂದ ಜಾರಿಗೊಳಿಸುವ ತಿರ್ಮಾನ ಅತ್ಯಂತ ಅವೈಜಾನಿಕ ಮತ್ತು ನೌಕರರನ್ನು ಶೋಷಣೆಗಿಡು ಮಾಡುವುದನ್ನು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಖಂಢಿಸಲೆಬೇಕು. ಜಾಗತೀಕರಣ ನೀತಿ, ಖಾಸಗೀಕರಣದ ಜಾರಿ, ಗುತ್ತಿಗೆ ಆದಾರದ ನೇಮಕಾತಿಯಿಂದ ನೌಕರರು ಉದ್ಯೊಗದ ಭದ್ರತೆ ಇಲ್ಲವಾಗಿದೆ. ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯಿಂದ, ಕಾರ್ಮಿಕರು ಸಂಘಟಿತಗೊಳ್ಳುವ, ಹೋರಾಡುವ , ಹಕ್ಕುಗಳನ್ನು ಮೊಟಕುಗೊಳಿಸುವ ನೀತಿಗಳನ್ನು ಜಾರಿಗೊಳಿಸಲು ಮುಂದಾಗಿರುವ, ಕೇಂದ್ರ ಮತ್ತು ರಾಜ್ಯ ಸರಕಾರಗಳ ತಿರ್ಮಾನಳನ್ನು ರದ್ದುಗೊಳಿಸಬೇಕು.
ವಿದೇಶಿ ಕಂಪನಿಗಳ ರಕ್ಷಣೆಗಾಗಿ ಕಂಕಣ ಕಟ್ಟಿರುವ ಸಿದ್ದರಾಮಯ್ಯ ಸರ್ಕಾರ !
       ಬಹುರಾಷ್ಟ್ರೀಯ ಕಂಪನಿಗಳ (ಎಂಎನ್‌ಸಿಎಸ್) ಒತ್ತಡಕ್ಕೆ ಮಣಿದ ಸಿದ್ದರಾಮಯ್ಯ ಸರ್ಕಾರ ಮಾಹಿತಿ ತಂತ್ರಜ್ಞಾನ (ಐಟಿ) ಉದ್ದಿಮೆಗಳನ್ನು ಕಾರ್ಮಿಕ ಕಾಯ್ದೆಗಳಿಂದ (೧೯೪೬  ರ ಕಾಯ್ದೆಯ ಉದ್ದೆಮೆ ಸಂಸ್ಥೆಗಳಿಗೆ ಮತ್ತು ನೌಕರರಿಗೆ ಒಂದು ನೀತಿ ಸಂಹಿತೆ ಇದ್ದಂತೆ) ಹೊರಗುಳಿಸಿ ತಮ್ಮ ಸರ್ಕಾರ ವಿದೇಶಿ ಕಂಪನಿಗಳ ಸವೇಗೆ ಮೀಸಲು ಎನ್ನವುದನ್ನು ಸಾಬೀತು ಪಡಿಸಿಕೊಂಡಿದೆ. ಬಿಜೆಪಿ ಆಡಳಿತ ಸೇರಿದಂತೆ ಈ ಹಿಂದೆ ಆಡಳಿತ ನಡೆಸಿದ ಮುಖ್ಯಮಂತ್ರಿಗಳು ಐಟಿ ಉದ್ಯಮಕ್ಕೆ ಹೆನ್ನೇರಡು ವರ್ಷಗಳ ವರೆಗೆ ಕಾಯ್ದೆಯ ಪೂರ್ಣ ವಿನಾಯಿತಿ ನೀಡಿದ್ದರು. ಕಳೆದ ವರ್ಷ ಮಾರ್ಚ ೩೧ ಕ್ಕೆ ಅವಧಿ ಕೊನೆಗೊಂಡಿದ್ದು. ಐಟಿ ಕಂಪನಿಯ ಕಾರ್ಪೂರೇಟ್ ಲಾಬಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಿ ಪುನ : ೫ ವರ್ಷಗಳ ವರೆಗೆ ಕಾಯ್ದೆಯ ರಿಯಾಯಿತಿ ಅವಧಿಯನ್ನು ವಿಸ್ತರಿಸಿಕೊಂಡಿವೆ. ಈ ಕಾಯ್ದೆಯ ರಿಯಾಯಿತಿ ವಿಸ್ತರಣೆಯಿಂದ ಐಟಿ ಕ್ಷೇತ್ರದಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರಿಗೆ ಸೇವಾ ಭದ್ರತೆಗೆ ದಕ್ಕೆ ಉಂಟಾಗುತ್ತದೆ. ಪ್ರತಿನಿತ್ಯ ೧೪ ರಿಂದ ೧೮ ಗಂಟೆ ವರೆಗೆ ದುಡಿಸಿಕೊಳ್ಳುವ ಐಟಿ ಕಂಪನಿಗಳು, ನಿಗದಿತ ಸಮಯಕ್ಕೆ ವೇತನ ನೀಡದೆ ಸತಾಯಿಸುವುದು, ಅಮಾನತ್ತು, ಹಿಂಬಡ್ತಿ, ವೇತನ ಕಡಿತ, ಸೇರಿದಂತೆ ಅನೇಕ ರೀತಿಯ ಶೋಷಣೆಯಲ್ಲಿ ತೊಡಗಿವೆ.
   ಈ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರು ಸಂಘಟಿತರಾಗಿ ಮುಷ್ಕರ ನಡೆಸುವ ಹಕ್ಕುಗಳನ್ನು ಕಿತ್ತಿಕೊಳ್ಳುವುದರಿಂದ ಕಂಪನಿಗಳ ಸರ್ವಧಿಕಾರಕ್ಕೆ ಅನುಕೂಲ ಕಲ್ಪಿಸಿದಂತಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರ ೫ ವರ್ಷದ ಕಾಯ್ದೆ ರೀಯಾಯಿತಿ ತಿರ್ಮಾನ ಹಿಂದೆ ಪಡೆಯಬೇಕೆಂದು ಟ್ರೇಡ್ ಯೂನಿಯನ್ ಸೆಂಟರ್ ಆಪ್ ಇಂಡಿಯಾ (ಟಿಯುಸಿಐ) ಈ ಮೂಲಕ ಒತ್ತಾಯಿಸುತ್ತದೆ.
Please follow and like us:
error