ಆಟೋನಗರದಲ್ಲಿ ಧರಣಿ ಸತ್ಯಾಗ್ರಹ ೫ನೇ ದಿನಕ್ಕೆ :ಎಸ್.ಆರ್. ಹಿರೇಮಠನವರು ಆಟೋನಗರ ಜಾಗಕ್ಕೆ

 ಆಟೋನಗರ ಅಭಿವೃದ್ಧಿಗಾಗಿ ರೂಪಗೊಂಡ ಹೋರಾಟ ಸಮಿತಿ ಪ್ರಾರಂಭಿಸಿದ ಧರಣಿ ೫ನೇ ದಿನ ಮುಂದುವರೆದಿದ್ದು, ಬೇಡಿಕೆ ಈಡೇರುವವರಿಗೆ ಧರಣಿ ಸತ್ಯಾಗ್ರಹ ಮುಂದುವರೆಯುತ್ತದೆ ಎಂದು ಸಮಿತಿಯವರು  ತಿಳಿಸಿದ್ದಾರೆ.

ಧರಣಿ ೫ನೇ ದಿನದಂದು ಸ್ಥಳಕ್ಕೆ ಬಂದ ಜನಸಂಗ್ರಾಮ ಪರಿಷತ್ ರಾಜ್ಯ ಕಾರ್ಯದರ್ಶಿ ಧನರಾಜ್ ಮಾತನಾಡಿ ಆಟೋನಗರ ಸದಸ್ಯರ ಹೋರಾಟಕ್ಕೆ ಜನಸಂಗ್ರಾಮ ಪರಿಷತ್ ಮತ್ತು ಪರಿವರ್ತನ ವೇದಿಕೆ ಬೆಂಬಲಿಸುತ್ತವೆ ಎಂದಿದ್ದಾರೆ. ದಿನಾಂಕ ೧೮ ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಜನಸಂಗ್ರಾಮ ಪರಿಷತ್‌ನ ಸಭೆ ನಡೆಯಲಿದೆ. ನಂತರದ ದಿನಗಳಲ್ಲಿ ಎಸ್.ಆರ್. ಹಿರೇಮಠನವರು ಆಟೋನಗರ ಜಾಗಕ್ಕೆ ಬರಲಿದ್ದಾರೆಂದು ಧನರಾಜ್ ತಿಳಿಸಿದರು.
ಆಖಿಲ ಭಾರತ ಪ್ರಗತಿಪರ ಮಹಿಳಾ ಸಂಘದ ಸಂಚಾಲಕಿ ಶಾಂತಕುಮಾರಿ ಮಾತನಾಡಿ ಕೂಡಲೇ ನಗರಸಭೆ ಮತ್ತು ಜಿಲ್ಲಾಡಳಿತ ಆಟೋನಗರ ವಿವಾದ ಬಗೆಹರಿಸದಿದ್ದಲ್ಲಿ ಪ್ರಗತಿಪರ ಮಹಿಳಾ ಸಂಘ ಮತ್ತು ಸ್ಲಂ ಜನಾಂದೋಲನ ಸಂಘಟನೆಗಳಿಂದ ಸಾವಿರಾರು ಮಹಿಳೆಯರು ನಗರಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲಿದ್ದಾರೆಂದು ಹೇಳಿದ್ದಾರೆ. 
ಸಿ.ಪಿ.ಐ.ಎಂ.ಎಲ್. ಹೈದ್ರಾಬಾದ್ – ಕರ್ನಾಟಕ ಪ್ರಾಂತ ಕಾರ್ಯದರ್ಶಿ ಭಾರದ್ವಾಜ್ ಮಾತನಾಡುತ್ತಾ ಆಟೋನಗರಕ್ಕಾಗಿ ಸರ್ವೆ ನಂ. ೧೩೯ ಸದಸ್ಯರ ದುಡ್ಡಿನಿಂದ ಖರೀದಿ ಮಾಡಿದ್ದಾಗಿ ಅದರ ಅಭಿವೃದ್ಧಿಗಾಗಿ ೮ ಲಕ್ಷ ರೂಪಾಯಿ ನಗರಸಭೆಗೆ ಪಾವತಿಸಲಾಗಿದೆ. ಸದಸ್ಯರ ಆಸ್ತಿಯನ್ನು ನಗರಸಭೆ ಅಧಿಕಾರಿ ನಮ್ಮ ನಗರಸಭೆ ಆಸ್ತಿ ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ. ನಗರಸಭೆ ಈ ಆಸ್ತಿಯನ್ನು ಖರೀದಿ ಮಾಡಲು ಒಂದು ರೂಪಾಯಿ ಖರ್ಚು ಮಾಡಿದರೂ ನಗರಸಭೆಯ ಲೆಕ್ಕಗಳಲ್ಲಿ ತೋರಿಸಲಿ ಎಂದು ಭಾರದ್ವಾಜ್ ಪ್ರಶ್ನಿಸಿದ್ದಾರೆ.
ಆಟೋನಗರದ ಅಭಿವೃದ್ಧಿ ಸಂಘದ ಸಂಚಾಲಕ ಭಾರದ್ವಾಜ್, ಹರಿ, ಬಷೀರ್‌ಸಾಬ್, ವಿಜಯ, ಖಾಜಾ ಹುಸೇನ್ , ಶ್ರೀನಿವಾಸ, ವೆಂಕಟೇಶ್ವರರಾವ್, ಮಂಜುನಾಥ ಮತ್ತೀತರ ಸದಸ್ಯರು ಪಾಲ್ಗೊಂಡಿದ್ದರೆಂದು ಅಭಿವೃದ್ಧಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

Leave a Comment