ಕರಾಟೆ ಸ್ಪರ್ಧೆಯಲ್ಲಿ ಸಾಧನೆ

ಕರಾಟೆ ಸ್ಪರ್ಧೆಯಲ್ಲಿ  ಸಾಧನೆಗೈದ ಸರಕಾರಿ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಶುಭಕೋರಿದ ಶಿಕ್ಷಕ ವೃಂದ. 
ಕಾರಟಗಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸರಕಾರಿ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಾದ ಯುದ್ದ ನೃತ್ಯದಲ್ಲಿ ರುಕ್ಮಿಣಿ ಬಂಗಾಳಿಗಿಡ ಪ್ರಥಮಸ್ಥಾನ ಮತ್ತು ಶೃತಿ ಕೊಂಡನಹಳ್ಳಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಫೈಟ್ (ಸ್ಪೈರಿಂಗ್) ನಲ್ಲಿ ಹಿರಿಯ ವಿಭಾಗದಲ್ಲಿ ರುಕ್ಮಿಣಿ ಡಿ ಬಂಗಾಳಿಗಿಡ ಪ್ರಥಮ ಸ್ಥಾನ ಮತ್ತು ಕಿರಿಯ ವಿಭಾಗದಲ್ಲಿ ಶೃತಿ ಕೊಂಡನಹಳ್ಳಿ ಪ್ರಥಮ ಸ್ಥಾನ ಹಾಗೂ ಮಂಜುಳಾ ವೈ ಮುಂಡರಗಿ ಸಮಾಧಾನಕರ ಬಹುಮಾನವನ್ನು ಪಡೆದಿದ್ದಾರೆ ಈ ಕ್ರೀಡಾ ಪಟುಗಳಿಗೆ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸರಿತಾ ಜಿ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ. ಮತ್ತು ಸಾಯಿ ಬುಡೋಕಾನ್ ಕರಾಟೆ ಕ್ಲಬ್‌ನ ಮುಖ್ಯ ಶಿಕ್ಷಕ ಶ್ರೀಕಾಂತ ಪಿ.ಕಲಾಲ ಉಪಸ್ಥಿತರಿದ್ದರು.

Leave a Reply