ವೇತನ ಬಿಡುಗಡೆಗೆ ಒತ್ತಾಯಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ

 ಕೊಪ್ಪಳ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಎರಡು ತಿಂಗಳುಗಳಿಂದ ವೇತನವಾಗದಿರುವುದನ್ನು ಖಂಡಿಸಿ,ವೇತನವನ್ನು ಬಿಡುಗಡೆಗೆ ಒತ್ತಾಯಿಸಿ ಸರ್ಕಾರಿ ಅಂಗವಿಕಲ ನೌಕರರ ಸಂಘ ಮತ್ತು ಗುರು ಸ್ಪದಂನ ಬಳಗದ ವತಿಯಿಂದ ಅಪರ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಹಿಟ್ನಾಳರವರಿಗೆ ಬುದವಾರ ಮನವಿ ಸಲ್ಲಿಸಿದ್ದರು.
     ಈ ಸಂದರ್ಭದಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ಮಾತನಾಡುತ್ತ,ಕೊಪ್ಪಳ ತಾಲೂಕಿನಲ್ಲಿ ಕಾರ್ಯನಿರ್ವಹಿಸುವ ಪ್ರಾಥಮಿಕ ಶಾಲಾ ಶಿಕ್ಷಕರ ವೇತನದ ಸಮಸ್ಯೆಯು ಪ್ರತಿ ಮೂರು ತಿಂಗಳಿಗೊಮ್ಮೆ ಉಂಟಾಗುತ್ತದೆ.ಅಲ್ಲದೆ ರಾಜ್ಯ ಯಾವ ಜಿಲ್ಲೆಯಲ್ಲಿ ಇಲ್ಲದ ಅನುದಾನ ಕೊರೆತಯು ನಮ್ಮ ಜಿಲ್ಲೆಯಲ್ಲಿ ಯಾಕೆ? ಸಂಭವಿಸುತ್ತದೆ.ಎರಡು ತಿಂಗಳುಗಳಿಂದ ವೇತನವಿಲ್ಲದಿರುವುದರಿಂದ ಶಿಕ್ಷಕರಿಗೆ ಅವರ ಜೀವನ ನಿರ್ವಹಣೆಯು ಕಷ್ಟವಾಗಿದೆ.ಪದೇ ಪದೇ ವೇತನ ಸಮಸ್ಯೆಯು ನಮ್ಮ ಜಿಲ್ಲೆಯಲ್ಲಿ ಸಂಭವಿಸುತ್ತಿದ್ದು,ಇದಕ್ಕೆ ಶಾಶ್ವತ ಪರಿಹಾರವನ್ನು ನೀಡುವಂತೆ ಒತ್ತಾಯಿಸಿದರು.
   ಇದಕ್ಕೆ ಸ್ಪಂದಿಸಿದ ಅಪರ ಜಿಲ್ಲಾಧಿಕಾರಿಗಳು ಈ ಸಮಸ್ಯೆಯ ಕುರಿತಾಗಿ ಈಗಾಗಲೇ ೩ ತಿಂಗಳ ಹಿಂದೆಯೇ ಮನವಿ ಪತ್ರ ಸಲ್ಲಿಸಲಾಗಿತು.ಆ ಸಮಸ್ಯೆಯದಲ್ಲಿ ಪರಿಹಾರವನ್ನು ಕೂಡಾ ಕಂಡು ಕೊಳ್ಳಲಾಗಿತು.ಆದರೆ ಮತ್ತೆ ಅದೇ ಸಮಸ್ಯೆಯು ಬಂದ್ದಿದೆ.ಈ  ಕೂಡಲೆ ಸರ್ಕಾರಕ್ಕೆ ಪತ್ರವನ್ನು ಬರೆಯುವುದರ ಮೂಲಕ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳ ಜೊತೆಯಲ್ಲಿ ಮಾತನಾಡಿ ಶಿಕ್ಷಕರ ವೇತನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದರು.
  ಈ ಸಂದರ್ಭದಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘ ರಾಜ್ಯ ಸಂಘಟನಾ ಕಾರ್ಯದರ್ಶಿ ಭರಮಪ್ಪ ಕಟ್ಟಿಮನಿ,ಜಿಲ್ಲಾಧ್ಯಕ್ಷರಾದ ಚನ್ನಬಸಪ್ಪ ಬೆಲ್ಲದ,ಕೊಪ್ಪಳ ತಾಲೂಕ ಅಧ್ಯಕ್ಷರಾದ ಅಂದಪ್ಪ ಬೋಳರೆಡ್ಡಿ,ಗುರು ಸ್ಪಂದನ ಬಳಗದ ವಿಜಯಕುಮಾರ ಕುರುಗೊಡ,ಮೈಲಾರಪ್ಪ,ಹಿಬ್ರಾಹಿಂ,ಶ್ರೀಧರ,ಪತ್ತಿನ ಸಂಘದ ನಿರ್ದೇಶಕರಾದ ದೇವಪ್ಪ ಒಂಟಿಗಾರ ಮುಂತಾದವರು ಹಾಜರಿದ್ದರು.
Please follow and like us:

Related posts

Leave a Comment