ಲಯನ್ಸ್ ಸ್ವಾಮಿ ವಿವೇಕಾನಂದ ಶಾಲೆಗೆ ೧೦೦% ಫಲಿತಾಂಶ

ಎಸ್.ಎಸ್.ಎಲ್.ಸಿ. ಪರೀಕ್ಷೆ :
ಕೊಪ್ಪಳ, ೦೬ : ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರತಿಶತ ೧೦೦% ರಷ್ಟು ಫಲಿತಾಂಶ ಪಡೆದಿದೆ. ಒಟ್ಟು ಪರೀಕ್ಷೆಗೆ ೮೧ ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ ೨೬ ಡಿಸ್ಟಿಂಕ್ಷನ್, ೪೭ ಪ್ರಥಮ ದರ್ಜೆ, ೦೫ ದ್ವಿತೀಯ ದರ್ಜೆ ಮತ್ತು ೩ ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಲಯನ್ಸ್ ಆಡಳಿತ ಮಂಡಳಿ ಅಧ್ಯಕ್ಷ ವಿ.ಎಸ್. ಅಗಡಿ, ಕಾರ್ಯದರ್ಶಿ ಬಸವರಾಜ್ ಬಳ್ಳೊಳ್ಳಿ, ಸಮಸ್ತ ಲಯನ್ಸ್ ಕ್ಲಬ್ ಸದಸ್ಯರು, ಪ್ರಾಚಾರ್ಯ ಎ. ಧನಂಜಯನ್, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

Related posts

Leave a Comment