ಪದವೀಧರರನ್ನು ಮತ ಕೇಳುವ ನೈತಿಕ ಹಕ್ಕು ಕಾಂಗ್ರೇಸ ಪಕ್ಷಕ್ಕೆ ಮಾತ್ರ

-ಕೆ ಬಸವರಾಜ ಹಿಟ್ನಾಳ.
 ಕೊಪ್ಪಳ ವಿಧಾನಸಬಾ ಕ್ಷೇತ್ರದ ಅಳವಂಡಿ ಹಾಗೂ ಹಿರೇಸಿಂದೋಗಿ ಜಿಲ್ಲಾ ಪಂಚಯತ ಕ್ಷೇತ್ರದ ವ್ಯಾಪ್ತಿಯಲ್ಲಿ ಈಶಾನ್ಯ ಪದವೀದರ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ ಆಂತರಿಕ ಕಚ್ಚಾಟದಿಂದ ಬ್ರಷ್ಟ ಬಿಜೆಪಿ ಪಕ್ಷವು ಪದವೀದರರನ್ನು ಮತ ಕೇಳುವ ನೈತಿಕ ಹಕ್ಕು ಕಳೆದುಕೊಂಡಿದೆ.  ಜೈಲು ಮತ್ತು ಬೇಲ್ ಸಂಸ್ಕೃತಿಯ ಸರ್ಕಾರವು ರಾಜ್ಯದಲ್ಲಿ ರಾಜಕೀಯ ಅರಾಜಕತೆಯನ್ನು ಉಂಟುಮಾಡಿದೆ. ರಾಜ್ಯದಲ್ಲಿ ತಲೆದೋರಿರುವ ಬರದ ಸಮಸ್ಯೆಗಳ ಬಗ್ಗೆ ಚಿಂತಿಸದ ಸರಕಾರ ಕೇವಲ ಅಧಿಕಾರ ದಾಹಕ್ಕೆ ಹವಣಿಸುತ್ತಿದೆ.  ಜೈಲಿನಲ್ಲಿದ್ದೆ ಬ್ರಷ್ಟ ಸಚಿವ ಜನಾರ್ಧನ ರೆಡ್ಡಿ ೬೦ ಕೋಟಿಗೆ ನ್ಯಾಯಾಧೀಶರ ಜೊತೆ ಡೀಲ್ ಮಾಡಿರುವುದು ಇವರ ಹಗರಣಗಳ ಕೈಗನ್ನಡಿಯಾಗಿದೆ. ಹಗರಣಗಳ ಸರಮಾಲೆಯನ್ನು ಕೊರಳಿಗೆ ಹಾಕಿಕೊಂಡು ನಾವುಗಳು ಅಭಿವೃದ್ದಿಯ ಹರಿಕಾರರೆಂದು ಮುಖ್ಯಮಂತ್ರಿಗಳು ಬಿಗಿಯುತ್ತಿದ್ದಾರೆ.  ಬಿಜೆಪಿಯ ಸಚಿವರು ಹಾಗೂ ಶಾಸಕರು ದಿನನಿತ್ಯ ಬುದ್ದಿಬ್ರಮಣೆಯಾದವರತರ ವರ್ತಿಸುತ್ತಿದ್ದಾರೆ. ಇವರಿಗೆ ರಾಜ್ಯದ ಅಭಿವೃದ್ದಿಯ ಬದಲು ಲೂಟಿ ಮತ್ತು ಸ್ವ ಅಭಿವೃದ್ದಿಯನ್ನು ರಾಜ್ಯದ ಅಭಿವೃದ್ದಿಯಂದು ಬಿಂಬಿಸುತ್ತಿದ್ದಾರೆ. ಪದವೀದರ ಕ್ಷೇತ್ರದ ಪ್ರಬುದ್ದ ಮತದಾರರು ನಮ್ಮ ಪಕ್ಷದ ಅಬ್ಯರ್ಥಿಯಾದ ಡಾ. ಶಿವಾನಂದ ಎಸ್. ಬೀಮಳ್ಳಿಯವರಿಗೆ ಮತನೀಡಿ ಭಾರಿ ಅಂತರದಿಂದ ಆರಿಸಿತರಲಿದ್ದಾರೆ ಎಂದು ಹೇಳಿದರು. ಈ ಸಂದರ್ಬದಲ್ಲಿ ಎಸ್.ಬಿ. ನಾಗರಳ್ಳಿ, ಜುಲ್ಲು ಖಾದರಿ, ಮರ್ದಾನಲಿ ಅಡ್ಡೆವಾಲಿ, ಹೆಚ್.ಎಲ್. ಹಿರೇಗೌಡರ, ಈಶಪ್ಪ ಮಾದಿನೂರ, ಹನುಮರಡ್ಡಿ ಹಂಗನಕಟ್ಟಿ, ಗವಿಸಿದ್ದಪ್ಪ ಮುದಗಲ್, ಕಾಟನ ಪಾಷಾ, ಮಾನ್ವಿ ಪಾಷಾ, ದಾರವಾಡ ರಫಿ, ಮೈಬೂಬ ಅರಗಂಜಿ ಹಾಗೂ ಇನ್ನು ಅನೇಕ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷದ ವಕ್ತಾರ ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು.
Please follow and like us:
error