ಸಮಯದ ಸದುಪಯೋಗ ಪಡಿಸಿಕೊಳ್ಳಿ:ನಾಗರಾಜ ಪರಡೇಕರ

ಕೊಪ್ಪಳ: ವಿದ್ಯಾರ್ಥಿಗಳು ಸಮಯದ ಸದುಪಯೋಗವನ್ನು ಪಡಿಸಕೊಳ್ಳುವಂತೆ ಶಿಕ್ಷಕರಾದ ನಾಗರಾಜ ಪರಡೇಕರ ಹೇಳಿದರು.ಅವರು ತಾಲೂಕಿನ ಕುಣಿಕೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೮ನೇ ತರಗತಿ ವಿದ್ಯಾರ್ಥಿಗಳಿಗೆ ಬಿಳ್ಕೋಡಿಗೆ ಸಮಾರಂಭ ಹಾಗೂ ಸರಸ್ವತಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಮಯವೆಂಬುದ ವಿದ್ಯಾರ್ಥಿ ಜೀವನದಲ್ಲಿ ಬಹಳ ಮುಖ್ಯವಾದದು ಅದರ ಜೊತೆ ಚೆಲ್ಲಾಟವಾಡದೆ ಅದನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿ ಕೊಂಡರೆ , ಭವಿಷ್ಯತ್ತಿನಲ್ಲಿ ಉತ್ತಮ ಜೀವನ ರೂಪಿಸಿ ಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
        ಮತ್ತೊರ್ವ ಶಿಕ್ಷಕರಾದ ನಾಗಮೂರ್ತಿ ಪತ್ತಾರ ಕಾರ್ಯಕ್ರಮ ಕುರಿತು ಮಾತನಾಡಿದರು . ಇದೇ ಸಂದರ್ಭದಲ್ಲಿ ದಿವಂಗತ ಮಲ್ಲಪ್ಪ ಸಬರದ ಇವರ ಸ್ಮರಣಾರ್ಥ ಅವರ ಮಕ್ಕಳಾದ ಕೊಟ್ರೇಶ ಸಬರದ ಹಾಗೂ ಬಸವರಾಜ ಸಬರದ ರವರು ೨೦೧೧-೨೦೧೨ ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕಪಡೆದು ಪ್ರಥಮ ಸ್ಥಾನದ ಕುಮಾರಿ ಹನುಮಕ್ಕ ಸಂಗಟಿ , ದ್ವಿತೀಯ ಸ್ಥಾನ ಪಡೆದ ಕುಮಾರಿ ಮಂಜುಳಾ ಮಾಲಿಪಾಟೀಲ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.      
     ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾದ್ಯಾಯರಾದ ವೀರೇಶ ಅರಳಿಕಟ್ಟಿ ವಹಿಸಿದ್ದರು.  ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬೀರಪ್ಪ ಅಂಡಗಿ ಚಿಲವಾಡಗಿ,ಬಿ.ಎಂ.ನಾಗರಡ್ಡಿ,ವೆಂಕಪ್ಪ ಹನಸಿ ಮುಂತಾದವರು ಹಾಜರಿದ್ದರು.
ವಿದ್ಯಾರ್ಥಿನಿಯರಾದ ಮಂಜುಳಾ ಕುಂಬಾರ,ಸುಧಾ ಮಾಲೀ ಪಾಟೀಲ,ಶಾಂತಾ ಹಿರೇಮಠ,ರತ್ನಾ ವಾಲಿಕಾರ ಪ್ರಾರ್ಥನೆ ನೇರವೇರಿಸಿದರು.
   ಶಿಕ್ಷಕಿ ಸಾವಕ್ಕ ಹುಬ್ಬಳ್ಳಿ ಸ್ವಾಗತಿಸಿ,ಸುಧಾ ಎಲ್ಲರಿಗೂ ವಂದಿಸಿದರು.
Please follow and like us:
error