ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಕ್ಷದ ಅಭ್ಯರ್ಥಿ ಭಾರದ್ವಾಜ್ ನಾಮಪತ್ರ ಸಲ್ಲಿಕೆ

 ಸಿ.ಪಿ.ಐ.ಎಂ.ಎಲ್. ಪಕ್ಷದ ಅಭ್ಯರ್ಥಿಯು ಚುನಾವಣಾಧಿಕಾರಿ ಮೋಹನ್‌ರಾಜ್ ಇವರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸಾಹಿತಿ ವಿಠ್ಠಪ್ಪ ಗೋರಂಟ್ಲಿ, ಪ್ರಗತಿಪರ ಮಹಿಳಾ ಸಂಘಟನೆಯ ಸಂಚಾಲಕಿ ಶಾಂತಕುಮಾರಿ, ಅಯ್ಯಾಲಾ ತಾಲೂ ಅಧ್ಯಕ್ಷರು ಯೇಸಪ್ಪ, ಸಿ.ಪಿ.ಐ.ಎಂ.ಎಲ್. ಜಿಲ್ಲಾ ಕಾರ್ಯದರ್ಶಿ ಉಪಸ್ಥಿತರಿದ್ದರ
ಈ ಚುನಾವಣೆಯಲ್ಲಿ ಸಿ.ಪಿ.ಐ.ಎಂ.ಎಲ್. ಲಿಬರೇಷನ್ ಪಕ್ಷ ಬಿಜೆಪಿ ಹಾಗೂ ಕಾಂಗ್ರೇಸ್‌ಗಳ ವಿರುದ್ಧ ಸೈದ್ಧಾಂತಿಕ ಹೋರಾಟ ಮಾಡುತ್ತಾ ಮತದಾರರಲ್ಲಿ ಪ್ರಜ್ಞೆ ಮೂಡಿಸಲಿದೆ ಎಂದಿದ್ದಾರೆ. ಸುಮಾರು ೧೦೦ ಜನ ಕಾರ್ಯಕರ್ತರೊಂದಿಗೆ ಕೊಪ್ಪಳದಲ್ಲಿ ಮೆರವಣಿಗೆಯೊಂದಿಗೆ ಹೋಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಎ.ಐ.ಸಿ.ಸಿ.ಟಿ.ಯು. ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ, ತಾಲೂಕ ಅಧ್ಯಕ್ಷ ಮೋಹನ್, ಕಟ್ಟಡ ಕಾರ್ಮಿಕ ಅಧ್ಯಕ್ಷ ಭಾಷಾ, ಪ್ರಗತಿಪರ ಯುವಜನ ಸಂಘದ ಸಂಚಾಲಕ ಮುತ್ತಣ್ಣ ಇವರ ಜೊತೆಗೆ ನೂರಾರು ಕಾರ್ಮಿಕರು ಭಾಗವಹಿಸಿದ್ದರೆಂದು ಸಿ.ಪಿ.ಐ.ಎಂ.ಎಲ್. ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಸನಗೌಡ ಸುಳೆಕಲ್  

ತಿಳಿಸಿದ್ದಾರೆ.

Related posts

Leave a Comment