ವಾಹನಗಳಲ್ಲಿನ ಸನ್‌ಫಿಲ್ಮ್ ತೆಗೆದುಹಾಕಲು ಆರ್‌ಟಿಓ ಸೂಚನೆ

 ವಾಹನಗಳ ವಿಂಡೋ ಸ್ಕ್ರೀನ್ ಹಾಗೂ ರಿಯರ್ ವಿಂಡೋಗಳ ಗಾಜಿಗೆ ಅಳವಡಿಸಿರುವ ಸನ್ ಫಿಲ್ಮ್ ಅನ್ನು ಕಡ್ಡಾಯವಾಗಿ ತೆಗೆದುಹಾಕುವಂತೆ ಸರ್ವೋಚ್ಛ ನ್ಯಾಯಾಲಯ ಆದೇಶಿಸಿದ್ದು, ಇದರನ್ವಯ ವಾಹನಗಳಿಗೆ ಅಳವಡಿಸಿರುವ ಸನ್‌ಫಿಲ್ಮ್ ಅನ್ನು ತೆಗೆದುಹಾಕುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಪಿ.ಜಿ. ಪಾಂಡುರಂಗಶೆಟ್ಟಿ ಅವರು ತಿಳಿಸಿದ್ದಾರೆ.
  ಕೇಂದ್ರ ಮೋಟಾರು ವಾಹನ ನಿಯಮ ೧೯೮೯ ರ ನಿಯಮ ೧೦೦ (೨) ರಲ್ಲಿ ತಿಳಿಸಿರುವಂತೆ ವಾಹನಗಳ ವಿಂಡೋ ಸ್ಕ್ರೀನ್ ಹಾಗೂ ರಿಯರ್ ವಿಂಡೋಗಳಲ್ಲಿ ಅಳವಡಿಸಿರುವ ಸನ್ ಫಿಲ್ಮ್ ಅನ್ನು ಕಡ್ಡಾಯವಾಗಿ ತೆಗೆದುಹಾಕುವಂತೆ ಸರ್ವೋಚ್ಛ ನ್ಯಾಯಾಲಯ ಕಳೆದ ಏ. ೨೭ ರಂದು ಆದೇಶ ಹೊರಡಿಸಿದೆ.  ಈಗಾಗಲೆ ಇದರ ಬಗ್ಗೆ ಗಮನಹರಿಸಿ, ವಾಹನಗಳ ತನಿಖಾ ಕಾರ್ಯ ಕೈಗೊಂಡು ಪ್ರಕರಣಗಳನ್ನು ದಾಖಲಿಸುವಂತೆ ಸಾರಿಗೆ ಇಲಾಖೆಯ ಪ್ರವರ್ತನಾ ಸಿಬ್ಬಂದಿಯವರಿಗೆ ಆದೇಶಿಸಲಾಗಿದೆ.  ಈ ಕುರಿತಂತೆ ಸಾರಿಗೆ ಇಲಾಖೆಯೊಂದಿಗೆ ಸಹಕರಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
Please follow and like us:
error