ರಮ್‌ಜಾನ್ ಹಬ್ಬದ ಆಹಾರದ ಸಾಮಾಗ್ರಿ ಹಾಗೂ ಸೀರೆ ವಿತರಣೆ

ರವಿವಾರದಂದು ಬೆಳಿಗ್ಗೆ ನಗರದ ಹುಸೇನಿ ಮೊಹಲ್ಲಾದ ತೆಗ್ಗಿನಕೇರಾ ಓಣಿಯ ಅಬುಬಕರ್ ಮಸೀದಿ ಹತ್ತಿರ ರಮಜಾನ್ ಹಬ್ಬದ ಪ್ರಯುಕ್ತ ಹುಸೇನಿ ಮೊಹಲ್ಲಾ, ಹಟಗಾರ ಪೇಟೆ, ತೆಗ್ಗಿನಕೇರಿ ಓಣಿಗಳ ನೌಜವಾನ್ ಕಮೀಟಿಗಳಿಂದ ಬಡ ವಿಧವಾ ಮಹಿಳೆಯರಿಗೆ ರಮ್‌ಜಾನ್ ಹಬ್ಬದ ಆಹಾರದ ಸಾಮಾಗ್ರಿ  ಹಾಗೂ ಸೀರೆಗಳನ್ನು ವಿತರಿಸಲಾಯಿತು. 
ಈ ಸಂದರ್ಭದಲ್ಲಿ ಅಬುಬಕರ ಮಸೀದಿ ಕಮೀಟಿ ಅಧ್ಯಕ್ಷ ಸೈಯ್ಯದ್ ಅಬ್ದುಲ್, ಮಜೀದ್ ಹುಸೇನಿ, ಅಬುಬಕರ ಮಸಿದಿಯಾ ಖತೀಬ್-ವ-ಇಮಾಮ್ ಹ.ಮೌ.ಮಹ್ಮದ್ ಜಹೊರ, ಅಹ್ಮದ್‌ಸಾಬ,ಹುಸೇನಿ ಮೊಹಲ್ಲಾ ಪಂಚಕಮೀಟಿ ಆಧ್ಯಕ್ಷ ಸೈಯದ್ ಶಬ್ಬೀರ್ ಹುಸೇನಿ ,ಖಾಸಿಂ ಸಾಬ ಲೇಬಗೇರಿ, ಖಲೀವ್ ಅಹ್ಮದ್, ಅಬ್ದುಲ್‌ಗನಿಸಾಬ ಇಲಕಲ್, ಹಟಗಾರಪೇಟೆ ಪಂಚ್ ಕಮೀಟಿ ಅಧ್ಯಕ್ಷ ಸೈಯ್ಯದ್ ರಹಿಮತ್ ಹುಸೇನಿ, ವೀಖಾರ್ ಆಲಂಸಾಬ, ಅಬ್ಬಾಸ್‌ಅಲಿ, ಗಂಗಾವತಿ ಎಂ.ಡಿ. ಮಂಡಲಗೇರಿ ಮುಂತಾದವರು ಭಾಗವಹಿಸಿದ್ದರು.

Leave a Reply