ಮೂಡಬಿದ್ರೆಯಲ್ಲಿ ಮಾ. ೦೮ ರಿಂದ ರಾಜ್ಯ ಮಟ್ಟದ ಯುವಜನ ಮೇಳ.

ಕೊಪ್ಪಳ ಫೆ. ೨೭ (ಕ ವಾ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ೨೦೧೪-೧೫ ನೇ ಸಾಲಿನ ರಾಜ್ಯ ಮಟ್ಟದ ಯುವಜನ ಮೇಳವನ್ನು ಮಾ. ೦೮ ರಿಂದ ೧೦ ರವರೆಗೆ ಮೂರು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ಆಯೋಜಿಸಲಾಗಿದೆ.ವಿಭಾಗ ಮಟ್ಟದ ಯುವಜನ ಮೇಳದಲ್ಲಿ ಆಯ್ಕೆಯಾದ ಸ್ಪರ್ಧಾಳುಗಳು ಮಾ. ೦೮ ರಂದು ಬೆಳಿಗ್ಗೆ ೧೧ ಗಂಟೆಯೊಳಗೆ ಸಂಘಟಕರಲ್ಲಿ ತಮ್ಮ ಹೆಸರನ್ನು ಹೋಂದಾಯಿಸಿ, ಅಂದು ಸಂಜೆ ೦೪ ಗಂಟೆಗೆ ಜರುಗುವ ಉದ್ಘಾಟನಾ ಸಮಾರಂಭಕ್ಕೆ ಕಡ್ಡಾಯವಾಗಿ ಹಾಜರಾಗಬೇಕು.  ವಿಭಾಗ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಿ ವಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದವರು ಮತ್ತು ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು ಮಾತ್ರ ರಾಜ್ಯ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಲು ಅರ್ಹರು.  ಸ್ಪರ್ಧಾಳುಗಳಿಗೆ ಊಟೋಪಹಾರದ ವ್ಯವಸ್ಥೆ ಹಾಗೂ ವಸತಿ ವ್ಯವಸ್ಥೆಯನ್ನು ಸಂಘಟಕರು ಮಾಡುವರು.  ಸ್ಪರ್ಧಾಳುಗಳಿಗೆ ಕೊಪ್ಪಳದಿಂದ ಮೂಡಬಿದ್ರೆಗೆ ಹೋಗಿ ಬರಲು ಸಾಮಾನ್ಯ ಬಸ್ ಪ್ರಯಾಣ ಭತ್ಯೆ ನೀಡಲಾಗುವುದು.  ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಕೊಪ್ಪಳ, ಮೊ. ಸಂ: ೯೪೮೦೮೮೬೪೭೫ ಅಥವಾ ೯೪೮೨೮೪೭೩೨೦ ಕ್ಕೆ ಸಂಪರ್ಕಿಸುವಂತೆ ತಿಳಿಸಿದೆ.

Please follow and like us:
error