fbpx

ಜಗತ್ತಿನಲ್ಲಿ ಜ್ಞಾನಕ್ಕೆ ಸಮನಾದ ವಸ್ತು ಯಾವುದೂ ಇಲ್ಲ – ಡಾ. ಅನ್ನದಾನೇಶ್ವರ ಸ್ವಾಮಿಗಳು

ಜ್ಞಾನ ಬಂಧು ಶಾಲೆಯ ೫ನೇ ವಾರ್ಷಿಕೋತ್ಸವ ಸಮಾಂಭ
 ಶಿಕ್ಷಣದಿಂದ ಶಿರ ತುಂಬಬೇಕು, ಶಿಕ್ಷಣದಿಂದ ಉದರ ತುಂಬಬೇಕು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣದ ಅಗತ್ಯತೆ ಬಹಳ ಇದೆ.  ಜಗತ್ತಿನಲ್ಲಿ ಜ್ಞಾನಕ್ಕೆ ಸಮನಾದ ವಸ್ತು ಯಾವುದೂ ಇಲ್ಲ, ಜ್ಞಾನವಂತರು ನಿಜವಾದ ಶ್ರೀಮಂತರು.  ಜ್ಞಾನಕ್ಕೆ ಮಹತ್ವ ಕೊಡಬೇಕು ಮತ್ತು ಜ್ಞಾನ ಸೇವೆ ಯಾಗಬೇಕು ಎಂದು ಶ್ರೀ ಮ.ನಿ.ಪ್ರ.ಸ್ವರೂಪಿ. ನಾಡೋಜ ಡಾ. ಅನ್ನದಾನೇಶ್ವರ ಸ್ವಾಮಿಗಳು ಸಂಸ್ಥಾನ ಮಠ ಮುಂಡರಗಿ ಅಭಿಪ್ರಾಯ ಪಟ್ಟರು.
ಇಲ್ಲಿಗೆ ಭಾಗ್ಯನಗರದ ಜ್ಞಾನ ಬಂಧು ವಸತಿ ಶಾಲೆಯನ್ನು ಉದ್ಘಾಟಿಸಿ ತಮ್ಮ ಆಶೀರ್ವಚನ ನೀಡಿದರು.  ಎಂಟೊಂಬತ್ತು ತಿಂಗಳಲ್ಲಿ ಶಾಲಾ ಕಟ್ಟಡಕ್ಕೆ ಹೊಸರೂಪ ಕೊಟ್ಟು ವೇಗವಾಗಿ ಕೆಲಸ ಮಾಡುವಾಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಿಗಿರುವ ಶೈಕ್ಷಣಿಕ ಕಾಳಜಿ ವ್ಯಕ್ತವಾಗುತ್ತದೆ ಈ ವಿಚಾರದಲ್ಲಿ   ದಾನಪ್ಪ ಕವಲೂರು ಅವರು ಪ್ರಶಂಸನೀಯರು ಎಂದು ನುಡಿದರು.
ಜ್ಞಾನ ಬಂಧು ಶಾಲೆ ಬಹಳಷ್ಟು ಮಂದಿಗೆ ಜ್ಞಾನ ತುಂಬುವ ಮಂದಿರವಾಗುತ್ತದೆ.  ಇದು ದೊಡ್ಡ ಪ್ರಮಾಣದಲ್ಲಿ ಬೆಳೆಯಲಿ, ಅಕ್ಷರ ದಾನ ಬಹು ಪ್ರಮುಖವಾದ ದಾನವಾಗಿದೆ.  ಉತ್ತಮ ಗುಣ ಮಟ್ಟದ ಶಿಕ್ಷಣ ನೀಡುವ ಕೆಲವೇ ಕೆಲವು ಶಾಲೆಗಳಲ್ಲಿ ಜ್ಞಾನ ಬಂಧು ಶಾಲೆಯೂ ಒಂದಾಗಿದೆ ಎಂದು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಶಾಸಕರಾದ ರಾಘವೇಂದ್ರ ಹಿಟ್ನಾಳ ಅವರು ಅಭಿಪ್ರಾಯ ಪಟ್ಟರು.
 ರಾಘವೇಂದ್ರ ಪಾನಘಂಟಿ ಅವರು ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಈ ಸಂಸ್ಥೆಯು ಎತ್ತರ ಎತ್ತರಕ್ಕೆ ಬೆಳೆಯಿಲಿ, ಉತ್ತಮ ಗುಣ ಮಟ್ಟದ ಶಿಕ್ಷಣವನ್ನು ನೀಡಲಿ ಎಂದು ಶುಭ ಹಾರೈಸಿದರು.
ಪ್ರತಿಯೊಂದು ಮಗುವೂ ವಿಶೇಷವೆ, ಆ ವಿಶೇಷತೆಯನ್ನು ಗುರುತಿಸಿ ಸದೃಢ ಯುವ ಜನಾಂಗವನ್ನ ಕಟ್ಟುವುದು ಸಂಸ್ಥೆಯ ದೂರ ದೃಷ್ಠಿ ಎಂದು ದಾನಪ್ಪ ಕವಲೂರ ಸಂಸ್ಥೆಯ ಅಧ್ಯಕ್ಷರು ತಮ್ಮ ಮನದಾಳದ ಮಾತುಗಳನ್ನು ಪ್ರಸ್ತುತ ಪಡಿಸಿದರು.
ಈ ಕಾರ್ಯಕ್ರಮದಲ್ಲಿ ಮುದೇನಗೌಡ ಮಾ.ಪಾಟೀಲ ಅಧ್ಯಕ್ಷರು ತಾ.ಪಂ. ಕೊಪ್ಪಳ, ಕರಿಯಮ್ಮ ಹೊಸಳ್ಳಿ ಉಪಾಧ್ಯಕ್ಷರು ತಾ.ಪಂ.ಕೊಪ್ಪಳ, ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ, ಯಮನಪ್ಪ ಕಬ್ಬೇರ ಮಾಜಿ ಉಪಾಧ್ಯಕ್ಷರು ಜಿ.ಪಂ.ಕೊಪ್ಪಳ, ಶ್ರೀನಿವಾಸ ಹ್ಯಾಟಿ ಸದಸ್ಯರು ತಾ.ಪಂ.ಕೊಪ್ಪಳ, ಹೊನ್ನೂರಸಾಬ ಭೈರಾಪೂರ ಅಧ್ಯಕ್ಷರು ಗ್ರಾಂ. ಪಂ. ಭಾಗ್ಯನಗರ, ಅಲಿಮುದ್ದೀನ್ ಅಧ್ಯಕ್ಷರು ಕೊ.ತಾ.ಅ.ಶಾ.ಆ.ಮಂ.ಒ.ಕೊಪ್ಪಳ. ವಾಯ.ಎನ್.ಪಡಸಾಲಿಮನಿ, ಬಿ.ಆರ್.ಸಿ ಚನ್ನಬಸಪ್ಪ ಹಮ್ಮೀಗಿ, ಬಸಪ್ಪ ದೇವರಮನಿ, ಮಲ್ಲಿಕಾರ್ಜುನ ಚೌಡಕಿಮಠ, ಹಾಗೂ ಪ್ರಲ್ಹಾದ ಅಗಳಿ ಮತ್ತು ಇತರರು ಉಪಸ್ಥಿತರಿದ್ದರು.
ಪ್ರಶಾಂತ ಕುಲಕರ್ಣಿ ಸ್ವಾಗತಿಸಿದರು, ಕಲ್ಲಯ್ಯ ಹಿರೇಮಠ ಅವರು ವಂದಿಸಿದರು, ಮತ್ತು ಶಿವರಾಜ ಏಣಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಹೊಸ ಶಾಲಾ ಕಟ್ಟಡದೊಂದಿಗೆ ೬ ಎಕರೆ ವಿಸ್ತೀರ್ಣದಲ್ಲಿ ಸುಂದರವಾಗಿ ರೂಪಕೊಂಡಿರುವ ಜ್ಞಾನ ಬಂಧು ವಸತಿ ಶಾಲೆಯಲ್ಲಿ ಜ್ಞಾನ ಬಂಧು ಪ್ರಾಥಮಿಕ ಶಾಲೆಯ ೫ನೇ ವಾರ್ಷಿಕೋತ್ಸವ ಕಾ

ರ್ಯಕ್ರವು ವಿಜೃಂಭಣೆಯಿಂದ ಜರುಗಿತು.  ಪಾಲಕರೂ ಸಾರ್ವಜನಿಕರೂ ಸೇರಿದಂತೆ ಸುಮಾರು ಸಾವಿರಾರು ಜನ ಈ ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಾಲಕಿಯರ ಸ.ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ವ್ಹಿ.ಬಿ.ರಡ್ಡೇರ ಅವರು ಪಾಲಕರನ್ನುದ್ದೇಶಿಸಿ ಮಾತನಾಡಿ, ಮಕ್ಕಳಿಗೆ ಕನ್ನಡ ಮತ್ತು ಆಂಗ್ಲ ಭಾಷೆ ಎರಡನ್ನು ಸಮನಾಗಿ ಕಲಿಸಿ, ಮಾತೃ ಭಾಷೆಯೂ ಅಗತ್ಯ ಮತ್ತು ಆಂಗ್ಲ ಭಾಷೆಯೂ ಅಗತ್ಯ ಎಂದು ನುಡಿದರು.  ಇನ್ನೊರ್ವ ಮುಖ್ಯ ಅತಿಥಿಗಳಾದ ಸಿ.ವಿ.ಜಡಿಯವರು ಮಕ್ಕಳ ಭವಿಷ್ಯ ಈ ನಾಡಿನ ತಾಯಂದಿರ ಕಯ್ಯಲ್ಲಿದೆ ಅದರ ಜವಾಬ್ದಾರಿಯನ್ನು ಕೇವಲ ಶಿಕ್ಷಣ ಸಂಸ್ಥೆಗಳ ಮೇಲೆ ಹೊರಿಸಬಾರದು ಎಂದು ವಿನಂತಿಸಿಕೊಂಡರು.  ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಿ ಎಂದು ನುಡಿದರು.
ತದನಂತರ ನರ್ಸರಿ ಮಕ್ಕಳ ಛದ್ಮವ
Please follow and like us:
error

Leave a Reply

error: Content is protected !!