You are here
Home > Koppal News > ಕೊಪ್ಪಳದಲ್ಲಿ ಮಾಸ್ಟರ್ ಪೀಸ್.. ಹವಾ.

ಕೊಪ್ಪಳದಲ್ಲಿ ಮಾಸ್ಟರ್ ಪೀಸ್.. ಹವಾ.

ಮಾಸ್ಟರ್‍ಪೀಸ್ ಚಿತ್ರ ನೋಡಲು ಮುಗಿಬಿದ್ದ
ಪ್ರೇಕ್ಷಕರು ಇಂದು ಸ್ಯಾಂಡಲ್‍ವುಡ್‍ನಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ
ಮಾಸ್ಟರ್‍ಪೀಸ್ ಚಿತ್ರ ರಿಲೀಸ್ ಆಗಿದೆ. ರಿಲೀಸ್‍ಗೂ ಮುನ್ನವೇ ಚಿತ್ರದ 7 ಸಾವಿರ ಟಿಕೆಟ್
ಸೋಲ್ಡ್ ಔಟ್ ಆಗಿದ್ದ ಕಾರಣ ಹಲವು ಅಭಿಮಾನಿಗಳಿಗೆ ಚಿತ್ರ ನೋಡಲು ಸಾಧ್ಯವಾಗುತ್ತಿಲ್ಲ.
ಹೀಗಾಗಿ ಚಿತ್ರಮಂದಿರಗಳ ಮುಂದೆ ನಿಂತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂದು
ಬೆಳಗ್ಗಿನಿಂದಲೇ ಯಶ್ ಅಭಿಮಾನಿಗಳು ಚಿತ್ರ ವೀಕ್ಷಿಸಲು ಬಂದಿದ್ದು, ಕೆಲವರು ಟಿಕೆಟ್
ಸಿಗದಕ್ಕೆ ಥಿಯೇಟರ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರದ ಬಗ್ಗೆ ಉತ್ತಮ
ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತ ಬಳ್ಳಾರಿ ಚಿತ್ರಮಂದಿರಗಳ ಇತಿಹಾಸದಲ್ಲಿ ಮೊದಲ
ಬಾರಿಗೆ ಕನ್ನಡ ಚಿತ್ರ ಮಧ್ಯರಾತ್ರಿ 2:30 ಪ್ರದರ್ಶನಗೊಂಡಿದೆ. ಇದುವರೆಗೂ ಕನ್ನಡ
ಚಿತ್ರಗಳ ಪ್ರದರ್ಶನ 5-6ಕ್ಕೆ ಪ್ರದರ್ಶನ ಆರಂಭವಾಗುತ್ತಿತ್ತು. ಆದರೆ ಮಾಸ್ಟರ್‍ಪೀಸ್
ಚಿತ್ರ ನೋಡಲು ನೂಕು ನುಗ್ಗಲು ಇದ್ದ ಪರಿಣಾಮ 2:30 ಮೊದಲ ಪ್ರದರ್ಶನ ಆರಂಭವಾಗಿದೆ.
ಅಲ್ಲದೇ ಥಿಯೇಟರ್‍ನೊಳಗೆ ಚಿತ್ರ ವೀಕ್ಷಿಸುತ್ತಿದ್ದ ಪ್ರೇಕ್ಷಕರು ಚಿತ್ರದ ಹಾಡಿಗೆ
ಕುಣಿಯುತ್ತಿದ್ದ ದೃಶ್ಯಗಳು ಕಂಡುಬಂದವು.

Leave a Reply

Top