fbpx

ಅಂಜುಮನ್ ಸಂಸ್ಥೆಯ ಅಧ್ಯಕ್ಷರಿಂದ ಉಚಿತ ಕಂಪ್ಯೂಟರ್ ತರಬೇತಿಗೆ ಚಾಲನೆ.

ಕೊಪ್ಪಳ ೧೨. ನಗರದ ಬಹಾದ್ದೂರಬಂಡಿ ರಸ್ತೆಯಲ್ಲಿರುವ ಅಂಜುಮನ್ ಸಂಸ್ಥೆಯಲ್ಲಿ ಉಚಿತ ಕಂಪ್ಯೂಟರ್ ತರಬೇತಿಗೆ ಸಂಸ್ಥೆಯ ಅಧ್ಯಕ್ಷರಾದ ಎಂ. ಪಾಶಾ ಕಾಟನ್ ಇವರು ಚಾಲನೆ ನೀಡಿ ಬಡ ಮುಸ್ಲಿಂ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಆಧುನಿಕ ಶಿಕ್ಷಣಕ್ಕೆ ಅತ್ಯವಶ್ಯಕ ಕಂಪ್ಯೂಟರ್ ಜ್ಞಾನವನ್ನು ಪ್ರತಿಯೊಬ್ಬ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಡೆದುಕೊಂಡು ಆಧುನಿಕ ಶಿಕ್ಷಣದಲ್ಲಿ ಹೆಚ್ಚಿನ ಕೀರ್ತಿ ಪಡೆಯಬೇಕೆಂದು ಕರೆ ನೀಡಿದರು. 
ಶಿಕ್ಷಣದಿಂದ ಸಮಾಜದ ಅಭಿವೃದ್ಧಿಗೆ ಸಹಕಾರವಾಗಲಿದ್ದು ಆರ್ಥಿಕವಾಗಿ ಸಬಲರಾಗಲಿಕ್ಕೆ ಕಂಪ್ಯೂಟರ್ ಶಿಕ್ಷಣ ಅತ್ಯವಶ್ಯವೆಂದು ಹೇಳಿದರು. ಈ ತರಬೇತಿಯು ೬ ತಿಂಗಳದ ಅವಧಿಯಾಗಿದ್ದು ಸುಮಾರು ೪೦ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಚಿತ ತರಬೇತಿ ನೀಡಲಾಗುವುದು. ಈ ಸಂದರ್ಭದಲ್ಲಿ ಮಾನವಿ ಪಾಶಾ, ಡಿಡ್ಡಿ ಗಫಾರ, ಹುಸೇನಪೀರಾಂ ಚಿಕನ್, ಜೀಲಾನ್ ಮೈಲೈಕ್, ಅಬ್ದುಲ್ ಅಜೀಜ್, ಆಸಿಫ್ ಪಲ್ಟನ್, ರಫೀಕ್ ಧಾರವಾಡ, ಸಿ.ಎಂ. ಮುಸ್ತಫಾ, ಹಬೀಬ ಪಾಶಾ, ಅಜೀಮ್ ಗ್ಯಾಸ್‌ವಾಲೆ, ಮಹೆಬೂಬ ಅರಗಂಜಿ, ಪಾಶಾ ಮೆಕಾನಿಕ್, ರಹೀಂ ಗುತ್ತೇದಾರರು, ಧರ್ಮ ಗುರುಗಳಾದ ಖಾಜಿ ಸಾಬ, ಕಬೀರ್ ಸಿಂದೋಗಿ, ಅಲೀಂ ಹುಡಾ, ಚಾಂದ್‌ಪಾಶಾ ಕಿಲ್ಲೇದಾರ ಇನ್ನೂ ಅನೇಕ ಸಂಸ್ಥೆಯ ಕಾರ್ಯದರ್ಶಿ ಅಕ್ಬರ್ ಪಾಶಾ ಪಲ್ಟನ್, ಅಂಜುಮನ್ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!