ಔಷಧಗಳ ಬೆಲೆ ನಿಯಂತ್ರಣ ಆದೇಶ ಪುಸ್ತಕ ಬಿಡುಗಡೆ

ಗಂಗಾವತಿ ಇತ್ತೀಚೆಗೆ ಗಂಗಾವತಿ ನಗರದ ಖಾಸಗಿ ಅತಿಥಿ ಗೃಹವೊಂದರ ಸಭಾಂಗಣದಲ್ಲಿ ಔಷಧಗಳ ಬೆಲೆ ನಿಯಂತ್ರಣ ಆದೇಶ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಔಷಧಗಳು ಮತ್ತು ಜಾದು ಉಪಶರ್ಮಗಳು (ಆಕ್ಷೇಪಾರ್ಹ ಜಾಹಿರಾತುಗಳು) ಕಾಯ್ದೆ ೧೯೫೪ ಮತ್ತು ನಿಯಮಾವಳಿಗಳು ೧೯೫೫ ಹಾಗೂ ನಾರ್ಕೋಟಿಕ್ಸ್ ಔಷಧಗಳು ಮತ್ತು ಸೈಕೋಟ್ರೋಪಿಕ್ ವಸ್ತುಗಳ ಕಾಯ್ದೆ ೧೯೮೫ ಮತ್ತು ನಿಯಮಾವಳಿಗಳು ೧೯೮೫ ಹಾಗೂ ಔಷಧಗಳ (ಬೆಲೆಗಳ ನಿಯಂತ್ರಣ) ಆದೇಶ ೨೦೧೩ ಮತ್ತು ಅಗತ್ಯ ವಸ್ತುಗಳ ಕಾಯ್ದೆ ೧೯೫೫ ಈ ಎಲ್ಲಾ ನಿಯಮಗಳನ್ನೊಳಗೊಂಡ ಪುಸ್ತಕ ಇದಾಗಿದ್ದು, ಇಂಗ್ಲೀಷ್ ಹಾಗೂ ಕನ್ನಡ ಭಾಷೆಗಳಲ್ಲಿ ಸಂಯುಕ್ತವಾಗಿ ಹೊರತರಲಾಗಿದೆ.
ಈ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತಿ, ವಿಮರ್ಶಕರಾದ ನಿವೃತ್ತ ಜಿಲ್ಲಾ ಖಜಾನೆ ಅಧಿಕಾರಿ ಎ.ಎಂ.ಮದರಿ ಕಾನೂನಿನ ಪುಸ್ತಗಳು ಅರಿವಿಗೆ ಪೂರಕವಾಗಿದ್ದು, ಅದರಲ್ಲೂ ಕನ್ನಡದಲ್ಲಿ ಈ ನಿಯಮಗಳು ಪ್ರಕಟವಾಗುವುದರಿಂದ ಜನ ಸಾಮಾನ್ಯನಿಗೂ ನಿಯಮಗಳು ಅರ್ಥವಾಗುತ್ತವೆ. ಇತರ ವಿಷಯಗಳಿಗೆ ಸಂಬಂಧಿಸಿದ ಹಲವು ಕಾನೂನು ಪುಸ್ತಕಗಳು ಕನ್ನಡದಲ್ಲಿ ಪ್ರಕಟಗೊಂಡಿವೆಯಾದರೂ ಔಷಧ ಕಾನೂನಿನ ಪುಸ್ತಕಗಳು ಕನ್ನಡದಲ್ಲಿ ಪ್ರಕಟಗೊಂಡಿರುವುದು ಅಪರೂಪ. ಇಂತಹ ಹೊಸ ಅದ್ಯಾಯಕ್ಕೆ ಕೈ ಹಾಕಿದ ಭಾಷಾಂತರಕಾರರಾದ ನಿವೃತ್ತ ರಾಜ್ಯ ಔಷಧ ನಿಯಂತ್ರಕರಾದ ಡಾ.ಬಿ.ಶ್ರೀಪತಿ ರಾವ್ ಹಾಗೂ ಪ್ರಕಾಶಕರಾದ ಅಶೋಕಸ್ವಾಮಿ ಹೇರೂರ ಅವರ ಕಾರ್ಯಶ್ಲಾಘನೀಯ ಎಂದರು. ಪುಸ್ತಕ ಸಮಾರಂಭ ಕಾರ್ಯಕ್ರಮದ ಆಶಯ ಎಲ್ಲವೂ ಭಿನ್ನವಾಗಿರುವುದರಿಂದ ಇದೊಂದು ಅಪೂರ್ವವಾದ ವೇದಿಕೆ ಇಂತಹ ಕ್ರಿಯಾಶೀಲ ವೇದಿಕೆಯಲ್ಲಿ ನಾನು ಭಾಗವಹಿಸಿರುವುದು ಇದೇ ಮೊದಲು ಎಂದು ಸಂತಸ ವ್ಯಕ್ತಪಡಿಸಿದರು.
ನ್ಯಾಯವಾದಿ ಹಾಗೂ ಪುಸ್ತಕದ ಪ್ರಕಾಶಕ ಅಶೋಕಸ್ವಾಮಿ ಹೇರೂರ ಮಾತನಾಡಿ ಇಂತಹ ಕಾರ್ಯಗಳಿಗೆ ಗಂಗಾವತಿ ತಾಲೂಕಿನ ಔಷಧ ವ್ಯಾಪಾರಿಗಳೇ ಪ್ರೇರಕರು, ಅವರು ನೀಡುವ ಉತ್ತೇಜನದಿಂದಲೆ ಔಷಧ ವಲಯದ ವಿವಿಧ ಕಾನೂನುಗಳನ್ನು ಕನ್ನಡದಲ್ಲಿ ಪ್ರಕಟಿಸಿ ನಾಡಿಗೆ ಸಮರ್ಪಿಸಲು ಸಾಧ್ಯವಾಗುತ್ತಿದೆ. ಈ ಕೀರ್ತಿ ಇಡೀ ಗಂಗಾವತಿ ತಾಲೂಕಿಗೆ ಸಲ್ಲುತ್ತಿದ್ದು, ಇಂತಹ ಕೆಲಸಗಳಿಂದಾಗಿ ಗಂಗಾವತಿಯ ಹೆಸರು ಇಡೀ ಭಾರತ ದೇಶದ ಜೊತೆಗೆ ಅಂಡಮಾನ, ನಿಖೋಬಾರ್‌ಗೂ ತಲುಪುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರವೂ ಸಹ ನೇರವಾಗಿ ಗಂಗಾವತಿ ನಗರದಲ್ಲಿರುವ ನಮ್ಮ ಸಂಘಟನೆಗಳೊಂದಿಗೆ ನೇರ ಸಂಪರ್ಕ ಸಾಧಿಸುತ್ತಿದೆ ಎಂದು ಹೇಳಿದರು. ಈಗಾಗಲೇ ಒಟ್ಟು ಮೂರು ಪುಸ್ತಕಗಳನ್ನು ಕನ್ನಡದಲ್ಲಿ ಭಾಷಾಂತರಿಸಿ ಮುದ್ರಿಸಲಾಗಿದ್ದು ಈ ಶ್ರೇಯಸ್ಸು ಪುಸ್ತಕಗಳ ಲೇಖಕರಾದ ಡಾ.ಬಿ.ಶ್ರೀಪತಿರಾವ್ ಅವರಿಗೆ ಸಲ್ಲುತ್ತದೆ ಎಂದರಲ್ಲದೆ ಮುಂದಿನ ದಿನಗಳಲ್ಲಿ ವೈಧ್ಯಕೀಯ ಕ್ಷೇತ್ರದ ಪುಸ್ತಕಗಳನ್ನು ಕನ್ನಡದಲ್ಲಿ ಹೊರತರಲಾಗುವುದು ಎಂದು ಹೇಳಿದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಬಳ್ಳಾರಿ ವೃತ್ತದ ಸಹಾಯಕ ಔಷಧ ನಿಯಂತ್ರಕ ಎನ್.ಕೃಷ್ಣಾರೆಡ್ಡಿ, ಇಂಗ್ಲೀಷ್‌ನಲ್ಲಿದ್ದ ಕಾನೂನು ಮರ‍್ನಾಲ್ಕು ಅರ್ಥ ನೀಡುವಂತಿಂತ್ತು, ಆದರೆ ಕನ್ನಡದಲ್ಲಿ ಸ್ಪಷ್ಠ ಅರ್ಥನೀಡುವಂತೆ ನಿಯಮಗಳನ್ನು ಭಾಷಾಂತರಿಸಿಲಾಗಿದೆ ಎಂದು ಶ್ಲಾಘಿಸಿದರು.
ಕಾನೂನುಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಪಾಲನೆಗೆ ಒತ್ತುಕೊಡಬೇಕೆಂದು ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಕ ರೇಣುಕಾಸ್ವಾಮಿ ಎಚ್.ಎಂ. ಕರೆ ನೀಡಿದರು. ಗಂಗಾವತಿ ಔಷಧ ವ್ಯಾಪಾರಿಗಳಲ್ಲಿನ ಶಿಸ್ತು, ಸಂಯಮ, ಕ್ರಿಯಾಶೀಲತೆ ಮೆಚ್ಚುವಂತಹದ್ದು ಇಲ್ಲಿನ ಔಷಧ ವ್ಯಾಪಾರಿ ಸಂಘಟನೆಗಳ ಕಾರ್ಯಗಳು ದೇಶಕ್ಕೆ ಮಾದರಿ. ಈ ಸಂಘಟನೆಗಳ ಕೆಲಸಗಳನ್ನೂ ಇತರ ಜಿಲ್ಲೆಯ ಸಂಘಟನೆಗಳಿಗೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರಾಯಚೂರ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಿ.ಎಲ್.ಸ್ವಾಮಿ ಹೇಳಿದರು.
ರಾಯಚೂರ ಜಿಲ್ಲಾ ಔಷಧ ತಜ್ಞರ ಸಂಘದ ಅಧ್ಯಕ್ಷ ಜಿ.ಮುರುಘೇಂದ್ರ, ಕೊಪ್ಪಳ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಮತ್ತು ಅದರ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ನಮಗೆ ಮಾದರಿ. ಅವರ ಕಾರ್ಯಗಳನ್ನ ಪಾಲಿಸುವುದೇ ನಮ್ಮ ಧ್ಯೇಯ. ಇದರಿಂದ ನಾವು ಸಾಕಷ್ಟು ಬದಲಾಗಿದ್ದೇವೆ. ನಾಯಕರಾದವರು ಸರಿಯಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ ಎಂಬುದು ನಮ್ಮ ಅರಿವಿಗೆ ಬಂದಿದೆ ಎಂದರು.
ಕೊಪ್ಪಳ ವೃತ್ತದ ಔಷಧ ಪರಿವೀಕ್ಷಕ ಕೆ. ಮಂಜುನಾಥ ಕೊಪ್ಪಳ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಹನುಮರೆಡ್ಡಿ ಉಪಸ್ಥಿತರಿದ್ದ ಕಾರ್ಯಕ್ರಮದ ನಿರೂಪಣೆಯನ್ನು ಸಂಘದ ಮುಖ್ಯಸ್ಥರಾದ ನಾಗರಾಜಸ್ವಾಮಿ ಹಾಗೂ ರಘುನಾಥ ದರೋಜಿ ನಿರ್ವಹಿಸಿದರು. ಸುಮಾರು ಎರಡು ನೂರು ಜನ ಔಷಧ ವ್ಯಾಪಾರಿಗಳು ಸಭೇಯಲ್ಲಿ ಉಪಸ್ಥಿತರಿದ್ದರು.    
Please follow and like us:
error

Related posts

Leave a Comment