ಧಾರ್ಮಿಕ ಭಾವನೆಗಳಿಗೆ ಧಕ್ಕೆ : ಮುಸ್ಲಿಂ ಸಂಘಟನೆಗಳ ತೀವ್ರ ಪ್ರತಿಭಟನೆ

ಕೊಪ್ಪಳ : ಚಿತ್ರದುರ್ಗದ ಹರೀಶ್ ಬಿ.ಹರಿ ಭಜರಂಗದಳ ತನ್ನ ಫೇಸ್ ಬುಕ್ ಐಡಿಯಲ್ಲಿ ಮುಸ್ಲಿಂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಇಸ್ಲಾಂ ಧರ್ಮದ ಪವಿತ್ರದ ಧಾರ್ಮಿಕ ಸ್ಥಳವಾದ ಮಕ್ಕಾದ ಕಾಬಾದ ಮೇಲೆ ಹಂದಿ ಪ್ರಾಣಿಯನ್ನು ಬಣ್ಣಿಸಿ ಇನ್ನೂ ಹಲವಾರು ಚಿತ್ರಗಳಾದ ಇಸ್ಲಾಂ ಧರ್ಮದ ಧಾರ್ಮಿಕ ಗ್ರಂಥವಾದ ಪವಿತ್ರ ಕುರ್ ಆನ್ ನ್ನು ಕಾಲಿನಿಂದ ತುಳಿಯುವ ಚಿತ್ರ ಹಾಗೂ iಹಾತ್ಮಾ ಗಾಂಧೀ ಹಾಗೂ  ಇಸ್ಲಾಂ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ಅಪಲೋಡ್ ಮಾಡಿದ್ದನ್ನು ಖಂಡಿಸಿ ನಗರದ ಮುಸ್ಲಿಂ ಸಂಘಟನೆಗಳು ಮೌನ ಪ್ರತಿಭಟನೆ ನಡೆಸಿದರು. 
ಗಡಿಯಾರ್ ಕಂಬದ ಸರ್ಕಲ್ ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ದುಷ್ಕೃತ್ಯವನ್ನು ಖಂಡಿಸುವ ಮತ್ತು ಹರೀಶ್‌ನನ್ನು ಬಂಧಿಸಲು ಆಗ್ರಹಿಸುವ ಭಿತ್ತಿಚಿತ್ರಗಳನ್ನು ಪ್ರದರ್ಶಿಸಲಾಯಿತು. 
ಉದ್ದೇಶ ಪೂರ್ವಕವಾಗಿ ಕೋಮುಸೌಹಾರ್ಧತೆಗೆ ಮತ್ತು ಭಾರತೀಯ ಏಕತೆಗೆ ಧಕ್ಕೆ ಉಂಟಾಗುವಂತೆ , ಅಲ್ಪಸಂಖ್ಯಾತರ ಮೇಲೆ ಅವಾಚ್ಯ ಶಬ್ದಗಳನ್ನು ಬಳಸಿ ಅವಹೇಳನಕಾರಿ ಚಿತ್ರಗಳನ್ನು ಮತ್ತು ಮಾತುಗಳನ್ನು ಅಪಲೋಡ್ ಮಾಡಿರುವುದು ಮುಸ್ಲಿಂ ಬಾಂಧವರಿಗೆ ನೋವನ್ನುಂಟು ಮಾಡಿದೆ. ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಹಾಗೂ ಕಳೆದ ವರ್ಷ ಹೊಸಪೇಟೆಯಲ್ಲಿ ಇಂತಹದೇ ಘಟನೆ ಜರುಗಿದೆ.  ಇಂತಹ ಘಟನೆಗಳು ಪದೇ ಪದೇ ಜರುಗುತ್ತಿರುವದು ಖಂಡಿಸಿ ಮತ್ತು ಅವುಗಳು ಮರುಕಳಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅಲ್ಲದೇ ಧಾರ್ಮಿಕ ಭಾವನೆಗಳಿಗೆ ಘಾಸಿಯನ್ನುಂಟು ಮಾಡುತ್ತಿರುವ ಭಜರಂಗದಳ ಹಾಗೂ ಇತರ ಕೋಮುವಾದಿ ಸಂಘ ಸಂಸ್ಥೆಗಳನ್ನು ನಿಷೇಧಗೊಳಿಸಬೇಕೆಂದು ಆಗ್ರಹಿಸಿದರು.
ನಗರ ಪೋಲೀಸ್ ಠಾಣೆಯಲ್ಲಿ ಹರೀಶ್. ಭಜರಂಗದಳದ ವಿರುದ್ದ ದೂರು ದಾಖಲಿಸಲಾಯಿತು. ನಂತರ ಅಶೋಕ್ ಸರ್ಕಲ್ ನಲ್ಲಿ ಸೇರಿದ ಪ್ರತಿಭಟನಾಕಾರರು ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು. ಸ್ಥಳಕ್ಕೆ ಆಗಮಿಸಿದ  ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿ ಮುಂದಿನ ಕ್ರಮಕ್ಕೆ ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ  ಅಂಜುಮನ್ ಕಮಿಟಿಯ ಅಧ್ಯಕ್ಷರಾದ ಕಾಟನ್ ಪಾಷಾ, ಮಾನ್ವಿ ಪಾಷಾ, ಖಾಜಾಹುಸೇನ ಬನ್ನಿಕೊಪ್ಪ, ಬಾಷುಸಾಬ ಖತೀಬ್, ಚಿಕನ್ ಪೀರಾ, ಮೆಹಬೂಬ ಮಚ್ಚಿ, ಮೌಲಾಹುಸೇನ ಜಮೇದಾರ,ಮೆಹಬೂಬ ಅರಗಂಜಿ, ಮಹ್ಮದ ಹುಸೇನ ಮಂಡಲಗಿರಿ, ಅಪ್ಸರ್ ಹುಣಸಿಮರದ ವಕೀಲರು, ಮಹೆಬೂಬ ಪಾಷಾ ವಕೀಲರು, ಎಂ.ಡಿ.ಅಬೂಬ್ ಕರ್, ಗೌಸಸಾಬ ಸರ್ದಾರ್, ಎಂ.ಡಿ.ಜೀಲಾನ್, ಮೆಹಮೂದ್ ಹುಸೇನಿ. ಅಜೀಜ್ ಕುಷ್ಟಗಿ. ಅಜೀಮ್, ಫಜಲ್ ಖಾನ್, ಜುಬೇರ್, ಸಲೀಂ ಖಾದ್ರಿ, ಸಯ್ಯದ್ ಹಷ್ಮತ್ ಹುಸೇನಿ, ಅಬ್ದುಲ್ ಅಜೀಜ್, ಎಚ್.ವಿ.ರಾಜಾಬಕ್ಷಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 

Leave a Reply