೮೮೨ ನೇ ಬಸವ ಜಯಂತಿಯ ಕಾರ್ಯಕ್ರಮ

 ಕೊಪ್ಪಳ : ದಿ: ೧೭ ರಿಂದ ೨೧ ರವರೆಗೆ ನಡೆಯುವ ಬಸವತತ್ವ ತರಬೇತಿ ಕಮ್ಮಟ ಕಾರ್ಯಕ್ರಮವನ್ನು ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾಗಣ ಕೊಪ್ಪಳ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದು ದಿನಾಂಕ ೧೭ ರಿಂದ ಪ್ರತಿದಿನ ಬೆಳಿಗ್ಗೆ ೫:೦೦ ಗಂಟೆಗೆ ಸಾಮೂಹಿಕ ಇಷ್ಟಲಿಂಗ ಪೂಜೆ, ಪೂಜಾ ವಿಧಾನ ಮತ್ತು ಬಸವ ಚಿಂತನ ಪ್ರಭೆ ಕಾರ್ಯಕ್ರಮಗಳು ನಡೆಯುವವು, ಸಾಯಂಕಾಲ ೬:೦೦ ಗಂಟೆಗೆ ಶರಣ ವಿಶ್ವನಾಥ ನಿಲೂಗಲ್ ಇವರಿಂದ ಉದ್ಘಾಟನೆಗೊಳ್ಳಲಿದ್ದು, ಧ್ವಜಾರೋಹಣವನ್ನು  ಶರಣೆ ಅನ್ನಪೂರ್ಣಮ್ಮ ಬಾಪೂರಮಠ ಹೊಸಪೇಟೆ, ಅಧ್ಯಕ್ಷತೆಯನ್ನು ಶರಣ ಸತೀಶ ಮಂಗಳೂರು, ಅತಿಥಿಗಳಾಗಿ ಶರಣ ಶರಣಬಸಪ್ಪನವರು ಬಿಳಿಎಲಿ, ಶರಣೆ ಶಕುಂತಲಮ್ಮ ಹುಡೇಜಾಲಿಮಠ, ಮುಖ್ಯ ಅತಿಥಿಗಳಾಗಿ ಶರಣ ಡಾ|| ಎಸ್.ಶಿವಾನಂದ ನಿವೃತ್ತ ಪ್ರಾದ್ಯಾಪಕರು ಹೊಸಪೇಟೆ ಇವರು ಲಿಂಗವ್ಯಸನಿ ಜಂಗಮ ಪ್ರೇಮಿ ಎಂಬ ವಿಷಯ ಮಂಡನೆ ಮಾಡಲಿದ್ದು, ಪ್ರಾಸ್ತಾವಿಕ ನುಡಿಗಳನ್ನು ಶಿವಬಸವ ವೀರಾಪೂರ, ಸಂಚಾಲಕತೆಯನ್ನು ಶರಣ ಗುರುರಾಜ ಪಾಟೀಲ ನಡೆಸಿಕೊಡಲಿದ್ದು, ಪ್ರಸಾದ ದಾಸೋಹವನ್ನು ಶರಣೆ ಶೋಭಾ ವೀರಣ್ಣ ಕೊರ್ಲಹಳ್ಳಿ ಇವರು ವಹಿಸಿಕೊಂಡಿರುತ್ತಾರೆ. ಬಸವಾಭಿಮಾನಿಗಳೆಲ್ಲರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಶರಣ ಸುಂಕಪ್ಪನವರು ಅಮರಾಪುರ   ತಿಳಿಸಿದ್ದಾರೆ. 

Related posts

Leave a Comment