ಬೀದಿನಾಟಕ ಪ್ರದರ್ಶನಕ್ಕೆ ಎನ್‌ಜಿಓ ಗಳಿಂದ ಅರ್ಜಿ ಆಹ್ವಾನ.

ಕೊಪ್ಪಳ ಡಿ. ೧೫ (ಕ ವಾ) ಸಮಾಜ ಕಲ್ಯಾಣ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ಕೊಪ್ಪಳ ತಾಲೂಕಿನ ಹೋಬಳಿ ಮಟ್ಟದಲ್ಲಿ ಬೀದಿನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಲು, ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ (ಎನ್‌ಜಿಓ) ದರಪಟ್ಟಿಯನ್ನು ಆಹ್ವಾನಿಸಿದೆ.
      ಆಸಕ್ತ ಅರ್ಹ ಎನ್‌ಜಿಓ ಗಳು ಕಲಾವಿದರ ಸಂಭಾವನೆ, ವೇಷಭೂಷಣ, ಊಟೋಪಚಾರ, ಸಾರಿಗೆ ವೆಚ್ಚ, ಧ್ವನಿವರ್ಧಕ, ಆಮಂತ್ರಣ ಮುದ್ರಣ ಇತ್ಯಾದಿ ವೆಚ್ಚವನ್ನೊಳಗೊಂಡ ದರಪಟ್ಟಿಯನ್ನು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಹಳೆ ಜಿಲ್ಲಾ ಪಂಚಾಯತಿ ಕಟ್ಟಡ, ಕೊಪ್ಪಳ ಇವರಿಗೆ ಡಿ. ೨೨ ರಂದು ಸಂಜೆ ೪-೩೦ ಗಂಟೆಯೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ವಿವರಗಳಿಗೆ ದೂರವಾಣಿ ಸಂ; ೦೮೫೩೯-೨೨೦೫೯೦ ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.

Related posts

Leave a Comment