ಗ್ರಾಮೀಣಾ ಕ್ರೀಡಾಕೂಟ : ಪರಿಷ್ಕೃತ ವೇಳಾಪಟ್ಟಿ ಪ್ರಕಟ

  ೨೦೧೦-೧೧ ನೇ ಸಾಲಿನ ರಾಜ್ಯ ವಲಯದಡಿ ಸಾಮೂಹಿಕ ಕ್ರೀಡಾಕೂಟಗಳನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ಗ್ರಾಮೀಣ ಪ್ರದೇಶಗಳಲ್ಲಿನ ಕ್ರೀಡಾ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ವ್ಹಾಲಿಬಾಲ್ ಕಬಡ್ಡಿ ಕ್ರೀಡೆಗಳನ್ನು ಆಯೋಜಿಸಲಾಗಿದ್ದು. ಈ ಸಾಮೂಹಿಕ ಕ್ರೀಡಾ ಕೂಟಗಳಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾ ಪಟುಗಳು ಈ ಕ್ರೀಡೆಗಳಲ್ಲಿ ಭಾಗವಹಿಸಿ ಕ್ರೀಡಾ ಕೂಟಗಳನ್ನು ಯಶಸ್ವಿಗೊಳಿಸಲು ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿಗಳು ವಿನಂತಿಸಿದ್ದಾರೆ. ಈ ಕ್ರೀಡೆಗಳು ನಡೆಸು ಸ್ಥಳ ಹಾಗೂ ದಿನಾಂಕಗಳನ್ನು ಈ ಹಿಂದೆ ಪ್ರಕಟಿಸಲಾಗಿತ್ತು. ಕಾರಣ ಅಲ್ಪ ಬದಲಾವಣೆ ಮಾಡಿ ಸ್ಥಳ ಮತ್ತು ದಿನಾಂಕಗಳನ್ನು ನಿಗದಿ ಮಾಡಿ ಈ ಕೆಳಗಿನ ವಿವರದ ಪಟ್ಟಿಯಂತೆ ಕ್ರೀಡಾ ಕೂಟಗಳನ್ನು ನಡೆಸಲು ಉದ್ದೇಶಿಸಲಾಗಿದೆ.  
  ನೂತನ ವೇಳಾಪಟ್ಟಿಯನ್ವಯ ಜೂ. ೧೩ ರಂದು ಹುಲಗಿ, ಮುನಿರಾಬಾದ್, ಇಂದರಗಿ, ಹೊಸಹಳ್ಳಿ ಅಗಳಕೇರಾ, ಶಿವಪೂರ, ಬಂಡಿ ಹರ್ಲಾಪುರ ಗ್ರಾ.ಪಂ. ಗಳಿಗೆ ಸಂಬಂಧಪಟ್ಟಂತೆ ಹುಲಿಗಿಯ ತುಂಗಭದ್ರಾ ಪ್ರೌಢಶಾಲೆ ಮೈದಾನದಲ್ಲಿ ಹಾಗೂ  ಕಾತರಕಿ-ಗೂಡ್ಲಾನೂರು, ಕೊಳೂರು, ಹಲಗೇರಿ,  ಹಿರೇಸಿಂದೋಗಿ, ಓಜಿನಹಳ್ಳಿ, ಬಹದ್ದೂರಬಂಡಿ, ಗೊಂಡಬಾಳ. ಗ್ರಾ.ಪಂ. ಗೆ ಸಂಬಂಧಿಸಿದಂತೆ ಕಾತರಕಿ-ಗುಡ್ಲಾನೂರು ಪ.ಪೂ. ಕಾಲೇಜು ಮೈದಾನದಲ್ಲಿ ಕಬಡ್ಡಿ ಕ್ರೀಡಾಕೂಟ ಏರ್ಪಡಿಸಲಾಗಿದೆ.  ಜೂ. ೧೫ ರಂದು ಇರಕಲ್‌ಗಡ, ಕಲ್‌ತಾವರಗೇರಾ, ಹಾಸಗಲ್, ಭಾಗ್ಯನಗರ, ಬೂದಗುಂಪಾ, ಕಿನ್ನಾಳ, ಲೇಬಗೇರಿ ಗ್ರಾ.ಪಂ. ಗೆ ಸಂಬಂಧಿಸಿದಂತೆ ವಾಲಿಬಾಲ್ ಕ್ರೀಡಾಕೂಟವನ್ನು ಇರಕಲ್ಲಗಡಾದ ಪ.ಪೂ. ಕಾಲೇಜು ಮೈದಾನದಲ್ಲಿ, ಜೂ. ೧೮ ರಂದು ಗಿಣಿಗೇರಾ, ಗುಳದಳ್ಳಿ, ಹಿಟ್ನಾಳ, ಕುಣಕೇರಿ, ಹಿರೇಬಗನಾಳ, ಚಿಕ್ಕ ಬೊಮ್ಮನಾಳ,ಮಾದನೂರು. ಗ್ರಾ.ಪಂ. ಗೆ ಸಂಬಂಧಿಸಿದಂತೆ ಕಬಡ್ಡಿ ಕ್ರೀಡಾಕೂಟವನ್ನು ಗಿಣಿಗೇರಾದ ಹಿ.ಪ್ರಾ.ಶಾಲೆ ಮೈದಾನದಲ್ಲಿ. ಜೂ. ೨೦ ರಂದು ಬೆಟಗೇರಿ, ಬಿಸನಳ್ಳಿ ಮತ್ತೂರು, ಬೋಚನಹಳ್ಳಿ ಅಳವಂಡಿ, ಕವಲೂರು, ಹಟ್ಟಿ ಗ್ರಾ.ಪಂ. ಸಂಬಂಧಿಸಿದಂತೆ ಕಬಡ್ಡಿ ಕ್ರೀಡೆಯನ್ನು ಬೆಟಗೇರಿಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಲಾಗಿದೆ.  ಈ ಸಾಮೂಹಿಕ ಕ್ರೀಡಾ ಕೂಟದಲ್ಲಿ ಭಾಗವಹಿಸುವ ಕ್ರೀಡಾ ಪಟುಗಳು ಬೆಳಿಗ್ಗೆ ೯.೩೦ ಗಂಟೆಗೆ ಹಾಜರಾಗಿ ನೊಂದಾಯಿಸಲು ಸೂಚಿಸಲಾಗಿದೆ. ಈ ಸಾಮೂಹಿಕ ಕ್ರೀಡಾ ಕೂಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ವಿನಂತಿಸಿ ಎಲ್ಲಾ ಕನ್ನಡ ದಿನ ಪತ್ರಿಕಗೆಳಲ್ಲಿ ಪ್ರಕಟಿಸಲು ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ :ಮೊ.ಸಂಖ್ಯೆ:೯೯೮೦೮೫೨೭೩೫ ಇವರನ್ನು ಸಂರ್ಕಿಸಬಹುದಾಗಿದೆ.
Please follow and like us:
error