ಓಜನಹಳ್ಳಿ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರ ಯಶಸ್ವಿ.

ಕೊಪ್ಪಳ-15- ತಾಲೂಕಿನ ಓಜನಹಳ್ಳಿ ಗ್ರಾಮದಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆ ಆರೋಗ್ಯ ಘಟಕದಿಂದ ಓಜನಹಳ್ಳಿ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಚಿಕನ ಗುನ್ಯ ರೋಗವು ಉಲ್ಬಣವಾಗಿದ್ದು ಮನಗಂಡು ನವನಿರ್ಮಾಣ ಸೇನೆಯ ಆರೋಗ್ಯ ಘಟಕದ ಜಿಲ್ಲಾಧ್ಯಕ್ಷ ವಿಶ್ವನಾಥ ನಾಲ್ವಾಢ ನೇತೃತ್ವದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿತ್ತು.
ಶಿಬಿರ ಆರಂಭಕ್ಕೆ ಮುನ್ನ ಡಾ. ವಿಶ್ವನಾಥ ನಾಲ್ವಾಡ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ ವಾಗಿಟ್ಟುಕೊಳ್ಳುವುದರಿಂದ ಚಿಕನಗುನ್ಯ ಸೇರಿದಂತೆ ಸೊಳ್ಳೆಗಳಿಂದ ಹರಡುವ ಅನೇಕ ಕಾಯಿಲೆಗಳು ಬರದಂತೆ ತಡೆಗಟ್ಟಲು ಸಾಧ್ಯ ಎಂದರು. ಸಂಘಟನೆಯ ಸಂಚಾಲಕ ವಿಜಯಕುಮಾರ ಕವಲೂರ ಮಾತನಾಡಿ ಸಂಘಟನೆಯು ಜನಪರ ವಿಷಯಗಳನ್ನು ಕೈಗೆತ್ತಿಂಡು ಹೋರಾಟ ಮಾಡುವುದರ ಜೊತೆಗೆ ಜನರ ಆರೋಗ್ಯ ಹಾಗು ಇತ
    ಜಿ. ಪಂ ಸದಸ್ಯೆಯಾದ ಶ್ರೀಮತಿ ವನಿತಾ ಗಡಾದ ಮಾತನಾಡಿ ಪಂಚಾಯತಿ ವ್ಯಾಪ್ತಿಯಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಂಡ ಸಂಘಟನೆಯ ಕಾರ್‍ಯವನ್ನು ಶ್ಲಾಘಿಸಿದರು, ಬರುವ ದಿನಗಳಲ್ಲಿ ಹೆಚ್ಚಿನ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಿ ನಾವುಕೂಡ ಪಾಲ್ಗೊಳ್ಳುತ್ತೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ. ಪಂ ಅಧ್ಯಕ್ಷ ಯಮನೂರಪ್ಪ ನಾಯಕ, ಆದಯ್ಯ ಹೆರೂರ ರಮೇಶ ದೊಡ್ಡಮನಿ, ರೇವಪ್ಪ ಸಾಲ್ಮನಿ, ಮನೂಹರ ಗ್ರಾ. ಪಂ ಸದಸ್ಯರು ಉಪಸ್ಥಿತರಿದ್ದರು,

ರೆ ಸಮಸ್ಯೆಗಳಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಗ್ರಾಮದಲ್ಲಿ ಈ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಬರುವ ದಿನಗಳಲಿ ಇಂತಹ ಶಿಬಿರಗಳನ್ನು ಹೆಚ್ಚಿನ ಸಂಖ್ಯೆಯಯಲ್ಲಿ ಆಯೋಜಿಸಲಾಗುವುದು ಎಂದು ಹೇಳಿದರು.

Please follow and like us:
error