ಶಿವಶಾಂತವೀರ ಶಾಲೆಯಲ್ಲಿ ಮಕ್ಕಳ ಆಕರ್ಷಕ ವೇಷ-ಭೂಷಣ

ಕೊಪ್ಪಳ ಡಿ. ೦೩ : ಕೊಪ್ಪಳ ನಗರದ ಶ್ರೀ ಶಿವಶಾಂತವೀರ ಪಬ್ಲಿಕ್ ಸ್ಕೂಲ್ ವತಿಯಿಂದ ಮಕ್ಕಳಿಗೆ ಇತ್ತೀಚೆಗೆ ಏರ್ಪಡಿಸಲಾಗಿದ್ದ ವೇಷ-ಭೂಷಣ ಸ್ಪರ್ಧೆಯಲ್ಲಿ ವಿವಿಧ ಮಕ್ಕಳು ಹಲವು ಬಗೆಯ ವೇಷ ಧರಿಸಿಕೊಂಡು ಸ್ಪರ್ಧೆಯನ್ನು ಆಕರ್ಷಕಗೊಳಿಸಿದರು.
     ಕೆಲ ಮಕ್ಕಳು ಶಿವಶರಣೆ ಅಕ್ಕಮಹಾದೇವಿಯವರ ವೇಷ ಧರಿಸಿದ್ದರೆ, ಇನ್ನು ಕೆಲವರು ಏಂಜಲ್, ಚಾಚಾ ನೆಹರು, ಟಿಪ್ಪುಸುಲ್ತಾನ್, ಶಕುಂತಲಾ, ಕೃಷ್ಣ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಗವಿಸಿದ್ದೇಶ್ವರ ಸ್ವಾಮೀಜಿ, ಮುಂತಾದವರ ವೇಷ ಭೂಷಣಗಳಿಂದ ಕಂಗೊಳಿಸಿದರು.  ಮಕ್ಕಳ ವಿವಿಧ ವೇಷ-ಭೂಷಣ ಸ್ಪರ್ಧೆಯಲ್ಲಿ ವಿವಿಧ ಬಗೆಗಳಿಂದ ಅಲಂಕೃತಗೊಂಡ ಮಕ್ಕಳು ಸಂಭ್ರಮಿಸಿದರು.
     ಈ ಸಂದರ್ಭದಲ್ಲಿ ಶ್ರೀ ಶಿವಶಾಂತವೀರ ಪಬ್ಲಿಕ್ ಶಾಲೆಯ ಮುಖ್ಯಸ್ಥೆ, ರೋಜಾ ಮೇರಿ, ಸೇರಿದಂತೆ ಶಿಕ್ಷಕಿಯರಾದ ವಿಜಯಾ ಹಿರೇಮಠ, ಗೌರಿ ಮುಂತಾದವರು ಉಪಸ್ಥಿತರಿದ್ದರು.

Leave a Reply