fbpx

ಸಿನೆಮಾ ಅಭಿನಯ ಶಿಬಿರದ ಉದ್ಘಾಟನೆ

ಕೊಪ್ಪಳ-೨೫ ನಾಹತೀಹಳ್ಳಿ ಕ್ರಿಯೆಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ , ನಾಡಿನ ಖ್ಯಾತ ಕವಿ ಎಲ್ ಎನ್ ಮುಕುಂದರಾಜ್ ನಿರ್ದೇಶನ ಮಾಡುತ್ತಿರುವ :ಕಾಡ ಹಾದಿಯ ಹೂಗಳು; ಸಿನೆಮಾಕ್ಕೆ ನಟರ ಆಯ್ಕೆಗಾಗಿ  ಹಾಲ್ಕುರಿಕೆ ಥಿಯೇಟರ್    ಮೂರು ದಿನಗಳ ಸಿನೆಮಾ ಅಭಿನಯ ಶಿಬಿರವನ್ನು ಅಯೋಜಿಸಿದೆ. ೨೬-೪-೨೦೧೪ ರಂದು ಬೆಳಿಗ್ಗೆ ಹತ್ತು ಗಂಟೆಗೆ ಕೊಪ್ಪಳ ಹತ್ತಿರವಿರುವ ಹೂವಿನಾಳದ ಭಾಗೀರಥಮ್ಮ ತರಬೇತಿ ಕೇಂದ್ರದಲ್ಲಿ  ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು ಸಿನೆಮಾ ಶಿಬಿರವನ್ನು ಉದ್ಘಾಟಿಸಲಿದ್ದು, ಎಲ್ ಎನ್‌ಮುಕುಂದರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಖ್ಯಾತ ಕಾದಂಬರಿಕಾರರು ಮತ್ತು ಸಿನೆಮಾ ಸಂಭಾಷಣಾಕಾರರಾದ ಯೋಗೇಶ ಮಾಸ್ತರ್, ನಾಟಕಕಾರರಾದ ಈಶ್ವರ ಹತ್ತಿ, ಕೊಪ್ಪಳದ ಜಿಲ್ಲಾ ಕಾರಗೃಹ ಅಧೀಕ್ಷಕರಾದ ಶಾಂತಾಶ್ರೀ. ಕೊಪ್ಪಳದ ಎಪಿಎಂಸಿ ಸಹಾಯಕ ಕಾರ್ಯದರ್ಶಗಳಾದ ತಿಮ್ಮಣ್ಣ ಗೌಡರ್. ಕನ್ನಡಪ್ರಭ ದಿನ ಪತ್ರಿಕೆಯ ಜಿಲ್ಲಾವರದಿ ಗಾರರಾದ ಸೋಮರೆಡ್ಡಿ ಅಳವಂಡಿ, ಬೂದಗುಂಪಾ ಸಾಯಿಹೋಟಲ್ ಮಾಲೀಕರಾದ ಸಿದ್ದಪ್ಪ. ಹಾಗು ಚಲನಾ ಚಿತ್ರ ರಂಗದ ನಿರ್ದೇಶಕರು, ಕ್ಯಾಮರಮ್ಯಾನ್ , ಸಂಭಾಷಣಾಕಾರರು, ತಂತ್ತಜ್ಞರು ಭಾಗವಹಿಸಲಿದ್ದಾರೆ.
Please follow and like us:
error

Leave a Reply

error: Content is protected !!